Site icon Vistara News

Sania Mirza: ಪಾಕಿಸ್ತಾನಿ ಸಿಂಗರ್​ ಜತೆ ಕಾಣಿಸಿಕೊಂಡ ಸಾನಿಯಾ ಮಿರ್ಜಾ; ಫೋಟೊ ವೈರಲ್

Sania Mirza

ದುಬೈ: ಕೆಲ ತಿಂಗಳ ಹಿಂದಷ್ಟೇ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್‌ ಅವರಿಂದ ವಿಚ್ಛೇದನ ಪಡೆದಿದ್ದ ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಅವರು ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ದುಬೈನಲ್ಲಿರುವ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಗಾಯಕರೊಬ್ಬರ ಜತೆ ಕಾಣಿಸಿಕೊಂಡಿದ್ದಾರೆ. ಈ ಫೋಟೊ ವೈರಲ್​ ಆಗಿದೆ.

ದುಬೈನಲ್ಲಿ(Dubai) ನಡೆದ ಪಾಕಿಸ್ತಾನಿ ಗಾಯಕ ಅತಿಫ್ ಅಸ್ಲಾಂ)Atif Aslam) ಅವರ ಕಾರ್ಯಕ್ರಮವೊಂದರಲ್ಲಿ ಸಾನಿಯಾ ಮಿರ್ಜಾ ಅವರು ತಮ್ಮ ಸಹೋದರಿ ಅನಮ್ ಮಿರ್ಜಾ ಅವರೊಂದಿಗೆ ಭಾಗವಹಿಸಿದ್ದರು. ಇದೇ ವೇಳೆ ಸಾನಿಯಾ ಮಿರ್ಜಾ ಅವರು ಗಾಯಕ ಅತಿಫ್ ಅಸ್ಲಾ ಮತ್ತು ಅವರ ಪತ್ನಿ ಸಾರಾ ಭರ್ವಾನಾ ಜತೆ ಫೋಟೊ ತೆಗಿಸಿಕೊಂಡಿದ್ದಾರೆ. ಅಲ್ಲದೆ ಡಿನ್ನರ್​ ಕೂಡ ಮಾಡಿದ್ದಾರೆ. ಈ ಫೋಟೊವನ್ನು ಸಾನಿಯಾ ಅವರು ತನ್ನ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿದ್ದಾರೆ. ಇದರ ಜತೆಗೆ ದುಬೈನ ಸ್ಟ್ರೀಟ್​ನಲ್ಲಿ ತಿರುಗಾಡಿದ ಮತ್ತು ರಾಬಿನ್​ ಉತ್ತಪ್ಪ ಕುಟುಂಬದ ಜತೆಗೂ ಪಾರ್ಟಿ ಮಾಡಿದ ಫೋಟೊವನ್ನು ಹಂಚಿಕೊಂಡಿದ್ದಾರೆ.

ವಿಚ್ಚೇದನ ಬಳಿಕ ಸಾನಿಯಾ ಮಿರ್ಜಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕನ್ನಡಿ ಮುಂದೆ ನಿಂತಿರುವ ಫೋಟೊ ಹಂಚಿಕೊಂಡು ‘ಪ್ರತಿಬಿಂಬ’ ಎಂದು ಬರೆದುಕೊಂಡಿದ್ದರು. ಶೋಯೆಬ್‌ ಮಲಿಕ್‌ ಸನಾ ಜಾವೇದ್ ಅವರನ್ನು ವಿವಾಹವಾಗಿದ್ದರು. ಈ ಮೂಲಕ ಸಾನಿಯಾ ಮಿರ್ಜಾ(Sania Mirza) ಜತೆಗಿನ 13 ವರ್ಷದ ದಾಂಪತ್ಯವು ಕೊನೆಗೊಂಡಿತ್ತು. ಇದೇ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹದ ಸುದ್ದಿಗಳು ಹರಿದಾಡುತ್ತಿತ್ತು. ಕೆಲವರು ವಿಚ್ಚೇದನ ನೀಡದೆ ಶೋಯೆಬ್‌ ವಿವಾಹವಾಗಿದ್ದಾರೆ ಎಂದರೆ, ಇನ್ನು ಕೆಲವರು ಕಳೆದ ವರ್ಷವೇ ಈ ಜೋಡಿ ವಿಚ್ಚೇದನ ಪಡೆದಿತ್ತು ಎಂದು ಚರ್ಚಿಸುತ್ತಿದ್ದರು. ಈ ಎಲ್ಲ ವಿದ್ಯಮಾನಗಳನ್ನು ಕಂಡು ಸಾನಿಯಾ ಮಿರ್ಜಾ ಅವರ ಕುಟುಂಬವೇ ಅಧಿಕೃತ ಪ್ರಕಟನೆಯ ಮೂಲಕ ಸ್ಪಷ್ಟನೆ ನೀಡಿತ್ತು. ಶೋಯೆಬ್‌ – ಸಾನಿಯಾ ವಿಚ್ಛೇದನ ಪಡೆದು ಕೆಲವು ತಿಂಗಳುಗಳಾಗಿವೆ ಎಂದು ಕುಟುಂಬ ಮೂಲಗಳು ತಿಳಿಸಿತ್ತು.

ಸಾನಿಯಾ ಮಿರ್ಜಾ ಹಾಗೂ ಶೋಯೆಬ್‌ ಮಲಿಕ್‌ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್‌ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್‌ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್‌ ಎಂಬ ಪುತ್ರನಿದ್ದಾನೆ. ಮಲಿಕ್​ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ಅವರು ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್​ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್​ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್​ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್​ ಅಪ್ ಆಗಿದ್ದರು.

Exit mobile version