Site icon Vistara News

Sachin Tendulkar: ಬಿಸಿಸಿಐ ಅಧ್ಯಕ್ಷರಾಗಲಿದ್ದಾರಾ ಸಚಿನ್​ ತೆಂಡೂಲ್ಕರ್​?

Sachin Tendulkar's advice to maintain the balance of ODI cricket

Sachin Tendulkar: Will Sachin Tendulkar become BCCI President?

ಮುಂಬಯಿ: ಬಿಸಿಸಿಐನ ಮುಂದಿನ ಅಧ್ಯಕ್ಷರಾಗುವ ಕುರಿತು ಸಚಿನ್ ತೆಂಡೂಲ್ಕರ್ ಅವರು ನೀಡಿದ ಪ್ರತಿಕ್ರಿಯೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗಿದೆ.

ಇಂಡಿಯಾ ಟುಡೇ ನಡೆಸಿದ ಸಂದರ್ಶನವೊಂದರಲ್ಲಿ ಸಚಿನ್​ ಅವರಿಗೆ ಬಿಸಿಸಿಐನ ಮುಂದಿನ ಅಧ್ಯಕ್ಷರಾಗುವ ಕುರಿತು ಪ್ರಶ್ನೆ ಕೇಳಲಾಗಿದೆ. ಇದಕ್ಕೆ ನಗುತ್ತಲೇ ಉತ್ತರ ನೀಡಿದ ಸಚಿನ್​, “ನಾನು ರೋಜರ್ ಬಿನ್ನಿ ಮತ್ತು ಸೌರವ್ ಗಂಗೂಲಿ(Sourav Ganguly) ಅವರಂತೆ ವೇಗವಾಗಿ ಬೌಲಿಂಗ್ ನಡೆಸುವುದಿಲ್ಲ. ಗಂಗೂಲಿ ಅವರು ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಬಗ್ಗೆ ನನ್ನ ಬಳಿ ಮಾತನಾಡುತ್ತಿದ್ದರು. ಆದರೆ ಅವರಿಗೆ ಬೆನ್ನುನೋವು ಕಾಣಿಸಿಕೊಂಡಿತು. ನಾನು ಗಂಟೆಗೆ 140 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವುದಿಲ್ಲ” ಎಂದು ತಲೆಗೆ ಹುಳ ಬಿಟ್ಟಂತೆ ಉತ್ತರಿಸಿದ್ದಾರೆ.

ಇದನ್ನೂ ಓದಿ Sachin Tendulkar: ಗೋವಾದಲ್ಲಿ ‘ದಿಲ್ ಚಾಹ್ತಾ ಹೈ’ ಎಂದ ಸಚಿನ್​ ತೆಂಡೂಲ್ಕರ್​

ಸಚಿನ್​ ಅವರ ಈ ಉತ್ತರ ಕೇಳಿದ ಸಂದರ್ಶಕ ಏನೂ ತಿಳಿಯದೆ ಒಂದು ಕ್ಷಣ ಮೌನವಾಗಿದ್ದರು. ಬಳಿಕ ಕ್ರಿಕೆಟ್​ಗೆ ಸಂಬಂಧಿಸಿದ ಬೇರೆ ಪ್ರಶ್ನೆಗಳನ್ನು ಕೇಳಿದ್ದಾರೆ. ಕೊನೆಗೂ ಸಚಿನ್​ ಹೇಳಿದ ಉತ್ತರ ಮಾತ್ರ ಬಿಡಿಸಲಾಗದ ಒಗಟಿನಂತೆ ಉಳಿದಿದೆ.

Exit mobile version