Site icon Vistara News

ಈಗಿನ ಐಸಿಸಿ ನಿಯಮ ಆಗ ಇದ್ದಿದ್ದರೆ ಸಚಿನ್​ 200 ಶತಕ ಬಾರಿಸುತ್ತಿದ್ದರು ಎಂದ ಲಂಕಾ ಲೆಜೆಂಡ್​

Sachin Tendulkar

ಮುಂಬಯಿ: ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಸನತ್ ಜಯಸೂರ್ಯ(Sanath Jayasuriya) ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ನಿಯಮಗಳಲ್ಲಿ ಬದಲಾವಣೆಗೆ ಕರೆ ನೀಡಿದ್ದಾರೆ. ಸಾರ್ವಕಾಲಿಕ ಶ್ರೇಷ್ಠ ಆರಂಭಿಕ ಬ್ಯಾಟರ್​ಗಳಲ್ಲಿ ಒಬ್ಬರಾದ ಜಯಸೂರ್ಯ ಅವರು ತಮ್ಮ ಅಭಿಪ್ರಾಯವನ್ನು ಟ್ವಿಟರ್‌ ಎಕ್ಸ್​ನಲ್ಲಿ ವ್ಯಕ್ತಪಡಿಸಿದ್ದಾರೆ. ಜತೆಗೆ ಪ್ರಸಕ್ತ ಕ್ರಿಕೆಟ್​ನಲ್ಲಿರುವ ನಿಯಮಗಳು(ICC rules) ಅಂದು ಇರುತ್ತಿದ್ದರೆ ಸಚಿನ್ ತೆಂಡೂಲ್ಕರ್((Sachin Tendulkar) 200 ಶತಕಗಳನ್ನು ಬಾರಿಸುತ್ತಿದ್ದರು ಎಂದು ಹೇಳಿದ್ದಾರೆ.

ಜಯಸೂರ್ಯ ಅವರು ಏಕದಿನ ಕ್ರಿಕೆಟ್‌ನಲ್ಲಿ ಎರಡು ಹೊಸ ಚೆಂಡುಗಳ ಬಳಕೆಯ ಬಗ್ಗೆ ಮಾತನಾಡುವ ವೇಳೆ ಸಚಿನ್​ ಅವರ ಬಗ್ಗೆ ಹೇಳಿದರು. “ಈಗ ಏಕದಿನ ಕ್ರಿಕೆಟ್​ನಲ್ಲಿ ಎರಡು ಹೊಸ ಚೆಂಡುಗಳನ್ನು ನೀಡಲಾಗುತ್ತಿದೆ. ನಿಯಮಗಳನ್ನು ಸಡಿಲಿಕೆ ಮಾಡಲಾಗಿದೆ. ಈಗಿನ ನಿಯಮಗಳು ಬ್ಯಾಟರ್​ಗಳಿಗೆ ಹೆಚ್ಚಿನ ಅವಕಾಶ ನೀಡುತ್ತದೆ. ಈಗ ಬ್ಯಾಟರ್​ಗೆ ಮೂರು ರಿವ್ಯೂ ಅವಕಾಶ ಇದೆ. ಒಂದು ವೇಳೆ ಸಚಿನ್ ತೆಂಡೂಲ್ಕರ್ ಆಡುವ ಸಮಯದಲ್ಲಿ ಮೂರು ರಿವ್ಯೂ ಅವಕಾಶವಿದ್ದರೆ ಅವರು ಇನ್ನೂ ಹೆಚ್ಚಿನ ರನ್​ ಬಶರಿಸುತ್ತಿದ್ದರು ಎಂದು ಸನತ್​ ಜಯಸೂರ್ಯ ಹೇಳಿದ್ದಾರೆ.

ಐಸಿಸಿ ಕ್ರಿಕೆಟ್ ಮಂಡಳಿಯು 2011 ರಲ್ಲಿ ಈ ನಿಯಮವನ್ನು ಪರಿಚಯಿಸಿತ್ತು. 2 ಹೊಸ ಚೆಂಡುಗಳನ್ನು ನೀಡುವ ನಿಯಮವನ್ನು ಜಾರಿಗೆ ತಂದಿತ್ತು. ಒಂದು ಚೆಂಡನ್ನು ಕೇವಲ 25 ಓವರ್‌ಗಳಿಗೆ ಬಳಸಲಾಗುತ್ತಿರುವುದರಿಂದ ಚೆಂಡನ್ನು ಮತ್ತು ಅದರ ಆಕಾರವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡಿತು. ಚೆಂಡಿನ ಗಡಸುತನವನ್ನು ಉಳಿಸಿಕೊಳ್ಳುವುದರೊಂದಿಗೆ, ಬ್ಯಾಟರ್‌ಗಳು ಸಂಪೂರ್ಣ ಪ್ರಯೋಜನವನ್ನು ಪಡೆಯುವಂತಾಯಿತು. ಹೀಗಾಗಿ ಏಕದಿನ ಕ್ರಿಕೆಟ್​ನಲ್ಲಿ ಸರಾಸರಿ ಸ್ಕೋರ್‌ಗಳಲ್ಲಿ ಏರಿಕೆ ಕಾಣಲು ಪ್ರಾರಂಭವಾಯಿತು.

ಇದನ್ನೂ ಓದಿ Rachin Ravindra : ಮಗನ ಹೆಸರಲ್ಲಿರುವುದು ಸಚಿನ್​- ದ್ರಾವಿಡ್ ಅಲ್ಲ, ರಚಿನ್ ಅಪ್ಪ ಯೂಟರ್ನ್​

ವಕಾರ್ ಯೂನಿಸ್ ಮನವಿಗೆ ಬೆಂಬಲ ಸೂಚಿಸಿದ ಜಯಸೂರ್ಯ

ಕೆಲ ದಿನಗಳ ಹಿಂದೆ ಪಾಕಿಸ್ತಾನದ ಮಾಜಿ ಆಟಗಾರ ವಕಾರ್ ಯೂನಿಸ್, ಏಕದಿನ ಕ್ರಿಕೆಟ್ ಬ್ಯಾಟರ್‌ಗಳಿಗೆ ತುಂಬಾ ಸ್ನೇಹಿಯಾಗಿದೆ. ಹೀಗಾಗಿ ಐಸಿಸಿ 2 ಹೊಸ ಚೆಂಡುಗಳ ನಿಯಮವನ್ನು 30 ಓವರ್‌ಗಳ ನಂತರ 2ನೇ ಚೆಂಡನ್ನು ನೀಡಬೇಕು. ರಿವರ್ಸ್‌ಸ್ವಿಂಗ್ ಕಲೆಯನ್ನು ಉಳಿಸಿ” ಎಂದು ಐಸಿಸಿಗೆ ಮನವಿ ಮಾಡಿದ್ದರು.

“ನಾನು ವಕಾರ್ ಯೂನಿಸ್ ಅವರು ಹೇಳಿದಂತೆ ಕೆಲವು ಬದಲಾವಣೆಗೆ ಸಮ್ಮತಿ ಸೂಚಿಸುತ್ತೇನೆ. ಒಂದೊಮ್ಮೆ ಸಚಿನ್​ ತೆಂಡೂಲ್ಕರ್ ಅವರಿಗೆ ಎರಡು ಚೆಂಡಿನಲ್ಲಿ ಬ್ಯಾಟಿಂಗ್ ಮಾಡುವ ಅವಕಾಶವಿರುತ್ತಿದ್ದರೆ, ಪ್ರಸ್ತುತ ಪವರ್ ಪ್ಲೇ ನಿಯಮಗಳ ಪ್ರಕಾರ ಅವರ ರನ್ ಮತ್ತು ಶತಕಗಳು ದ್ವಿಗುಣಗೊಳ್ಳುತ್ತಿದ್ದವು” ಎಂದು ಜಯಸೂರ್ಯ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಸಚಿನ್ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಡಿದ್ದು ಇದೇ ದಿನ

ಸಚಿನ್​ ತೆಂಡೂಲ್ಕರ್​ ಅವರು ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಇದೇ ದಿನ. ನವೆಂಬರ್​ 15, 1989ರಲ್ಲಿ ಸಚಿನ್​ ಅವರು ಪಾಕಿಸ್ತಾನ ವಿರುದ್ಧ ಟೆಸ್ಟ್​ ಆಡುವ ಮೂಲಕ ಟೀಮ್​ ಇಂಡಿಯಾಕ್ಕ ಪದಾರ್ಪಣೆ ಮಾಡಿದರು. ಕರಾಚಿಯಲ್ಲಿ ನಡೆದಿದ್ದ ಈ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತ್ತು. ಸಚಿನ್​ ಅವರು ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಮಾತ್ರ ಬ್ಯಾಟಿಂಗ್​ ಅವಕಾಶ ಪಡೆದಿದ್ದರು. 6ನೇ ಕ್ರಮಾಂಕದಲ್ಲಿ ಆಡಿದ ಸಚಿನ್​ 2 ಬೌಂಡರಿ ನೆರವಿನಿಂದ 15 ರನ್​ ಬಾರಿಸಿದ್ದರು.

ಇದನ್ನೂ ಓದಿ IND vs NZ: ಸಚಿನ್​,ರೋಹಿತ್ ದಾಖಲೆ​ ಮುರಿಯಲಿದ್ದಾರಾ ಕೊಹ್ಲಿ,ರಚಿನ್​?

ಕ್ರಿಕೆಟ್​ ಆಟಗಾರರಿಗೆ ಸ್ಫೂರ್ತಿ

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Exit mobile version