Site icon Vistara News

Sania Mirza Malik | ಶೋಯೆಬ್ ಮಲಿಕ್ ನನ್ನ ಆತ್ಮೀಯ ಗೆಳೆಯ; ಗಾಸಿಪ್‌ಗಳಿಗೆ ಉತ್ತರಿಸಿದ ನಟಿ ಆಯೇಶಾ

shoaib malik and ayesha omar

ಕರಾಚಿ: ಕೆಲ ದಿನಗಳ ಹಿಂದೆ ಶೋಯೆಬ್ ಮಲಿಕ್ ಮತ್ತು ಸಾನಿಯಾ ಮಿರ್ಜಾ(Sania And Malik) ಅವರ ದಾಂಪತ್ಯದಲ್ಲಿ ಬಿರುಕು ಮೂಡಿ ಅವರಿಬ್ಬರು ಡೈವೋರ್ಸ್‌ ಪಡೆಯಲಿದ್ದಾರೆ ಎಂಬ ಊಹಾಪೋಹಗಳ ಸುದ್ದಿ ಎಲ್ಲೆಡೆ ಭಾರಿ ಸದ್ದು ಮಾಡಿತ್ತು. ಇದೀಗ ಪಾಕ್ ನಟಿ ಆಯೇಶಾ ಒಮರ್ ಈ ಲಿಂಕ್-ಅಪ್ ಗಾಸಿಪ್‌ ಕುರಿತು ಮೌನ ಮುರಿದಿದ್ದಾರೆ.

ಆಯೇಶಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೋಯೆಬ್ ಮಲಿಕ್ ಅವರನ್ನು ಮದುವೆಯಾಗಲು ಯೋಜಿಸುತ್ತಿದ್ದೀರಾ ಎಂದು ಕೇಳಿದ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿ, ಖಂಡಿತವಾಗಿಯೂ ಇಲ್ಲ. ಶೋಯೆಬ್‌ ನನ್ನ ಒಳ್ಳೆಯ ಸ್ನೇಹಿತ. ನಾನು ಸಾನಿಯಾ ಮಿರ್ಜಾ ಮತ್ತು ಶೋಯೆಬ್‌ ಅವರಿಗೆ ಅಪಾರ ಗೌರವ ಕೊಡುತ್ತೇನೆ. ಮಲಿಕ್​ ಅವರ ಪತ್ನಿಯ ಜತೆ ಸಂತೋಷವಾಗಿಯೇ ಇದ್ದಾರೆ ಎಂದು ಪ್ರತಿಕ್ರಿಯೆ ನೀಡುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಟೆನಿಸ್‌ ತಾರೆ ಸಾನಿಯಾ ಮತ್ತು ಶೋಯೆಬ್ ಅವರ ವಿಚ್ಛೇದನದ ವದಂತಿ ಇತ್ತೀಚೆಗೆ ಎಲ್ಲ ಸುದ್ದಿ ಮಾಧ್ಯಮದಲ್ಲಿ ಸಂಚಲನ ಮೂಡಿಸಿತ್ತು. ಅದರಂತೆ ಮಲಿಕ್​ ಅವರು ಆಯೇಶಾ ಒಮರ್ ಅವರನ್ನು ಮದುವೆಯಾಗಲಿದ್ದಾರೆ. ಇದೇ ಕಾರಣಕ್ಕೆ ಸಾನಿಯಾಗೆ ಡೈವೋರ್ಸ್​ ನೀಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಒಟಿಟಿ ಪ್ಲಾಟ್‌ಫಾರ್ಮ್‌ ‘ದಿ ಮಿರ್ಜಾ ಮಲಿಕ್ ಶೋʼ ಎಂಬ​ ಕಾರ್ಯಕ್ರಮದಲ್ಲಿ ಸಾನಿಯಾ ಮತ್ತು ಮಲಿಕ್​ ಜತೆಯಾಗಿ ಕಾಣಿಸುವ ಮೂಲಕ ಎಲ್ಲರನ್ನು ಆಶ್ಚರ್ಯಗೊಳಿಸಿದ್ದರು. ಆದರೂ ಇವರ ಮಧ್ಯೆ ಏನೋ ಸರಿಯಿಯಲ್ಲ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಟುತ್ತಲೇ ಇದ್ದವು. ಇದೀಗ ಆಯೇಶಾ ಒಮರ್ ಅವರು ಶೋಯೆಬ್‌ ನನ್ನ ಆತ್ಮೀಯ ಗೆಳೆಯ ಎನ್ನುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ಇದನ್ನೂ ಓದಿ | Sania-Shoaib | ಟಾಕ್ ಶೋ ಆರಂಭಿಸಲಿರುವ ಸಾನಿಯಾ-ಮಲಿಕ್, ಡಿವೋರ್ಸ್ ಸುದ್ದಿ ಪಬ್ಲಿಸಿಟಿಗಾ?

Exit mobile version