Site icon Vistara News

Sai Sudharsan: ಚೊಚ್ಚಲ ಪಂದ್ಯದಲ್ಲೇ ದಾಖಲೆ ಬರೆದ ಸಾಯಿ ಸುದರ್ಶನ್

B Sai Sudharsan scored a fifty on ODI debut

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿ ಟೂರ್ನಿಯಲ್ಲಿ ಶುಭಾರಂಭ ಕಂಡಿದೆ. ಈ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಸಾಯಿ ಸುದರ್ಶನ್(Sai Sudharsan)​ ಅವರು ಅರ್ಧಶತಕ ಬಾರಿಸುವ ಮೂಲಕ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ.

ಜೋಹಾನ್ಸ್​ಬರ್ಗ್​ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಈ ಪಂದ್ಯದಲ್ಲಿ ಚೇಸಿಂಗ್​ ವೇಳೆ ತಾಳ್ಮೆಯುತ ಬ್ಯಾಟಿಂಗ್​ ನಡೆಸಿದ ಸಾಯಿ ಸುದರ್ಶನ್ 43 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ ಅಜೇಯ 55 ರನ್​ ಬಾರಿಸಿದರು. ಅರ್ಧಶತಕ ಪೂರ್ತಿಗೊಳ್ಳುತ್ತಿದ್ದಂತೆ ಭಾರತ ಪರ ಚೊಚ್ಚಲ ಪಂದ್ಯದಲ್ಲೇ ಆರಂಭಿಕ ಆಟಗಾರನಾಗಿ 50 ಪ್ಲಸ್​ ರನ್​ ಬಾರಿಸಿದ 4ನೇ ಆಟಗಾರ ಎನಿಸಿಕೊಂಡರು.

ಮಾಜಿ ಆಟಗಾರ ರಾಬಿನ್​ ಉತ್ತಪ್ಪ ಅವರು ಭಾರತ ಪರ ಚೊಚ್ಚಲ ಏಕದಿನ ಪಂದ್ಯದಲ್ಲೇ ಆರಂಭಿಕನಾಗಿ ಆಡಿ 50 ಪ್ಲಸ್ ರನ್​ ಬಾರಿಸಿದ ​ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಉತ್ತಪ್ಪ ಈ ದಾಖಲೆಯನ್ನು 2006 ರಲ್ಲಿ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ನಿರ್ಮಿಸಿದ್ದರು. ಪಂದ್ಯದಲ್ಲಿ ಅವರು 86 ರನ್​ ಬಾರಿಸಿದ್ದರು. ಕೆ.ಎಲ್​ ರಾಹುಲ್​ ಅವರು ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲೇ ಆರಂಭಿಕನಾಗಿ ಶತಕ ಬಾರಿಸಿದ ದಾಖಲೆ ಹೊಂದಿದ್ದಾರೆ.

ಚೊಚ್ಚಲ ಪಂದ್ಯದಲ್ಲಿ ಆರಂಭಿಕನಾಗಿ 50+ ಬಾರಿಸಿದ ಭಾರತದ ಆಟಗಾರರು

ರಾಬಿನ್​ ಉತ್ತಪ್ಪ- 86 ರನ್.​ ಇಂಗ್ಲೆಂಡ್​ ವಿರುದ್ಧ(2006)

ಕೆ.ಎಲ್​ ರಾಹುಲ್​-100* ರನ್​. ಜಿಂಬಾಬ್ವೆ ವಿರುದ್ಧ(2016)

ಫೈಜಿ ಫೈಜಲ್​-55* ರನ್​. ಜಿಂಬಾಬ್ವೆ ವಿರುದ್ಧ(2016)

ಸಾಯಿ ಸುದರ್ಶನ್​-55* ರನ್​. ದಕ್ಷಿಣ ಆಫ್ರಿಕಾ ವಿರುದ್ಧ(2023)

ಇದನ್ನೂ ಓದಿ IND vs SA: ಭಾರತಕ್ಕೆ ಗೆಲುವಿನ ಹರ್ಷ ನೀಡಿದ ಅರ್ಶ್​ದೀಪ್; 8 ವಿಕೆಟ್​ ಜಯ

ಜೀವದಾನ ಪಡೆದು ಅರ್ಧಶತಕ

ಚೇಸಿಂಗ್​ ವೇಳೆ ಪದಾರ್ಪಣ ಪಂದ್ಯವಾಡಿದ ಸಾಯಿ ಸುದರ್ಶನ್​ ಅವರು ಅರ್ಧಶತಕ ಬಾರಿಸುವ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಆರಂಭಿಕನಾಗಿ ಕಣಕ್ಕಿಳಿದ ಅವರು 10 ರನ್​ ದಾಟುವ ಮುನ್ನವೇ ಎಲ್​ಬಿಡಬ್ಲ್ಯು ಅಪಾಯದಿಂದ ಜೀವದಾನ ಪಡೆದರು. ದಕ್ಷಿಣ ಆಫ್ರಿಕಾ ಡಿಆರ್​ಎಸ್​ ಮೊರೆ ಹೋಗಿದ್ದರೆ ಅವರು ವಿಕೆಟ್​ ಕಳೆದುಕೊಳ್ಳಬೇಕಿತ್ತು. ಟಿವಿ ರೀಪ್ಲೆಯಲ್ಲಿ ನೋಡುವಾಗ ಪಿಚಿಂಗ್​ ಇನ್​ಸೈಡ್​ ಮತ್ತು ಚೆಂಡು ಸರಿಯಾಗಿ ವಿಕೆಟ್​ಗೆ ಬಡಿದಿರುವ ಸ್ಪಷ್ಟವಾಗಿತ್ತು. ಆದರೆ ಮಾರ್ಕ್ರಮ್​ ಡಿಆರ್​ಎಸ್ ಪಡೆಯದ ಕಾರಣ ​ಸಾಯಿ ಸುದರ್ಶನ್ ಪಾರಾದರು. ಇದೇ ಅವಕಾಶವನ್ನು ಎರಡು ಕೈಗಳಿಂದ ಬಾಚಿದ ಅವರು ಅಜೇಯ ಅರ್ಧಶತಕ ಬಾರಿಸಿ ಮಿಂಚಿದರು. 43 ಎಸೆತ ಎದುರಿಸಿ 9 ಬೌಂಡರಿ ನೆರವಿನಿಂದ 55 ರನ್​ ಬಾರಿಸಿದರು. ಇವರ ಜತೆಗಾರ ಶ್ರೇಯಸ್​ ಅಯ್ಯರ್​ 6 ಬೌಂಡರಿ ಮತ್ತು 1 ಸಿಕ್ಸರ್​ ಸಿಡಿಸಿ 52 ರನ್​ ಗಳಿಸಿದರು. ಇನ್ನೇನು ಗೆಲುವಿಗೆ ಒಂದೆರಡು ರನ್​ ಬೇಕಿದ್ದಾಗ ಅಯ್ಯರ್ ವಿಕೆಟ್​ ಕಳೆದುಕೊಂಡರು.

Exit mobile version