Site icon Vistara News

SAFF Championship: 9ನೇ ಪ್ರಶಸ್ತಿ ನಿರೀಕ್ಷೆಯಲ್ಲಿ ಭಾರತ; ಫೈನಲ್​ನಲ್ಲಿ ಕುವೈತ್​ ಎದುರಾಳಿ

indian football team

ಬೆಂಗಳೂರು: ಸ್ಯಾಫ್ ಕಪ್ ಫುಟ್ಬಾಲ್ (SAFF Football) ಚಾಂಪಿಯನ್‌ಶಿಪ್‌‌‌(saff Championship 2023) ಸೆಮಿಫೈನಲ್ ಪಂದ್ಯದಲ್ಲಿ 8 ಬಾರಿಯ ಚಾಂಪಿಯನ್​ ಭಾರತ ತಂಡ ​ಲೆಬನಾನ್(saff championship india vs lebanon) ವಿರುದ್ಧ ಶೂಟೌಟ್‌ನಲ್ಲಿ 4-2 ಗೋಲುಗಳಿಂದ ಗೆದ್ದು ಫೈನಲ್​ ಪ್ರವೇಶಿಸಿದೆ. ಈ ಮೂಲಕ ದಾಖಲೆಯ 13ನೇ ಬಾರಿ ಫೈನಲ್‌ಗೆ ಲಗ್ಗೆ ಇಟ್ಟ ಸಾಧನೆ ಮಾಡಿದೆ. ಮಂಗಳವಾರ ನಡೆಯುವ ಫೈನಲ್(saff championship 2023 final)​ ಪಂದ್ಯದಲ್ಲಿ ಬಲಿಷ್ಠ ಕುವೈತ್​ ವಿರುದ್ಧ ಪ್ರಶಸ್ತಿಗಾಗಿ ಕಾದಾಡಲಿದೆ.

ಶನಿವಾರ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 14ನೇ ಆವೃತ್ತಿಯ ಜಿದ್ದಾಜಿದ್ದಿನ ಸೆಮಿಫೈನಲ್‌ನಲ್ಲಿ ಉಭಯ ತಂಡಗಳು ಗೆಲುವಿಗಾಗಿ ತೀವ್ರ ಪೈಪೋಟಿ ನಡೆಸಿತು. ಇತ್ತಂಡಗಳಿಗೂ ಗೋಲು ಬಾರಿಸುವ ಹಲವು ಅವಕಾಶ ಲಭಿಸಿದ್ದರೂ ಇದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲವಾಯಿತು. ಹೀಗಾಗಿ ನಿಗದಿತ 90 ನಿಮಿಷಗಳ ಅವಧಿಯ ಆಟದಲ್ಲಿ ಗೋಲು ದಾಖಲಾಗಲಿಲ್ಲ. ಬಳಿಕ 30 ನಿಮಿಷ ಹೆಚ್ಚುವರಿ ನೀಡಲಾಯಿತು. ಇದರಲ್ಲಿಯೂ ಉಭಯ ತಂಡಗಳ ಆಟಗಾರರು ಗೋಲು ಬಾರಿಸಲು ಸಾಧ್ಯವಾಗಲಿಲ್ಲ. ಬಳಿಕ ಫಲಿತಾಂಸಕ್ಕಾಗಿ ಶೂಟೌಟ್​ ಮೊರೆ ಹೋಗಲಾಯಿತು.

ಶೂಟೌಟ್‌ನಲ್ಲಿ ಭಾರತದ ಪರ ನಾಯಕ ಸುನೀಲ್​ ಚೆಟ್ರಿ ಗೋಲಿನ ಖಾತೆ ತೆರೆದರು. ಆರಂಭದಲ್ಲೇ ಸಿಕ್ಕ ಮುನ್ನಡೆಯನ್ನು ಉಳಿಸಿಕೊಂಡ ಭಾರತೀಯ ಆಟಗಾರರು ಮುಂದಿನ ಮೂರು ಯತ್ನದಲ್ಲಿಯೂ ಸತತ ಗೋಲು ಬಾರಿಸಿ ಗೆಲುವು ಸಾಧಿಸಿದರು. ಅನ್ವರ್‌ ಅಲಿ, ಮಹೇಶ್‌ ಸಿಂಗ್‌ ಹಾಗೂ ಉದಾಂತ ಸಿಂಗ್‌ ಗೋಲು ಬಾರಿಸಿದ ಆಟಗಾರರು. ಎದುರಾಳಿ ಲೆಬನಾನ್​ಗೆ​ 2 ಹಾಗೂ 3ನೇ ಯತ್ನಗಳಲ್ಲಿ ಮಾತ್ರ ಗೋಲು ದಾಖಲಿಸಲು ಸಾಧ್ಯವಾಯಿತು.

ಪಂದ್ಯ ವೀಕ್ಷಿಸಿದ ಶ್ರೇಯಸ್​ ಅಯ್ಯರ್​

ಟೀಮ್​ ಇಂಡಿಯಾದ ಮಧ್ಯಮ ಕ್ರಮಾಂಕದ ಸ್ಟಾರ್​ ಆಟಗಾರ ಶ್ರೇಯಸ್​ ಅಯ್ಯರ್ ಕೂಡ ಈ ಪಂದ್ಯಕ್ಕೆ ಸಾಕ್ಷಿಯಾಗಿದ್ದರು. ಸದ್ಯ ಅವರು ಬೆನ್ನು ನೋವಿನಿಂದ ಚೇತರಿಕೆ ಕಂಡು ಎನ್​ಸಿಎಯಲ್ಲಿ ಫಿಟ್​ನೆಸ್​ ತರಬೇತಿ ಪಡೆಯುತ್ತಿದ್ದಾರೆ.

ಇದನ್ನೂ ಓದಿ Fifa Ranking: ಐದು ವರ್ಷಗಳ ಬಳಿಕ ಫಿಫಾ ಶ್ರೇಯಾಂಕದಲ್ಲಿ ಜಿಗಿತ ಕಂಡ ಭಾರತ ಫುಟ್ಬಾಲ್​​ ತಂಡ

ಭಾರತದ ಫೈನಲ್​ ಹಾದಿ

‘ಎ’ ಗುಂಪಿನಲ್ಲಿದ್ದ ಭಾರತ ಉದ್ಘಾಟನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ 4-0 ಅಂತರದ ಗೆಲುವು ಸಾಧಿಸಿತ್ತು. ಬಳಿಕ ನೇಪಾಳ ವಿರುದ್ಧ ಜಯ ಕಂಡಿತ್ತು. ಆದರೆ ಬಲಿಷ್ಠ ಕುವೈತ್‌ ವಿರುದ್ಧ ಡ್ರಾಗೆ ತೃಪ್ತಿಪಟ್ಟುಕೊಂಡಿತ್ತು. ಸೆಮಿ ಫೈನಲ್​ನಲ್ಲಿ ಲೆಬನಾನ್ ವಿರುದ್ಧ ಗೆಲುವು.

8 ಬಾರಿ ಚಾಂಪಿಯನ್​ ಪಟ್ಟ

ಸ್ಯಾಫ್‌ ಕಪ್‌ ಟೂರ್ನಿಯಲ್ಲಿ ಭಾರತ ಎಂಟು ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಲ್ಕು ಸಲ ರನ್ನರ್ಸ್‌ ಅಪ್‌ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕೂಟಗಳಲ್ಲಿಯೂ ಭಾರತ ಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯೂ ಭಾರತ ತಂಡ ಕಪ್​ ಗೆಲ್ಲುವು ವಿಶ್ವಾಸದಲ್ಲಿದೆ.

Exit mobile version