Site icon Vistara News

Sachin Tendulkar: ಕೊಹ್ಲಿ ಪುತ್ರನಿಗೆ ಸಚಿನ್ ತೆಂಡೂಲ್ಕರ್​ ಇಟ್ಟಿದ್ದಾರೆ ಈ ಕ್ಯೂಟ್ ಹೆಸರು!

sachin tendulkar virat kohli

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(Virat Kohli) ಪತ್ನಿ ಅನುಷ್ಕಾ ಶರ್ಮಾ(Anushka Sharma) ಎರಡನೇ ಮಗುವಿಗೆ ಜನ್ಮ ನೀಡಿದ್ದಾರೆ. ಫೆಬ್ರವರಿ 15ರಂದೇ ಗಂಡು ಮಗುವಿಗೆ ಅನುಷ್ಕಾ ಜನ್ಮ ನೀಡಿದ್ದು ಈ ಸಂತಸದ ಸುದ್ದಿಯನ್ನು ವಿರಾಟ್​ ಮಂಗಳವಾರ(ಫೆ.20) ಇನ್​ಸ್ಟಾಗ್ರಾಮ್​ ಪೋಸ್ಟ್ ಮಾಡುವ ಮೂಲಕ ಪ್ರಕಟಿಸಿದ್ದರು. ಗಂಡು ಮಗುವಿನ ತಂದೆಯಾದ ಖಷಿಯಲ್ಲಿರುವ ಕೊಹ್ಲಿಗೆ ಅವರ ಅಭಿಮಾನಿಗಳು ಸೇರಿ ಅನೇಕ ಮಾಜಿ ಮತ್ತು ಹಾಲಿ ಕ್ರಿಕೆಟಿಗರು ಶುಭಾಶಯ ತಿಳಿಸಿದ್ದಾರೆ. ಆದರೆ ಸಚಿನ್​ ತೆಂಡೂಲ್ಕರ್(Sachin Tendulkar)​ ಮಾಡಿರುವ ಹಾರೈಕೆ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗಿದೆ.

ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಶುಭ ಹಾರೈಸಿರುವ ಸಚಿನ್​, ‘ಅಕಾಯ್ ನನ್ನು ಬರಮಾಡಿಕೊಂಡಿರುವ ವಿರಾಟ್​ ಮತ್ತು ಅನುಷ್ಕಾಗೆ ಅಭಿನಂದನೆಗಳು. ನಿಮ್ಮ ಸುಂದರ ಕುಟುಂಬಕ್ಕೆ ಮತ್ತೊಬ್ಬರ ಆಗಮನವಾದಂತಾಗಿದೆ. ಅವನ ಹೆಸರಿನಂತೇ ನಿಮ್ಮ ಜೀವನವೂ ಆತನಿಂದ ಬೆಳಕಾಗಲಿ. ಈ ಗಳಿಗೆ ನಿಮ್ಮ ಜೀವನದಲ್ಲಿ ಎಂದೆಂದಿಗೂ ಮರೆಯಲಾಗದ ಗಳಿಗೆಯಾಗಲಿ. ‘ಲಿಟಲ್ ಚಾಂಪ್’ ನಿನಗೆ ಈ ಜಗತ್ತಿಗೆ ಸ್ವಾಗತ’ ಎಂದು ಬರೆದಿದ್ದಾರೆ. ಕೊಹ್ಲಿ ಮಗುವಿಗೆ ಸಚಿನ್​ ಲಿಟಲ್​ ಚಾಂಪ್ ಎಂದು ಕರೆದಿರುವುದು ಇದೀಗ ಟ್ರೆಂಡ್​ ಆಗಿದೆ.

ಇದನ್ನೂ ಓದಿ Virat Kohli: ವಿರುಷ್ಕಾ ದಂಪತಿಯ ಮಗನ ಹೆಸರು ಅಕಾಯ್; ಏನಿದರ ಅರ್ಥ?

ಅನುಷ್ಕಾ ಮತ್ತು ವಿರಾಟ್ 2017ರಲ್ಲಿ ಇಟಲಿಯಲ್ಲಿ ವಿವಾಹವಾದರು. 2021ರ ಜನವರಿಯಲ್ಲಿ ಅನುಷ್ಕಾ ಮಗಳು ವಾಮಿಕಾಗೆ ಜನ್ಮ ನೀಡಿದರು. ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನಿಗೆ ಅಕಾಯ್‌(Akaay) ಎಂದು ಹೆಸರಿಡಲಾಗಿದೆ.

ಪಾಕಿಸ್ತಾನದಲ್ಲೂ ಸಂಭ್ರಮ


ಪಾಕಿಸ್ತಾನದಲ್ಲಿಯೂ(Virat Kohli’s Pakistan Fans) ಕೊಹ್ಲಿ ತಂದೆಯಾದ ಖುಷಿಯನ್ನು ಅವರ ಅಭಿಮಾನಿಗಳು ಅದ್ಧೂರಿಯಾಗಿ ಸಿಹಿ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಅಕಾಯ್‌ ಕೂಡ ವಿರಾಟ್​ ಅವರಂತೇ ಗ್ರೇಟೆಸ್ಟ್​ ಕ್ರಿಕೆಟ್​ ಆಗಲಿ, ಭಾರತ ಕ್ರಿಕೆಟ್​ ತಂಡದಲ್ಲಿ ಮಿನುಗಲಿ ಎಂದು ಹಾರೈಸಿದ್ದಾರೆ. 

ವಿರಾಟ್​ ಅವರು ಗಂಡು ಮಗುವಿನ ತಂದೆಯಾದ ವಿಚಾರವನ್ನು ಮಂಗಳವಾರ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಕಟಿಸುವ ಮೂಲಕ ತಿಳಿಸಿದ್ದರು. “ತುಂಬು ಸಂತೋಷ ಮತ್ತು ಪ್ರೀತಿ ತುಂಬಿದ ಹೃದಯದಿಂದ ನಾವು ಫೆ. 15ರಂದು ನಮ್ಮ ಮಗ, ವಾಮಿಕಾಳ ಚಿಕ್ಕ ಪುಟ್ಟ ಸಹೋದರ ಅಕಾಯ್‌ನನ್ನು(Akaay) ಈ ಜಗತ್ತಿಗೆ ಸ್ವಾಗತಿಸಿದ್ದೇವೆ” ಎಂದು ತಿಳಿಸುತ್ತಿದ್ದೇವೆ ಎಂದು ಕೊಹ್ಲಿ ಪೋಸ್ಟ್‌ ಮಾಡಿದ್ದರು. ಫೆ. 15ರಂದೆ ಮಗ ಜನಿಸಿದ್ದರು ಕೂಡ ಈ ವಿಚಾರವನ್ನು ಇಷ್ಟು ತಡವಾಗಿ ಹೇಳಿದ್ದು ಯಾಕೆ ಎನ್ನುವುದು ಮಾತ್ರ ತಿಳಿದುಬಂದಿಲ್ಲ.

Exit mobile version