ಬೆಂಗಳೂರು: ಉದ್ಘಾಟನ ಪಂದ್ಯದಲ್ಲಿ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ಥಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಸುನೀಲ್ ಚೆಟ್ರಿ(sunil chhetri) ಸಾರಥ್ಯದ ಭಾರತ ತಂಡ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಶನಿವಾರ ನಡೆಯು ಸ್ಯಾಫ್ ಟೂರ್ನಿಯ(SAFF Football) ಪಂದ್ಯದಲ್ಲಿ ನೇಪಾಳ(india vs nepal) ತಂಡದ ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿಯೂ ಗೆದ್ದು ಅಜೇಯ ಓಟವನ್ನು ಮುಂದುವರಿಸಿವುದು ಭಾರತ ತಂಡ ಯೋಜನೆಯಾಗಿದೆ.
ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ(Sree Kanteerava Stadium) ಉಭಯ ತಂಡಗಳ ಕಾಲ್ಚೆಂಡಿನ ಕಾಳಗ ನಡೆಯಲಿದೆ. ಹಿಂದಿನ ಪ್ರದರ್ಶನವನ್ನು ನೋಡುವಾಗ ಭಾರತ ತಂಡ ಈ ಪಂದ್ಯದಲ್ಲಿಯೂ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅದರಲ್ಲೂ ನಾಯಕ ಸುನೀಲ್ ಚೆಟ್ರಿ ಅವರು ಕಳೆದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿ ಮಿಂಚಿದ್ದರು. ಸದ್ಯ ಉತ್ತಮ ಪ್ರದರ್ಶನ ತೋರುತ್ತಿರುವ ಅವರ ಮೇಲೆ ತಂಡ ಈ ಪಂದ್ಯದಲ್ಲಿಯೂ ಬೆಟ್ಟದಷ್ಟು ನಿರೀಕ್ಷೆ ಇರಿಸಿದೆ.
ಇದನ್ನೂ ಓದಿ Viral Video: ತಂದೆಯಾಗುತ್ತಿರುವ ವಿಚಾರವನ್ನು ವಿಶೇಷ ರೀತಿಯಲ್ಲಿ ಸಂಭ್ರಮಿಸಿದ ಸುನೀಲ್ ಚೆಟ್ರಿ; ಮಜವಾಗಿದೆ ವಿಡಿಯೊ
ಸದ್ಯ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಗೋಲ್ಗಳ ಸಂಖ್ಯೆಯನ್ನು 90ಕ್ಕೆ ಹೆಚ್ಚಿಸಿಕೊಂಡಿರುವ ಚೆಟ್ರಿ ಅವರು ಇರಾನ್‌ನ ಅಲಿ ದಾಯಿ (109 ಗೋಲು) ಬಳಿಕ ಅತಿಹೆಚ್ಚು ಗೋಲುಗಳನ್ನು ಗಳಿಸಿದ ಏಷ್ಯಾದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ನೇಪಾಳ ವಿರುದ್ಧದ ಪಂದ್ಯದಲ್ಲಿಯೂ ಗೋಲ್ ಬಾರಿಸಿದರೆ ಅವರ ಗೋಲ್ಗಳ ಸಂಖ್ಯೆ ಹೆಚ್ಚಾಗಲಿವೆ.
ನೇಪಾಳ ಆಡಿದ ಮೊದಲ ಪಂದ್ಯದಲ್ಲಿ ಕುವೈಟ್‌ಗೆ ಶರಣಾಗಿತ್ತು. 1985ರಿಂದೀಚೆ ಭಾರತ-ನೇಪಾಲ ನಡುವೆ 23 ಪಂದ್ಯಗಳು ನಡೆದಿದ್ದು, ಭಾರತ 16-2 ಅಂತರದ ಗೆಲುವಿನ ದಾಖಲೆ ಹೊಂದಿದೆ. ಉಭಯ ತಂಡಗಳು ಕೊನೆಯ ಬಾರಿಗೆ ಎದುರಾದದ್ದು 2021ರ ಸ್ಯಾಫ್ ಕೂಟದಲ್ಲಿ. ಈ ಪಂದ್ಯವನ್ನು ಭಾರತ 3-0 ಗೋಲ್ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಸ್ಯಾಫ್ ಕೂಟದಲ್ಲಿ ಭಾರತ-ನೇಪಾಳ 9 ಸಲ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 6-2 ಗೆಲುವಿನ ದಾಖಲೆ ಹೊಂದಿದೆ. ಆದರೂ ನೇಪಾಳ ಸವಾಲನ್ನು ಕಡೆಗಣಿಸುವಂತಿಲ್ಲ.
ಇದನ್ನೂ ಓದಿ SAFF Football: ಭಾರತ-ಪಾಕ್ ಫುಟ್ಬಾಲ್ ಪಂದ್ಯದಲ್ಲಿ ಕಿತ್ತಾಡಿದ ಆಟಗಾರರು; ವಿಡಿಯೊ ವೈರಲ್
ಭಾರತ ತಂಡದ ಕೋಚ್ಗೆ ನಿಷೇಧ
ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅಶಿಸ್ತಿನಿಂದ ವರ್ತಿಸಿದ ಭಾರತ ತಂಡ ಪ್ರಧಾನ ಕೋಚ್ ಐಗರ್ ಸ್ಟಿಮಾಕ್ ಅವರಿಗೆ ಈ ಪಂದ್ಯಕದ್ಕೆ ನಿಷೇಧ ಮಾಡಲಾಗಿದೆ. ಹೀಗಾಗಿ ಅವರು ಇಂದಿನ ಪಂದ್ಯದ ವೇಳೆ ಡಗೌಟ್‌ನಲ್ಲಿ ಕಾಣಿಸಿ ಕೊಳ್ಳುವುದಿಲ್ಲ. ಅವರ ಬದಲು ಸಹಾಯಕ ಕೋಚ್ ಮಹೇಶ್ ಗಾವಿ ತಂಡಕ್ಕೆ ಸಲಹೆ ನೀಡಲಿದ್ದಾರೆ. ಅಶಿಸ್ತು ತೋರಿದ ಸ್ಟಿಮಾಕ್ಗೆ ರೆಡ್‌ಕಾರ್ಡ್ ನೀಡಲಾಗಿತ್ತು.