ಮೆಲ್ಬೋರ್ನ್: ವೃತ್ತಿಜೀವನದ ಕೊನೆಯ ಗ್ರ್ಯಾನ್ ಸ್ಲಾಮ್ ಟೂರ್ನಿ ಆಡುತ್ತಿರುವ ಭಾರತದ ಸಾನಿಯಾ ಮಿರ್ಜಾ ಆಸ್ಟ್ರೇಲಿಯಾ ಓಪನ್ ಟೆನಿಸ್(Australian Open) ಟೂರ್ನಿಯ ಮಿಶ್ರ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ. ದೇಶಬಾಂಧವ ರೋಹನ್ ಬೋಪಣ್ಣ(Sania Mirza-Rohan Bopanna) ಜತೆಗೂಡಿ ಸಾನಿಯಾ ಮಿರ್ಜಾ ಮಂಗಳವಾರ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಬೇಕಿತ್ತು. ಆದರೆ ವಾಕ್ ಓವರ್ ಲಭಿಸಿದ ಕಾರಣ ಈ ಜೋಡಿ ನೇರವಾಗಿ ಸೆಮಿಫೈನಲ್ ಪ್ರವೇಶಿಸಿದೆ.
ಕಳೆದ 16ರ ಘಟ್ಟದ ಪಂದ್ಯದಲ್ಲಿ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿ 6-4,7-6(11-9) ನೇರ ಸೆಟ್ಗಳಿಂದ ಉರುಗ್ವೆ-ಜಪಾನ್ ಜೋಡಿ ಎರಿಲ್ ಬೆಹೆರ್-ಮಕೋಟೊ ನಿನೋಮಿಯಾ ಎದುರು ಸುಲಭ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಮಂಗಳವಾರ ನಡೆಯಬೇಕಿದ್ದ ಕ್ವಾರ್ಟರ್ ಫೈನಲ್ನಲ್ಲಿ ಸಾನಿಯಾ-ಬೋಪಣ್ಣ ಜೋಡಿ ಜೆಲೆನಾ ಒಸ್ಟಾಪೆಂಕೊ ಮತ್ತು ಡೇವಿಡ್ ವೇಗಾ ಹೆರ್ನಾಂಡೆಜ್ ಜೋಡಿಯನ್ನು ಎದುರಿಸಬೇಕಿತ್ತು. ಇದೀಗ ಸೆಮಿಫೈನಲ್ನಲ್ಲಿಯೂ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೇರುವ ಮೂಲಕ ಸಾನಿಯಾ ಮಿರ್ಜಾ ತಮ್ಮ ವಿದಾಯದ ಗ್ರ್ಯಾನ್ ಸ್ಲಾಮ್ ಟೂರ್ನಿಯನ್ನು ಸ್ಮರಣೀಯಗೊಳಿಸುವ ಯೋಜನೆಯಲ್ಲಿದ್ದಾರೆ.
ಇದನ್ನೂ ಓದಿ | Australian Open 2023: ಆಸ್ಟ್ರೇಲಿಯಾ ಓಪನ್; ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ