Site icon Vistara News

Sara Tendulkar : ಲಂಡನ್​ನಲ್ಲಿ ಪಠಾಣ್​ ಸಿನಿಮಾ ವೀಕ್ಷಿಸಿದ ಸಚಿನ್​ ತೆಂಡೂಲ್ಕರ್​ ಪುತ್ರಿ ಸಾರಾ

sara tendulkar

#image_title

ಲಂಡನ್​ : ಸಚಿನ್​ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ (Sara Tendulkar) ಕೆಲವು ದಿನಗಳಿಂದ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಭಾರತ ತಂಡದ ಆರಂಭಿಕ ಬ್ಯಾಟರ್​ ಶುಭ್​ಮನ್​ ಗಿಲ್. ಅವರಿಬ್ಬರೂ ವರ್ಷಗಳ ಹಿಂದೆ ಡೇಟಿಂಗ್​ ಮಾಡುತ್ತಿದ್ದರು ಎಂಬ ಕಾರಣಕ್ಕೆ ಶುಭ್​ಮನ್​ ಶತಕ ಬಾರಿಸಿದಾಗಲೆಲ್ಲ ಸಾರಾ ಹೆಸರನ್ನು ಉಲ್ಲೇಖಿಸಲಾಗುತ್ತಿದೆ. ಇದೀಗ ಸಾರಾ ತೆಂಡೂಲ್ಕರ್​ ಲಂಡನ್​ನಲ್ಲಿ ಪಠಾಣ್​ ಸಿನಿಮಾ ನೋಡಿದ್ದು ಈ ಮೂಲಕವೂ ಸುದ್ದಿಯಾಗಿದ್ದಾರೆ. ಶಾರುಖ್​ ಖಾನ್​ ನಿರ್ಮಾಣದ ಬಾಲಿವುಡ್​ ಸಿನಿಮಾ ಜಗತ್ತಿನಾದ್ಯಂತ ಬಾಕ್ಸ್ ಆಫೀಸ್​ನಲ್ಲಿ ಧೂಳೆಬ್ಬಿಸಿದ್ದು ಅವರ ಅಭಿಮಾನಿಗಳ ಪಾಲಿಗೆ ಖುಷಿಯ ವಿಚಾರ ಎನಿಸಿಕೊಂಡಿದೆ. ಸಾರಾ ತೆಂಡೂಲ್ಕರ್​ ಕೂಡ ಶಾರುಖ್​ ಅಭಿಮಾನಿಯಾಗಿದ್ದು ನಾಲ್ಕು ವರ್ಷಗಳ ಬಳಿಕ ಬಿಡುಗಡೆಯಾದ ಅವರ ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ.

ಲಂಡನ್​ನಲ್ಲಿ ತಾವು ಪಠಾಣ್​ ಸಿನಿಮಾ ನೋಡಿದ ಚಿತ್ರವನ್ನು ಸಾರಾ ತೆಂಡೂಲ್ಕರ್​ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ತಮ್ಮ ಜತೆಗೆ ಸಿನಿಮಾ ನೋಡುವುದಕ್ಕೆ ಗೆಳತಿಯರನ್ನು ಕೂಡ ಅವರು ಕರೆದುಕೊಂಡು ಹೋಗಿದ್ದಾರೆ. ಶಾರುಖ್​ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.

ಇದನ್ನೂ ಓದಿ : Shubhman Gill | ಶುಭ್​ಮನ್​ ಗೆಳತಿ ಯಾರು? ಸಾರಾ ಅಲಿಖಾನ್ ಅಥವಾ ಸಾರಾ ತೆಂಡೂಲ್ಕರ್​?

ಸಾರಾ ಪ್ರಸ್ತುತ ಲಂಡನ್‌ನ ಯೂನಿವರ್ಸಿಟಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು ಅಲ್ಲಿಂದ ಮೆಡಿಸಿನ್‌ನಲ್ಲಿ ಪದವಿಯನ್ನೂ ಪಡೆದಿದ್ದಾರೆ. ಅವರು ಕಳೆದ ವರ್ಷ ಭಾರತಕ್ಕೆ ಮರಳಿದರು ಮತ್ತು ಈಗ ಅಧ್ಯಯನಕ್ಕಾಗಿ ಹಿಂತಿರುಗಿದ್ದಾರೆ.

Exit mobile version