ಹರ್ಯಾಣ: ಬ್ರಿಜ್ ಭೂಷಣ್ ಆಪ್ತ ಸಂಜಯ್ ಸಿಂಗ್ ಭಾರತ ಕುಸ್ತಿ ಫೆಡರೇಷನ್‌ನ ಅಧ್ಯಕ್ಷರಾದ ಹಿನ್ನೆಲೆ ಇದನ್ನು ಖಂಡಿಸಿ ಕುಸ್ತಿಗೆ ವಿದಾಯ ಹೇಳಿದ್ದ ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್(Sakshi Malik) ಮತ್ತೆ ಹೊಸ ಖ್ಯಾತೆ ತೆಗೆದಿದ್ದಾರೆ. ಭಾರತ ಕುಸ್ತಿ ಫೆಡರೇಷನ್‌ನ ಅಡ್‌ಹಾಕ್ ಸಮಿತಿಯು ಜೈಪುರದಲ್ಲಿ ಅಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಕುಸ್ತಿಪಟುಗಳು ಸ್ಪರ್ಧಿಸಿ. ಆದರೆ ಅಮಾನತುಗೊಂಡಿರುವ ಸಂಜಯ್ ಸಿಂಗ್ ನೇತೃತ್ವದ ಸಮಿತಿಯು ಪುಣೆಯಲ್ಲಿ ನಡೆಸಲಿರುವ ಟೂರ್ನಿಯಲ್ಲಿ ಸ್ಪರ್ಧಿಸ ಬಾರದು ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಮೂಲಕ ಮನವಿ ಮಾಡಿರುವ ಸಾಕ್ಷಿ, ‘ಅಡ್‌ಹಾಕ್ ಸಮಿತಿಯು ನಡೆಸಲಿರುವ ಟೂರ್ನಿ ಅಧಿಕೃತವಾಗಿದೆ. ಅಮಾನತುಗೊಂಡಿರುವ ಸಮಿತಿಯಿಂದ ನಡೆಸುವ ಟೂರ್ನಿಯಲ್ಲಿ ಯಾರು ಕೂಡ ಭಾಗವಹಿಸಬೇಡಿ’ ಎಂದು ಕುಸ್ತಿಪಟುಗಳಿಗೆ ಮನವಿ ಮಾಡಿದ್ದಾರೆ. ಆದರೆ ಕೆಲವು ಕುಸ್ತಿಪಟುಗಳು ಪುಣೆಯಲ್ಲಿ ನಡೆಯಲಿರುವ ಟೂರ್ನಿಗೆ ಹೋಗುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಜೈಪುರದಲ್ಲಿ ನಡೆಯುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್ ಫೆಬ್ರವರಿ 2ರಿಂದ 5ರವರೆಗೆ ನಡೆಯಲಿದೆ.
सच्चाई छुप नहीं सकती झूठे रसूलों से और खुशबू आ नहीं सकती कागज के फूलों से🙏 pic.twitter.com/Lau1fBAu0W
— Sakshee Malikkh (@SakshiMalik) January 18, 2024
ಹಲವು ಬಾರಿ ಮುಂದೂಡಿಕೆಯಾಗಿ ಬಳಿಕ ಸುಪ್ರೀಂಕೋರ್ಟ್ ಮಧ್ಯ ಪ್ರವೇಶದಿಂದ ಇತ್ತೀತೆಗೆ ಡಬ್ಲ್ಯುಎಫ್‌ಐಗೆ ನಡೆದಿದ್ದ ಚುನಾವಣೆಯಲ್ಲಿ ಸಂಜಯ್ ಸಿಂಗ್ ಗೆಲುವು ಸಾಧಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕಯಾಗಿದ್ದರು. ಆದರೆ, ಈ ಸಮಿತಿ ಆಯ್ಕೆಗೊಂಡ ಮೂರೇ ದಿನಕ್ಕೆ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳನ್ನು ತರಾತುರಿಯಲ್ಲಿ ಘೋಷಿಸಿದ್ದು ನಿಯಮಬಾಹಿರ ಎಂದು ಆಕ್ಷೇಪಿಸಿದ್ದ ಕೇಂದ್ರ ಕ್ರೀಡಾ ಸಚಿವಾಲಯವು ಸಂಜಯ್ ಅಧ್ಯಕ್ಷತೆಯ ಆಡಳಿತ ಸಮಿತಿಯನ್ನು ಅಮಾನತುಗೊಳಿಸಿತ್ತು. ಅಮಾನತು ಮಾಡಿದ ಬಳಿಕ ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಯು ಭೂಪಿಂದರ್ ಸಿಂಗ್ ಬಜ್ವಾ ನೇತೃತ್ವದ ಅಡ್‌ಹಾಕ್ ಸಮಿತಿಯನ್ನು ರಚಿಸಿತ್ತು.
ಇದನ್ನೂ ಓದಿ wrestlers protest: ಸಂಜಯ್ ಸಿಂಗ್ ಹೊರಗಿಟ್ಟರೆ ಎಲ್ಲ ಸಮಸ್ಯೆ ಬಗೆಹರಿಯಲಿದೆ; ಸಾಕ್ಷಿ ಮಲಿಕ್
ಸರ್ಕಾರದ ಜತೆ ಸಂಘರ್ಷವಿಲ್ಲ
ಈ ಹಿಂದೆ ಸರ್ಕಾದ ನಿರ್ಧಾರವನ್ನು ವಿರೋಧಿಸಿದ್ದ ಸಂಜಯ್ ಸಿಂಗ್ ಈಗ ಉಲ್ಟಾ ಹೊಡೆದಿದ್ದಾರೆ. ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ. ಸಚಿವಾಲಯದ ಸಮಯ ಕೋರಿದ್ದೇವೆ. ನಿಯೋಗವು ಸರ್ಕಾರದೊಂದಿಗೆ ಚರ್ಚೆಗೆ ಪ್ರಯತ್ನಿಸಲಿದೆ ಎಂದು ಹೇಳಿದ್ದರು. ಅಮಾನತು(WFI Suspension) ಹಿಂಪಡೆಯಲು ಆಗ್ರಹಿಸಿ ಕ್ರೀಡಾ ಸಚಿವಾಲಯದ(Sports Ministry) ಜತೆ ಮಾತುಕತೆ ನಡೆಸಲು ಭಾರತ ಕುಸ್ತಿ ಫೆಡರೇಷನ್ (Wrestling Federation Of India) ನಿರ್ಧರಿಸಿದೆ. ಸರ್ಕಾರದ ಜತೆ ಸಂಘರ್ಷ ಬಯಸುವುದಿಲ್ಲ ನಾವು ಮಾತುಕತೆಗೆ ಸಿದ್ಧ ಎಂದು ಕೆಲ ದಿನಗಳ ಹಿಂದೆ ತಿಳಿಸಿತ್ತು.
“ಡಬ್ಲ್ಯುಎಫ್‌ಐ ಅಮಾನತುಗೊಳಿಸುವ ವೇಳೆ ವಿಶ್ವ ಕುಸ್ತಿ ಸಂಸ್ಥೆ (ಯುಡಬ್ಲ್ಯುಡಬ್ಲ್ಯು) ಕೆಲವು ಷರತ್ತುಗಳನ್ನು ವಿಧಿಸಿತ್ತು. ಸರ್ಕಾರ ಅಮಾನತು ಹೇಗೆ ತೆರವು ಮಾಡಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಈ ಹಿಂದೆಯೂ ಸಚಿವಾಲಯಕ್ಕೆ ಪತ್ರ ಬರೆದಿದ್ದೆವು. ಆದರೆ ಉತ್ತರ ಬಂದಿಲ್ಲ. ಅಮಾನತು ತೆರವು ಮಾಡಲು ಏನು ಮಾಡಬೇಕು ಎಂಬುದನ್ನು ತಿಳಿಯಲು ಬಯಸುತ್ತೇವೆ. ಹೀಗಾಗಿ 2-3 ದಿನಗಳಲ್ಲಿ ಸಚಿವಾಲಯವನ್ನು ಸಂಪರ್ಕಿ ಮಾತುಕತೆ ನಡೆಸಲಿದ್ದೆವೆ. ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೂ ಮುನ್ನ ಈ ಅಮಾನತು ತೆರವು ಮಾಡುವ ನಿರೀಕ್ಷೆ ನಮ್ಮದು ಎಂದು ಸಂಜಯ್ ಸಿಂಗ್ ಹೇಳಿದ್ದರು.