Site icon Vistara News

Sania Mirza: ಪುಷ್ಪ ಸಿನಿಮಾದ ಹಾಡಿಗೆ ಸ್ಟೆಪ್ಸ್​ ಹಾಕಿದ ಸಾನಿಯಾ ಮಿರ್ಜಾ, ಯುವರಾಜ್​ ಸಿಂಗ್​, ಇರ್ಫಾನ್‌ ಪಠಾಣ್‌; ವಿಡಿಯೊ ವೈರಲ್​​

sania-mirza-sania-mirza-yuvraj-singh-irrfan-pathan-who-have-put-steps-to-the-song-of-pushpa-movie-the-video-is-viral

sania-mirza-sania-mirza-yuvraj-singh-irrfan-pathan-who-have-put-steps-to-the-song-of-pushpa-movie-the-video-is-viral

ಹೈದರಾಬಾದ್‌: ದುಬೈ ಓಪನ್ ಟೂರ್ನಿಯ ಮೂಲಕ ಸಾನಿಯಾ ಮಿರ್ಜಾ(Sania Mirza) ಟೆನಿಸ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದರೂ, ತಮ್ಮ ಟೆನಿಸ್‌ ಬದುಕನ್ನು ಆರಂಭಿಸಿದ ಹೈದರಾಬಾದ್‌ನಲ್ಲಿ ಪ್ರದರ್ಶನ ಪಂದ್ಯವಾಡಿ ರ‍್ಯಾಕೆಟ್‌ ತ್ಯಜಿಸಿದರು. ಕಳೆದ ಭಾನುವಾರ ಇಲ್ಲಿನ ಲಾಲ್‌ ಬಹಾದೂರ್‌ ಟೆನಿಸ್‌ ಸ್ಟೇಡಿಯಂನಲ್ಲಿ ಸಾನಿಯಾ ಮಿರ್ಜಾ ಅವರು ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವ ಮೂಲಕ ಟೆನಿಸ್​ಗೆ ವಿದಾಯ ಹೇಳಿದರು.

ಈ ಪ್ರದರ್ಶನ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಅವರ ಮಿಶ್ರ ಡಬಲ್ಸ್‌ ಜತೆಗಾರ ರೋಹನ್‌ ಬೋಪಣ್ಣ, ಬೆಥನಿ ಮಾಟೆಕ್‌ ಸ್ಯಾಂಡ್ಸ್‌ ಆಡಿದರು. ಸಾನಿಯಾ ಮಿರ್ಜಾ ಅವರ ಮಗ, ಕುಟುಂಬದ ಸದಸ್ಯರು, ಕೇಂದ್ರ ಕಾನೂನು ಸಚಿವ ಕಿರಣ್‌ ರಿಜುಜು, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌, ಯುವರಾಜ್‌ ಸಿಂಗ್‌, ಇರ್ಫಾನ್‌ ಪಠಾಣ್‌, ತೆಲಂಗಾಣದ ಸಚಿವ ಕೆ.ಟಿ. ರಾಮ ರಾವ್‌ ಮೊದಲಾದವರು ಪ್ರದರ್ಶನ ಪಂದ್ಯ ವೀಕ್ಷಿಸಿದ್ದರು.

ವಿದಾಯ ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ತಮ್ಮ ಮಿತ್ರರಾದ ಯುವರಾಜ್​ ಸಿಂಗ್(yuvraj singh)​, ಇರ್ಫಾನ್​ ಪಠಾಣ್(irfan pathan)​​ ಮತ್ತು ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​(Saina Nehwal) ಜತೆ ಪುಷ್ಪಾ ಸಿನಿಮಾದ ಹಾಡಿಗೆ ನೃತ್ಯ ಮಾಡಿದ ವಿಡಿಯೊ ಇದೀಗ ವೈರಲ್​ ಆಗಿದೆ.

ಇದನ್ನೂ ಓದಿ Sania Mirza: ತವರಿನ ಅಭಿಮಾನಿಗಳ ಮುಂದೆ ವಿದಾಯ ಪಂದ್ಯವನ್ನಾಡಲು ಸಜ್ಜಾದ ಸಾನಿಯಾ ಮಿರ್ಜಾ

ಬಾಲಿವುಡ್ ಖ್ಯಾತ ಕೊರಿಯೋಗ್ರಾಫರ್ ಫರ್ಹಾ ಖಾನ್ ಅವರು ಪುಷ್ಪಾ ಸಿನಿಮಾದ ಖ್ಯಾತ ಹಾಡು ಊ ಅಂಟವಾ ಹಾಡಿಗೆ ಬಿಂದಾಸ್ ಆಗಿ ಸ್ಟೆಪ್ಸ್‌ ಹಾಕುವಂತೆ ಇರ್ಫಾನ್‌ ಪಠಾಣ್‌, ಸೈನಾ ನೆಹ್ವಾಲ್‌, ಯುವರಾಜ್ ಸಿಂಗ್‌ ಮತ್ತು ಸಾನಿಯಾ ಮಿರ್ಜಾ ಅವನ್ನು ಪ್ರೋತ್ಸಾಹಿಸಿದ್ದಾರೆ. ಅದರಂತೆ ಎಲ್ಲರು ಈ ಹಾಡಿಗೆ ಸ್ಟೆಪ್ಸ್​ ಹಾಕಿದ್ದಾರೆ. ನೃತ್ಯ ಮಾಡಿರುವ ವಿಡಿಯೊವನ್ನು ಸೈನಾ ನೆಹ್ವಾಲ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Exit mobile version