Site icon Vistara News

Samson VS Pant | ಅವಕಾಶ ನೀಡಿದ್ದು ಸಾಕು ಪಂತ್​ಗೆ ಗೇಟ್​ ಪಾಸ್​ ನೀಡಿ; ಸೋಧಿ ಆಗ್ರಹ

sanju vs pant

ನವದೆಹಲಿ: ಟೀಮ್​ ಇಂಡಿಯಾ ಪರ ಕಳಪೆ ಪ್ರದರ್ಶನ ತೋರುತ್ತಿರುವ ರಿಷಭ್‌ ಪಂತ್‌(Samson VS Pant) ಅವರನ್ನು ತಂಡದಿಂದ ಕೈ ಬಿಟ್ಟು ಸಂಜು ಸ್ಯಾಮ್ಸನ್‌ಗೆ ಹೆಚ್ಚಿನ ಅವಕಾಶಗಳು ಕಲ್ಪಿಸಬೇಕೆಂದು ಮಾಜಿ ಕ್ರಿಕೆಟಿಗ ರೀತಿಂದರ್‌ ಸಿಂಗ್‌ ಸೋಧಿ ಆಗ್ರಹಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಭಾರತ ಟಿ20 ತಂಡದಲ್ಲಿ ರಿಷಭ್‌ ಪಂತ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿದೆ. ಆದರೆ ಅವರು ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಆದರೂ ಅವರಿಗೆ ಮತ್ತೆ ಮತ್ತೆ ಅವಕಾಶ ನೀಡುವುದು ಸರಿಯಲ್ಲ. ಎಲ್ಲದಕ್ಕೂ ಒಂದು ಮಿತಿ ಇದೆ. ದೀರ್ಘಾವಧಿಗೆ ಒಬ್ಬ ಆಟಗಾರನನ್ನು ಅವಲಂಬಿಸಲು ಸಾಧ್ಯವಿಲ್ಲ. ಅವರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲವಾದರೆ, ತಂಡದಿಂದ ಹೊರಗೆ ಕಳುಹಿಸುವುದು ಒಳ್ಳೆಯದು ಎಂದು ಸೋಧಿ ಹೇಳಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ಮೊದಲ ಆಯ್ಕೆಯ ವಿಕೆಟ್‌ ಕೀಪರ್‌ ಆಗಿ ದಿನೇಶ್‌ ಕಾರ್ತಿಕ್‌ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಕೊನೆಯ ಎರಡು ಪಂದ್ಯಗಳಲ್ಲಿ ಪಂತ್‌ಗೆ ಆಡಲು ಅವಕಾಶ ನೀಡಲಾಗಿತ್ತು. ಆದರೆ ಪಂತ್​ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಜತೆಗೆ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರಿಲ್ಲ ಹೀಗಿರುವಾಗ ಪಂತ್‌ಗೆ ಭಾರತ ತಂಡದಲ್ಲಿ ಹೆಚ್ಚು ಅವಕಾಶ ನೀಡುವ ಬದಲು ಉತ್ತಮ ಫಾರ್ಮ್​ನಲ್ಲಿರುವ ಸ್ಯಾಮ್ಸನ್​ಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

“ರಿಷಭ್‌ ಪಂತ್‌ ಅವರಿಂದ ಭಾರತ ತಂಡಕ್ಕೆ ನಷ್ಟವಾಗುತ್ತಿದೆ. ಆದ್ದರಿಂದ ಇವರ ಬದಲು ಭಾರತ ತಂಡಕ್ಕೆ ಸಂಜು ಸ್ಯಾಮ್ಸನ್ ಅವರನ್ನು ಕರೆ ತನ್ನಿ. ನೀವು ರಿಷಭ್‌ ಪಂತ್‌ಗೆ ಹೆಚ್ಚಿನ ಅವಕಾಶಗಳು ನೀಡಿದಷ್ಟು ತಂಡದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತವೆ. ಪಂತ್‌ ಬದಲು ಹೊಸ ಆಟಗಾರರಿಗೆ ಅವಕಾಶ ನೀಡುವ ಸಮಯ ಬಂದಾಗಿದೆ. ಈ ಬಗ್ಗೆ ಬಿಸಿಸಿಐ ಆಯ್ಕೆದಾರರು ಒಮ್ಮೆ ಚಿಂತಿಸಬೇಕಾದ ಅಗತ್ಯವಿದೆ” ಎಂದು ರೀತಿಂದರ್‌ ಸೋಧಿ ಹೇಳಿದ್ದಾರೆ.

ಇದನ್ನೂ ಓದಿ | IND VS BANGLA | ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ ಅಲಭ್ಯ

Exit mobile version