Site icon Vistara News

Australian Open 2023: ಆಸ್ಟ್ರೇಲಿಯಾ ಓಪನ್​; ಕ್ವಾರ್ಟರ್​ ಫೈನಲ್​ ಪ್ರವೇಶಿಸಿದ ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ

Australian Open

ಮೆಲ್ಬೋರ್ನ್​: ಕೊನೆಯ ಗ್ರ್ಯಾನ್ ಸ್ಲಾಮ್ ಆಡುತ್ತಿರುವ ಸಾನಿಯಾ ಮಿರ್ಜಾ ಆಸ್ಟ್ರೇಲಿಯನ್ ಓಪನ್‌ನ(Australian Open 2023) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕ್ವಾರ್ಟರ್​ ಫೈನಲ್ ಪ್ರವೇಶಿಸಿದ್ದಾರೆ. ಭಾರತದ ರೋಹನ್ ಬೋಪಣ್ಣ ಜತೆಗೂಡಿ ಆಡಿದ ಸಾನಿಯಾ ಮಿರ್ಜಾ ಈ ಗೆಲುವಿನೊಂದಿಗೆ ಮುನ್ನುಗ್ಗಿದ್ದಾರೆ.

ಸೋಮವಾರ ನಡೆದ ಮಿಕ್ಸೆಡ್ ಡಬಲ್ಸ್​ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಭಾರತದ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿ, ಉರುಗ್ವೆ ಹಾಗೂ ಜಪಾನ್‌ನ ಜೋಡಿಯಾದ ಎರೈಲ್ ಬೆಹರ್-ಮಾಕಾಟೋ ನಿನೊಮಿಯಾ ಅವರನ್ನು 6-4, 7-6(11-9) ನೇರ ಸೆಟ್‌ಗಳ ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು.

ಸಾನಿಯಾ ಮಿರ್ಜಾ-ಬೋಪಣ್ಣ ಮುಂದಿನ ಕ್ವಾರ್ಟರ್‌ಫೈನಲ್‌ನಲ್ಲಿ ಹೋರಾಟದಲ್ಲಿ ಜೆಲೆನಾ ಒಸ್ಟಾಪೆಂಕೊ ಮತ್ತು ಡೇವಿಡ್ ವೇಗಾ ಹೆರ್ನಾಂಡೆಜ್ ಜೋಡಿಯನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ | Australian Open | ಆಸ್ಟ್ರೇಲಿಯಾ ಓಪನ್​; 4ನೇ ಸುತ್ತು ಪ್ರವೇಶಿಸಿದ ಸ್ವಿಯಾಟೆಕ್‌, ಕೊಕೊ ಗಾಫ್

Exit mobile version