ನವ ದೆಹಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳಿಗೆ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಹಾಗೂ ವಿಶ್ವ ಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಬೆಂಬಲ ಸೂಚಿಸಿದ್ದಾರೆ. ಅಥ್ಲೀಟ್ಗಳು ಬೀದಿ ಬದಿಯಲ್ಲಿ ಕುಳಿತು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಖೇದಕರ ಎಂಬುದಾಗಿ ನೀರಜ್ ಚೋಪ್ರಾ ಹಾಘೂ ಕಪಿಲ್ ದೇವ್ ಹೇಳಿದ್ದಾರೆ.
“ನಮ್ಮ ಕ್ರೀಡಾಪಟುಗಳು ನ್ಯಾಯಕ್ಕಾಗಿ ಒತ್ತಾಯಿಸಿ ಬೀದಿಗೆ ಇಳಿದಿರುವುದನ್ನು ನೋಡಿ ನನಗೆ ನೋವುಂಟು ಮಾಡಿದೆ. ಅವರು ನಮ್ಮ ದೇಶ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಅಥ್ಲೀಟ್ಗಳೇ ಆಗಲಿ, ಇನ್ಯಾರೇ ಆಗಲಿ ಒಂದು ರಾಷ್ಟ್ರವಾಗಿ, ಪ್ರತಿಯೊಬ್ಬ ವ್ಯಕ್ತಿಯ ಸಮಗ್ರತೆ ಮತ್ತು ಘನತೆಯನ್ನು ರಕ್ಷಿಸಲು ಜತೆಯಾಗಬೇಕಾಗಿದೆ,” ಎಂದು ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.
ಇಂದು ನಡೆಯುತ್ತಿರುವುದು ಎಂದಿಗೂ ಸಂಭವಿಸಬಾರದು. ಇದು ಸೂಕ್ಷ್ಮ ವಿಷಯವಾಗಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸಿಬೇಕು. ಸಂಬಂಧಿತ ಅಧಿಕಾರಿಗಳು ಸೂಕ್ತ ನ್ಯಾಯ ಲಭಿಸಲುತ್ವರಿತ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿಯೂ ನೀರಜ್ ಚೋಪ್ರಾ ಬರೆದುಕೊಂಡಿದ್ದಾರೆ.
ಭಾರತದ ವಿಶ್ವ ಕಪ್ ವಿಜೇತ ಮಾಜಿ ನಾಯಕ ಕಪಿಲ್ ದೇವ್ ಕೂಡ ತಮ್ಮ ಇನ್ಸ್ಟಾಗ್ರಾಮ್ ಮೂಲಕ ಬೆಂಬಲ ನೀಡಿದ್ದಾರೆ. “ಅವರಿಗೆ ಎಂದಾದರೂ ನ್ಯಾಯ ಸಿಗಬಹುದೇ?” ಎಂದು ಅವರು ಬರೆದಿದ್ದಾರೆ, ಬಜರಂಗ್ ಮತ್ತು ವಿನೇಶ್ ಸೇರಿದಂತೆ ಇತರರನ್ನು ಒಳಗೊಂಡ ಪತ್ರಿಕಾಗೋಷ್ಠಿಯ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.
ಏನಾಗುತ್ತಿದೆಯೋ ಅದು ಎಂದಿಗೂ ಸಂಭವಿಸಬಾರದು. ಇದು ಸೂಕ್ಷ್ಮ ವಿಷಯವಾಗಿದ್ದು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ರೀತಿಯಲ್ಲಿ ವ್ಯವಹರಿಸಬೇಕು. ಸಂಬಂಧಿತ ಅಧಿಕಾರಿಗಳು ನ್ಯಾಯವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ತ್ವರಿತ ಕ್ರಮ ತೆಗೆದುಕೊಳ್ಳಬೇಕು.
ಇದಕ್ಕೂ ಮೊದಲು ಭಾರತ ರವಿ ದಹಿಯಾ ಕೂಡ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ್ದಾರೆ. ಒಬ್ಬ ಸೈನಿಕ ಮತ್ತು ಕ್ರೀಡಾಪಟು ಪ್ರತಿ ರಾಷ್ಟ್ರದ ಹೆಮ್ಮೆ, ಮತ್ತು ಅವರನ್ನು ಗೌರವಿಸುವುದು ರಾಷ್ಟ್ರದ ಕರ್ತವ್ಯ” ಎಂದು ರವಿ ದಹಿಯಾ ಅವರು ಬರೆದುಕೊಂಡಿದ್ದಾರೆ.
ಡಬ್ಲ್ಯುಎಫ್ಐ ಮುಖ್ಯಸ್ಥರ ವಿರುದ್ಧದ ಆರೋಪಗಳ ಬಗ್ಗೆ ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ) ಇನ್ನೂ ತನಿಖೆಯನ್ನು ಪೂರ್ಣಗೊಳಿಸಿಲ್ಲ. ಇದೇ ವೇಳೆ ಸರ್ಕಾರ ರಚಿಸಿದ ಮೇಲ್ವಿಚಾರಣಾ ಸಮಿತಿಯ ವರದಿಯನ್ನೂ ಇನ್ನೂ ಬಹಿರಂಗಪಡಿಸಲಾಗಿಲ್ಲ. ಮೂರು ತಿಂಗಳ ಸುದೀರ್ಘ ಕಾಯುವಿಕೆಯಿಂದ ನಿರಾಶೆಗೊಂಡ ಕುಸ್ತಿಪಟುಗಳು ಏಪ್ರಿಲ್ 23 ರಂದು ತಮ್ಮ ಪ್ರತಿಭಟನೆ ಆರಂಭಿಸಿದ್ದರು.
ಇದೀಗ ಅವರು ಸುಪ್ರೀಮ್ ಕೋರ್ಟ್ ಮೆಟ್ಟಿಲೇರಿದ್ದು, ಡೆಲ್ಲಿ ಪೊಲೀಸರು ಬ್ರಿಜ್ಭೂಷಣ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಕೋರ್ಟ್ಗೆ ಮಾಹಿತಿ ನೀಡಿದ್ದಾರೆ.