ಮುಂಬಯಿ: ಭಾರತದ ಸ್ಟಾರ್ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಅವರು ತನಗೆ ಪ್ರೇರಣೆ ಎಂದು ಖ್ಯಾತ ಉದ್ಯಮಿ ಆನಂದ್ ಮಹೀಂದ್ರಾ(Anand Mahindra) ಅವರು ಹೇಳಿದ್ದಾರೆ. ಟ್ವಿಟರ್ನಲ್ಲಿ ಸ್ಫೂರ್ತಿದಾಯಕ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ.
”ಗೆಲುವಿನ ಹಸಿವು ಸಾನಿಯಾ ಮಿರ್ಜಾ ಅವರನ್ನು ವಿಶ್ವಕ್ಕೆ ಪರಿಚಯಿಸಿತು. ಫೆಬ್ರವರಿಯಲ್ಲಿ ನಡೆಯುವ ದುಬೈ ಓಪನ್ ಚಾಂಪಿಯನ್ಶಿಪ್ ಟೆನಿಸ್ ಟೂರ್ನಿ ಬಳಿಕ ಅವರು ಟಿನಿಸ್ನಿಂದ ನಿವೃತ್ತಿ ಹೊಂದಿದರೂ ಅವರ ವೃತ್ತಿಜೀವನದ ಛಲ ನನ್ನನ್ನು ಜೀವಂತವಾಗಿರಿಸುತ್ತದೆ” ಎಂದು ಟ್ವೀಟ್ ಮಾಡುವ ಮೂಲಕ ಆನಂದ್ ಮಹೀಂದ್ರಾ ಅವರು ಸಾನಿಯಾ ಮಿರ್ಜಾ ತಮ್ಮ ಪ್ರೇರಣೆ” ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Australian Open 2023: ಆಸ್ಟ್ರೇಲಿಯಾ ಓಪನ್; ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ರನ್ನರ್ ಅಪ್
ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾನಿಯಾ ಮಿರ್ಜಾ “ಸ್ಪರ್ಧಾತ್ಮಕತೆ ಎನ್ನುವುದು ನನ್ನ ರಕ್ತದಲ್ಲಿದೆ ಮತ್ತು ಪ್ರತಿ ಬಾರಿ ನಾನು ಕೋರ್ಟ್‌ಗೆ ಕಾಲಿಟ್ಟಾಗ ನಾನು ಗೆಲ್ಲಲು ಬಯಸುತ್ತೇನೆ. ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ ಪಂದ್ಯಾವಳಿ ನನ್ನ ಕೊನೆಯ ಟೆನಿಸ್ ಟೂರ್ನಿ ಆಗಿರುತ್ತದೆʼʼ ಎಂದು ಬರೆದುಕೊಂಡಿದ್ದಾರೆ. ವರ್ಷಾರಂಭದಲ್ಲಿ ನಡೆದ ಆಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಟೂರ್ನಿಯಲ್ಲಿ ಸಾನಿಯಾ ಮಿರ್ಜಾ ಅವರು ರೋಹನ್ ಬೋಪಣ್ಣ ಜತೆಗೂಡಿ ಮಿಶ್ರ ಡಬಲ್ಸ್ ವಿಭಾಗದಲ್ಲಿ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದರು.