Site icon Vistara News

Saina Nehwal: ಬ್ಯಾಡ್ಮಿಂಟನ್ ಬಿಟ್ಟು ಟೆನಿಸ್‌ ಆಡಿದ್ದರೆ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದ ಸೈನಾ ನೆಹ್ವಾಲ್‌

Saina Nehwal

Saina Nehwal: I could have done better in tennis; Saina

ನವದೆಹಲಿ: ಒಲಿಂಪಿಕ್ಸ್​ ಕಂಚಿನ ಪದಕ ವಿಜೇತೆ, ಭಾರತದ ಅನುಭವಿ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್(Saina Nehwal)​ ಅವರು ತಾನು ಬ್ಯಾಡ್ಮಿಂಟನ್​ ಆಡುವ ಬದಲು ಟೆನಿಸ್​ ಆಡುತ್ತಿದ್ದರೆ ಇನ್ನೂ ಹೆಚ್ಚಿನ ಯಶಸ್ಸು ಸಿಗುತ್ತಿತ್ತು ಎಂದು ಹೇಳಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ “ಅವಳ ಕಥೆ-ನನ್ನ ಕಥೆ’ ಉಪನ್ಯಾಸ ಸರಣಿಯಲ್ಲಿ ಈ ವಿಚಾರವನ್ನು ಸೈನಾ ಹೇಳಿದರು.

“ನನ್ನನ್ನು ಹೆತ್ತವರು ಬ್ಯಾಡ್ಮಿಂಟನ್‌ಗೆ ಬದಲಾಗಿ ಟೆನಿಸ್‌ಗೆ ಸೇರಿಸುತ್ತಿದ್ದರೆ ಚೆನ್ನಾಗಿರುತ್ತಿತ್ತು ಎಂದು ಕೆಲವೊಮ್ಮೆ ನನಗೆ ಅನ್ನಿಸುತ್ತಿದೆ. ನಾನು ಬ್ಯಾಡ್ಮಿಂಟನ್​ ಬಿಟ್ಟು ಟೆನಿಸ್​ ಅಥವಾ ಕ್ರಿಕೆಟ್​ ಆಡುತ್ತಿದ್ದರೆ ನನ್ನ ಬಳಿ ಹೆಚ್ಚು ಹಣ ಮತ್ತು ಶಕ್ತಿ ಇರುತ್ತಿತ್ತು” ಎಂದು ಸೈನಾ ಹೇಳಿದರು.

ನಾನು ಯಾವುದಾದರೊಂದು ಟೂರ್ನಿಯಲ್ಲಿ ಸೋತರೆ ಸಾಕು ಎಲ್ಲ ಕಡೆಗಳಿಂದ ಟೀಕೆಗಳು ಬರುತ್ತದೆ. ಬ್ಯಾಡ್ಮಿಂಟನ್​ ಎನ್ನುವುದು ಅಷ್ಟು ಸುಲಭದ ಆಟವಲ್ಲ. ಇಲ್ಲಿ ಉಸಿರು ತೆಗೆಯಲು ಕೂಡ ಕಷ್ಟಪಡಬೇಕು. ಇದು ಬ್ಯಾಡ್ಮಿಂಟನ್​ ಆಡಿದವರಿಗೆ ಮಾತ್ರ ಇದರ ಕಷ್ಟ ಅರಿವಾಗುತ್ತದೆ. ನಾನು ಒಬ್ಬರ ಬಗ್ಗೆ ಟೀಕೆ ಮಾಡುವುದು ಸಲಭ. ಆದರೆ ಈ ಕಷ್ಟ ಏನೆಂಬುದು ಕ್ರೀಡಾಪಟುಗಳಿಗೆ ಮಾತ್ರ ತಿಳಿದಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ Droupadi Murmu: ಸೈನಾ ನೆಹ್ವಾಲ್ ಜತೆ ಬ್ಯಾಡ್ಮಿಂಟನ್ ಆಡಿದ ರಾಷ್ಟ್ರಪತಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆರಂಭಿಸಿರುವ ಅವಳ ಕಥೆ-ನನ್ನ ಕಥೆ (ಹರ್‌ ಸ್ಟೋರಿ – ಮೈ ಸ್ಟೋರಿ) ಉಪ ನ್ಯಾಸ ಸರಣಿಯ ಸೈನಾ ಈ ಮಾತುಗಳನ್ನಾಡಿದ್ದಾರೆ. ಪದ್ಮ ಪ್ರಶಸ್ತಿ ಪುರಸ್ಕೃತ‌ ಎಲ್ಲ ಮಹಿಳಾ ಸಾಧಕರು ತಮ್ಮ ಕಥೆಗಳನ್ನು ಉಪನ್ಯಾಸದ ರೂಪದಲ್ಲಿ ಹೇಳಿಕೊಳ್ಳಲಿದ್ದಾರೆ. 2 ದಿನಗಳ ಹಿಂದಷ್ಟೇ ದ್ರೌಪದಿ ಮುರ್ಮು ಜತೆ ಸೈನಾ ಬ್ಯಾಡ್ಮಿಂಟನ್​ ಆಡಿದ ವಿಡಿಯೊ ವೈರಲ್​ ಆಗಿತ್ತು.

ಇತ್ತೀಚಿನ ಕೆಲ ವರ್ಷಗಳಿಂದ ಸೈನಾ ನೆಹ್ವಾಲ್​ ಅವರು ಗಾಯದ ಸಮಸ್ಯೆಯಿಂದ ತಮ್ಮ ಫಾರ್ಮ್​ ಕಳೆದುಕೊಂಡಿದ್ದಾರೆ. ಯಾವುದೇ ಟೂರ್ನಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ಕಷ್ಟಪಟ್ಟು ಮೊದಲ ಸುತ್ತು ದಾಟುವುದೇ ದೊಡ್ಡ ಸಾಧನೆಯಾಗಿದೆ.

ಹಿಂದೊಮ್ಮೆ ದಾವಣಗೆರೆ ಲೋಕಸಭಾ ಕ್ಷೇತ್ರದ (Davangere Lok Sabha constituency) ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ್‌ (Gayatri Siddeshwar) ವಿರುದ್ಧ ಮಾತನಾಡುವಾಗ, “ಮಹಿಳೆಯರು ಅಡುಗೆ ಮಾಡಲು ಲಾಯಕ್ಕು” ಎಂಬಂತೆ ಹೇಳಿದ್ದ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸೈನಾ ನೆಹ್ವಾಲ್​ ವಾಗ್ದಾಳಿ ನಡೆಸಿದ್ದರು.

ನೆಹ್ವಾಲ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿ “ಸಮಾಜದಲ್ಲಿ ಮಹಿಳೆ ಅಬಲೆ ಅಲ್ಲ ಸಬಲೆ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ಪರ್ಧಿಸಬೇಕು ಎಂದು ಕಾಂಗ್ರೆಸ್​ ಅಭಿಯಾನವೊಂದನ್ನು ಆರಂಭಿಸಿತ್ತು. ಆದರೆ ಕರ್ನಾಟಕದ ಹಿರಿಯ ಕಾಂಗ್ರೆಸ್​ ನಾಯಕರೊಬ್ಬರು ಮಹಿಳೆಯರ ಬಗ್ಗೆ ಅತ್ಯಂತ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ. ಇದು ಕಾಂಗ್ರೆಸ್​ನ ನಿಜವಾದ ಮನಸ್ಥಿಯನ್ನು ತೋರಿಸುತ್ತದೆ’ ಎಂದು ಶಿವಶಂಕರಪ್ಪ ಹೇಳಿಯನ್ನು ಖಂಡಿಸಿದ್ದರು.

Exit mobile version