ಕರಾಚಿ: ಭಾರತದ ಖ್ಯಾತ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ(Sania Mirza) ಮತ್ತು ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್(Shoaib Malik) ನಡುವೆ ಎಲ್ಲವೂ ಸರಿಯಿಲ್ಲ ಇಬ್ಬರೂ ಕಾನೂನುಬದ್ಧವಾಗಿ ಬೇರ್ಪಡುತ್ತಿದ್ದಾರೆ, ಇದಕ್ಕೆ ಪಾಕಿಸ್ತಾನಿ ನಟಿ ಆಯೇಷಾ ಒಮರ್(Ayesha Omar ಕಾರಣ ಎಂಬ ಸುದ್ದಿ ಕೆಲವು ತಿಂಗಳ ಹಿಂದೆ ಭಾರಿ ಸಂಚಲನ ಮೂಡಿಸಿತ್ತು.
ಪಾಕಿಸ್ಥಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶೋಯೆಬ್ ಮಲಿಕ್ ಮತ್ತು ಆಯೇಷಾ ಒಮರ್ ಡೇಟಿಂಗ್ ಮಾಡುತ್ತಿದ್ದು, ಇದೇ ಕಾರಣಕ್ಕೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ವಿಚ್ಛೇದನ ಪಡೆಯುತ್ತಿದ್ದಾರೆ ಎಂದು ಹೇಳಲಾಗಿತ್ತು. ಬಳಿಕ ಇದು ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ನಡೆಸಿಕೊಡುವ ‘ದಿ ಮಿರ್ಜಾ ಮಲಿಖ್’ ಎಂಬ ಟಾಕ್ ಶೋ ಕಾರ್ಯಕ್ರಮದ ಪ್ರಚಾರಕ್ಕೆ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಅವರು ಈ ರೀತಿ ಮಾಡಿದ್ದಾರೆ ಎಂದು ತಿಳಿದುಬಂದಿತ್ತು. ಈ ಮೂಲಕ ಎಲ್ಲ ಊಹಾಪೋಹಗಳಿಗೂ ತೆರೆ ಎಳೆಯಲಾಗಿತ್ತು. ಆದರೂ ಸಾಮಾಜಿಕ ಜಾಲತಾಣದಲ್ಲಿ ಆಯೇಷಾ ಒಮರ್ ಮತ್ತು ಶೋಯೆಬ್ ಮಲಿಕ್ ಕದ್ದು ಮುಚ್ಚಿ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಕೂಗು ಕೇಳಿಬರುತ್ತಿತ್ತು.
ಇದೀಗ ಈ ವಿಚಾರವಾಗಿ ಟಾಕ್ ಶೋ ಒಂದರಲ್ಲಿ ಮಾತನಾಡಿದ ಆಯೇಷಾ, ತಾನು ಮದುವೆ ಆದವರಿಗೆ ಯಾವತ್ತು ಅಟ್ರ್ಯಾಕ್ಟ್ ಆಗಲ್ಲ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಅವರು ಟಾಕ್ಶೋದಲ್ಲಿ ಆಯೇಷಾ ಬಳಿ ‘ನೀವು ಶೋಯೆಬ್ ಮಲ್ಲಿಕ್ ಜತೆ ಡೇಟಿಂಗ್ ಮಾಡುತ್ತಿದ್ದೀರಂತೆ ಹೌದೇ’ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಆಯೇಷಾ ಇದನ್ನು ನಿಮಗೆ ಹೇಳಿದ್ದು ಯಾರು? ಎಂದು ಮರುಪ್ರಶ್ನೆ ಹಾಕಿ ನಾನು ಮದುವೆ ಆದ ವ್ಯಕ್ತಿಗೆ ಅಥವಾ ಕಮಿಟ್ ಆದವರಿಗೆ ಆಕರ್ಷಿತಗೊಳ್ಳುವುದಿಲ್ಲ. ನಾನು ಹೇಗೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.
ಇದನ್ನೂ ಓದಿ Shoaib And Sania | ಡಿವೋರ್ಸ್ ರೂಮರ್ಸ್ ಮಧ್ಯೆ ಸಾನಿಯಾ ಮಿರ್ಜಾ ಜತೆಗಿನ ವಿಡಿಯೊ ಹಂಚಿಕೊಂಡ ಶೋಯೆಬ್ ಮಲಿಕ್
ಈ ಮೊದಲು ಇದೇ ವಿಚಾರವಾಗಿ ಆಯೇಷಾ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸಾನಿಯಾ ಮಿರ್ಜಾ ಮತ್ತು ಶೋಯೆಬ್ ಮಲಿಕ್ ಖುಷಿಯಿಂದ ಮದುವೆ ಆಗಿದ್ದಾರೆ. ಅವರು ಈಗಲೂ ಕೂಡ ಉತ್ತಮವಾಗಿ ಸಂಸಾರ ನಡೆಸುತ್ತಿದ್ದಾರೆ. ನಾನು ಇಬ್ಬರನ್ನೂ ಗೌರವಿಸುತ್ತೇನೆ. ಶೋಯೆಬ್ ನನ್ನ ಒಳ್ಳೆಯ ಗೆಳೆಯ ಎಂದು ಅವರು ಹೇಳಿದ್ದರು.