Site icon Vistara News

Sachin Tendulkar: ಶಾರ್ಜಾ ಮೈದಾನದ ಸ್ಟ್ಯಾಂಡ್​ಗೆ ಸಚಿನ್​ ತೆಂಡೂಲ್ಕರ್​ ಹೆಸರು

Sachin Tendulkar: The stand of Sharjah Ground is named after Sachin Tendulkar

Sachin Tendulkar: The stand of Sharjah Ground is named after Sachin Tendulkar

ಶಾರ್ಜ: ಕ್ರಿಕೆಟ್​ ದಿಗ್ಗಜ ಸಚಿನ್​ ತೆಂಡೂಲ್ಕರ್​(Sachin Tendulkar)​ ಅವರು ಸೋಮವಾರ(ಎಫ್ರಿಲ್​ 24) ದಂದು 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಅರ್ಧಶತಕದ ಹುಟ್ಟುಹಬ್ಬಕ್ಕೆ ಹಲವು ಸ್ಮರಣೀಯ ಉಡುಗೊರೆ ಮತ್ತು ಗೌರವ ನೀಡಲಾಗಿತ್ತು. ಇದೀಗ ಈ ಪಟ್ಟಿಗೆ ಮತ್ತೊಂದು ಗೌರವ ಸೇರಿಕೊಂಡಿದೆ. ದುಬೈನ ಶಾರ್ಜಾ ಕ್ರಿಕೆಟ್​ ಸಂಸ್ಥೆಯ ಮೈದಾನದ ವೆಸ್ಟ್​​ ಸ್ಟ್ಯಾಂಡ್​ಗೆ ಮಾಸ್ಟರ್​ ಬ್ಲಾಸ್ಟರ್​ ಅವರ ಹೆಸರಿಡಲಾಗಿದೆ.

ಸಚಿನ್​ ಅವರ ಜನ್ಮದಿನದ ಅಂಗವಾಗಿ ಆಯೋಜಿಸಲಾದ ವಿಶೇಷ ಸಮಾರಂಭದಲ್ಲಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ವೆಸ್ಟ್ ಸ್ಟ್ಯಾಂಡ್​ಗೆ ಸಚಿನ್ ತೆಂಡೂಲ್ಕರ್ ಸ್ಟ್ಯಾಂಡ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಸ್ಟ್ಯಾಂಡ್​ ಇನ್ನು ಮುಂದೆ ಸಚಿನ್​ ತೆಂಡೂಲ್ಕರ್​ ಸ್ಟ್ಯಾಂಡ್​ ಎಂದೇ ಹೆಸರಾಗಲಿದೆ ಎಂದು ಶಾರ್ಜಾ ಕ್ರಿಕೆಟ್ ಸ್ಟೇಡಿಯಂನ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ Sachin Tendulkar: ಸಚಿನ್​ ತೆಂಡೂಲ್ಕರ್ ಅವರ ಅಸಾಮಾನ್ಯ ಸಾಧನೆಗಳ ವಿವರ ಇಲ್ಲಿದೆ

ಸಚಿನ್​ ಅವರು 1998ರಲ್ಲಿ ತಮ್ಮ 25ನೇ ಜನ್ಮದಿನಂದು ಶಾರ್ಜಾದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕೋಕಕೋಲ ಕಪ್​ ಫೈನಲ್​ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು. ಈ ಪಂದ್ಯದಲ್ಲಿ ಅವರು 134 ರನ್​ ಸಿಡಿಸಿದ್ದರು. ಅವರ ಈ ಶತಕಕ್ಕೆ 25 ವರ್ಷ ಮತ್ತು ಅವರಿಗೆ 50 ವರ್ಷ ತುಂಬಿದೆ ಈ ದಿನವನ್ನು ಸ್ಮರಣೀಯವಾಗಿಡುವ ನಿಟ್ಟಿನಲ್ಲಿ ಶಾರ್ಜಾ ಕ್ರಿಕೆಟ್ ಮಂಡಳಿ ಸ್ಟೇಡಿಯಂನ ವೆಸ್ಟ್ ಸ್ಟ್ಯಾಂಡ್​ಗೆ ಸಚಿನ್​ ಅವರ ಹೆಸರನ್ನು ಇಟ್ಟಿದೆ.

ಸ್ಟ್ಯಾಂಡ್​ಗೆ ತಮ್ಮ ಹೆಸರಿಟ್ಟಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಸಚಿನ್ ಅವರು “ಈ ಕ್ಷಣ ನಾನು ಅಲ್ಲಿರಬೇಕಿತ್ತು. ಆದರೆ ಪೂರ್ವ ನಿಗದಿತ ಕಾರ್ಯಕ್ರಮದ ನಿಮಿತ್ತ ಅದು ಸಾಧ್ಯವಾಗಲಿಲ್ಲ. ಶಾರ್ಜಾದಲ್ಲಿ ಆಡುವುದು ಯಾವಾಗಲೂ ಉತ್ತಮ ಅನುಭವ ನೀಡುತ್ತದೆ. ಇಲ್ಲಿ ಆಡುವುದೇ ಒಂದು ರೋಮಾಂಚನ. ನಾನು ಎಷ್ಟೇ ಶತಕ ಸಾಧನೆ ಮಾಡಿದ್ದರೂ ಶಾರ್ಜಾದಲ್ಲಿ ಅಂದು ಆಸೀಸ್​ ವಿರುದ್ಧ ಬಾರಿಸಿದ ಶತಕ ಎಂದಿಗೂ ಮರೆಯಲಾಗದು ಅದುವೇ ನನ್ನ ಕ್ರಿಕೆಟ್​ ಜೀವನದ ಶ್ರೇಷ್ಠ ಇನಿಂಗ್ಸ್​” ಈ ಸ್ಮರಣೀಯ ದಿನದಂದು ನನಗೆ ಇಷ್ಟು ದೊಡ್ಡ ಗೌರವ ನೀಡಿದ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ ಮತ್ತು ಅವರ ತಂಡಕ್ಕೆ ಧನ್ಯವಾದಗಳು” ಎಂದು ಸಚಿನ್​ ಹೇಳಿದ್ದಾರೆ.

ಇದನ್ನೂ ಓದಿ Sachin Tendulkar Birthday: ಸವ್ಯಸಾಚಿ ಸಚಿನ್ ತೆಂಡೂಲ್ಕರ್​ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ

“ಶಾರ್ಜಾ ಕ್ರಿಕೆಟ್ ಸ್ಟೇಡಿಯಂ ಅತಿ ಹೆಚ್ಚು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಗಿನ್ನಿಸ್​ ದಾಖಲೆಯನ್ನು ಹೊಂದಿದೆ. ಈ ಮೈದಾನ ಕ್ರಿಕೆಟ್ ಇತಿಹಾಸದ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಕ್ರಿಕೆಟ್​ಗೆ ಸಚಿನ್‌ ನೀಡಿದ ಕೊಡುಗೆಗಳಿಗೆ ಕೃತಜ್ಞತೆ ಹೇಳಲು ಇದೊಂದು ಸಣ್ಣ ಪ್ರಯತ್ನ” ಎಂದು ಶಾರ್ಜಾ ಸ್ಟೇಡಿಯಂನ ಸಿಇಒ ಖಲಾಫ್ ಬುಖಾತಿರ್ ಹೇಳಿದ್ದಾರೆ. ಇದಲ್ಲದೆ ಸಿಡ್ನಿ ಕ್ರಿಕೆಟ್ ಮೈದಾನದ ಗೇಟ್​ಗೂ “ತೆಂಡೂಲ್ಕರ್ ಗೇಟ್ಸ್” ಎಂದು ಹೆಸರಿಡಲಾಗಿತ್ತು.​

Exit mobile version