ಹೊಸದಿಲ್ಲಿ: ಈಗ ನಾವು ಟಿ20 ಕ್ರಿಕೆಟ್ನ ಮೇನಿಯಾದಲ್ಲಿದ್ದೇವೆ. ಕ್ಷಿಪ್ರವಾಗಿ ಮುಗಿಯುವ ಹಾಗೂ ಬೌಂಡರಿ ಸಿಕ್ಸರ್ಗಳಿಂದಲೇ ಅಬ್ಬರಿಸುವ ಈ ಮಾದರಿಯ ಬಗ್ಗೆ ಹೆಚ್ಚಿನ ಆಸಕ್ತಿ ಶುರುವಾಗಿದೆ. ಈ ಮಾದರಿಯ ಅಬ್ಬರದ ನಡುವೆ ಏಕ ದಿನ ಕ್ರಿಕೆಟ್ನ ಸ್ವರೂಪದಲ್ಲೂ ಬದಲಾವಣೆಗಳಾಗುತ್ತಿವೆ. ಏಕ ದಿನ ಮಾದರಿಯೂ ಬ್ಯಾಟರ್ಗಳ ಸ್ವರ್ಗ ಎನಿಸಿಕೊಳ್ಳುತ್ತಿದೆ. ಈ ಬಗ್ಗೆ ಭಾರತ ತಂಡದ ಮಾಜಿ ಆಟಗಾರ ಹಾಗೂ ಸಚಿನ್ ತೆಂಡೂಲ್ಕರ್ ಕಳವಳ ವ್ಯಕ್ತಪಡಿಸಿದ್ದಾರೆ. ಏಕ ದಿನ ಕ್ರಿಕೆಟ್ ಬ್ಯಾಟರ್ ಹಾಗೂ ಬೌಲರ್ಗಳಿಬ್ಬರಿಗೂ ನೆರವಾಗುವಂತಿರಬೇಕು ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮೂರು ಮಾದರಿಯ ಕ್ರಿಕೆಟ್ ವಿಭಿನ್ನವಾಗಿದೆ. ಟೆಸ್ಟ್ಗಳು ದೀರ್ಘ ಕಾಲ ನಡೆದರೆ, ಟಿ20 ಕಣ್ಣು ಮಿಟುಕಿಸುವುದರೊಳಗೆ ಮುಕ್ತಾಯಗೊಳ್ಳುತ್ತದೆ. ಆದರೆ, ಪ್ರೇಕ್ಷಕರಿಗೆ ಹತ್ತಿರದಿಂದ ವಿಶ್ಲೇಷಣೆ ಮಾಡಲು ಸಾಧ್ಯವಾಗುವುದು ಏಕ ದಿನ ಕ್ರಿಕೆಟ್ ಮಾತ್ರ. ಹೀಗಾಗಿ ಅದು ಬ್ಯಾಟರ್ಗಳಿಗೆ ಮಾತ್ರ ಪೂರಕವಾಗಿ ಇರಬಾರದು. ಈಗಿನ ಪರಿಸ್ಥಿತಿ ನೋಡಿದರೆ ಬ್ಯಾಟರ್ಗಳೇ ಹೆಚ್ಚು ಮಿಂಚುತ್ತಿದ್ದಾರೆ ಎಂದು ಅವರು ಹೇಳಿದರು.
ಬೌಲರ್ಗಳಿಗೂ ಅನುಕೂಲ ಮಾಡಿ
ಬೌಲರ್ಗಳಿಗೂ ಏಕ ದಿನ ಕ್ರಿಕೆಟ್ನಲ್ಲಿ ಹೆಚ್ಚು ಅವಕಾಶಗಳು ಇರಬೇಕು. ಪ್ರಸ್ತುತ ಇರುವ ನಿಯಮಗಳು ಬ್ಯಾಟರ್ಗಳಿಗೆ ಹೆಚ್ಚು ಅನುಕೂಲಕರವಾಗಿದೆ. ಫಿಲ್ಡಿಂಗ್ ಮಿತಿಯು ಬ್ಯಾಟರ್ಗಳಿಗೆ ಹೆಚ್ಚು ರನ್ಗಳನ್ನು ಬಾರಿಸಲು ನೆರವಾಗುತ್ತಿದೆ. ಇದರಿಂದ ಬೌಲರ್ಗಳ ಮೇಲಿನ ಸವಾಲು ಹೆಚ್ಚಾಗುತ್ತದೆ ಎಂದು ಅವರು ಹೇಳಿದರು.
ಇದನ್ನೂ ಓದಿ ವ: ವIPL 2023: ಮಗನ ಚೊಚ್ಚಲ ಐಪಿಎಲ್ ವಿಕೆಟ್ ಬಗ್ಗೆ ತಂದೆ ಸಚಿನ್ ತೆಂಡೂಲ್ಕರ್ ಹೇಳಿದ್ದೇನು?
25 ಓವರ್ಗಳ ಒಳಗೆ ಎರಡು ಹೊಸ ಚೆಂಡುಗಳನ್ನು ತೆಗೆದುಕೊಳ್ಳುವುದರಿಂದ ಬೌಲರ್ಗಳಿಗೆ ಪರಿಣಾಮಕಾರಿ ಬೌಲಿಂಗ್ ನಡೆಸಲು ಸಾಧ್ಯವಾಗುವುದಿಲ್ಲ. ಒಂದು ಚೆಂಡು ಕೇವಲ 12ರಿಂದ 13 ಓವರ್ಗಳಲ್ಲಿ ಮುಕ್ತಾಯಗೊಳ್ಳುತ್ತದೆ. ಚೆಂಚು ಮೃದುವಾಗುವ ವೇಳೆಯಲ್ಲಿ ಹೊಸ ಚೆಂಡನ್ನು ತೆಗೆದುಕೊಳ್ಳಲಾಗುತ್ತದೆ. ಇದರಿಂದ ಬೌಲರ್ಗಳಿಗೆ ರಿವರ್ಸ್ ಸ್ವಿಂಗ್ನ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಸಚಿನ್ ತೆಂಡೂಲ್ಕರ್ ಹೇಳಿದರು.
ಎರಡು ಇನಿಂಗ್ಸ್ಗಳ ಪಂದ್ಯವಾಡಬೇಕು
ಸಚಿನ್ ತೆಂಡೂಲ್ಕರ್ ಅವರು ಏಕ ದಿನ ಪಂದ್ಯವನ್ನೂ ಎರಡು ಇನಿಂಗ್ಸ್ನಲ್ಲಿ ಆಡಿಸುವಂತೆ ಹೇಳಿದ್ದಾರೆ. 25 ಓವರ್ಗಳ ತಲಾ ಎರಡು ಇನಿಂಗ್ಸ್ಗಳನ್ನು ಆಡಿಸುವಂತೆ ಸಲಹೆ ಕೊಟ್ಟಿದ್ದಾರೆ. ಒಂದು ತಂಡ ಮೊದಲು 25 ಓವರ್ಗಳ ಆಟವನ್ನು ಆಡಬೇಕು. ಬಳಿಕ ಎದುರಾಳಿ ತಂಡ ಬ್ಯಾಟ್ ಮಾಡಬೇಕು. ಬಳಿಕ ಅಲ್ಲಿಂದಲೇ ಮುಂದಿನ ಇನಿಂಗ್ಸ್ ಶುರು ಮಾಡಬೇಕು ಎಂದು ಸಚಿನ್ ಹೇಳಿದ್ದಾರೆ.