Site icon Vistara News

ಬುಮ್ರಾ ಜತೆಗಿನ ವಿಶೇಷ ಕ್ಷಣದ ಫೋಟೊ ಹಂಚಿಕೊಂಡ ಪತ್ನಿ ಸಂಜನಾ ಗಣೇಶನ್

jasprit bumrah and his wife

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ(Jasprit Bumrah) ಅವರಿಗೆ ಇಂದು(ಡಿಸೆಂಬರ್ 6) ಜನ್ಮ ದಿನದ ಸಂಭ್ರಮ. ಭೂಮ್ ಭೂಮ್ ಬುಮ್ರಾ ಎಂದೇ ಖ್ಯಾತಿ ಗಳಿಸಿರುವ ಮಾರಕ ವೇಗಿ ಜಸ್​ಪ್ರೀತ್ ಬುಮ್ರಾ ಹುಟ್ಟಿದ್ದು ಡಿಸೆಂಬರ್ 6 1993ರಲ್ಲಿ. 30ನೇ ವಸಂತಕ್ಕೆ ಕಾಲಿಟ್ಟ ಅವರಿಗೆ ಪತ್ನಿ ಸಂಜನಾ ಗಣೇಶನ್(Sanjana Ganesan) ವಿಶೇಷ ರೀತಿಯಲ್ಲಿ ಶುಭ ಕೋರಿದ್ದಾರೆ. ಅಲ್ಲದೆ ಬುಮ್ರಾ ಜತೆಗೆ ಕಳೆದ ಮಧರು ಕ್ಷಣಗಳ ವಿಶೇಷ ಫೋಟೊಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೇಬಿ ಬಂಪ್​ ಫೋಟೋನ್ನು ಹಂಚಿಕೊಂಡು “ಸುಂಟರಗಾಳಿ ಪ್ರಣಯ: ಸ್ನೇಹದಿಂದ ಪ್ರೀತಿಗೆ” ಎಂದು ಬರೆದುಕೊಂಡಿದ್ದಾರೆ. ಇನ್ನೊಂದು ಫೋಟೊದಲ್ಲಿ ಬುಮ್ರಾ ಅವರು ಮಗನನ್ನು ಮುದ್ದಾಡುತ್ತಿರುವುದು ಕಾಣಬಹುದು. ಇದಕ್ಕೆ “ಲವ್ ಟೇಕ್ಸ್ ಇಟ್ಸ್ ಟೈಮ್: ಎರಡು ವರ್ಷಗಳ ಡೇಟಿಂಗ್” ಎಂದು ಶೀರ್ಷಿಕೆ ನೀಡಿದ್ದಾರೆ.

ಮೂರನೇ ಫೋಟೊದಲ್ಲಿ ಬುಮ್ರಾ ಅವರೊಂದಿಗೆ ಮನೆಯಲ್ಲಿ ಕಳೆದ ಸಂಭ್ರಮದ ಕ್ಷಣವನ್ನು ಕಾಣಬಹುದು ಈ ಫೋಟೊಗೆ “ದಿ ಸೀಕ್ರೆಟಿವ್ ಕಪಲ್ ಮದುವೆಯಾದ ಬಳಿಕ” ಎಂದು ಶೀರ್ಷಿಕೆ ನೀಡಿದ್ದಾರೆ. ಮತ್ತೊಂದು ಫೋಟೊದಲ್ಲಿ ಪ್ರವಾಸದ ವೇಳೆ ಕಳೆದ ನೆನಪನ್ನು ಮೆಲುಕು ಹಾಕುತ್ತಿರುವುದನ್ನು ತೋರಿಸುತ್ತದೆ. ಇದಕ್ಕೆ “ಒಂದು ಅವಕಾಶ ಸಭೆ: IPL 2013 ಸಂದರ್ಶನ” ಎಂದು ಬರೆದುಕೊಂಡಿದ್ದಾರೆ.

ಅಂತಿಮ ಎರಡು ಫೋಟೊಗಳಲ್ಲಿ ಒಂದರಲ್ಲಿ ಬುಮ್ರಾ ಅವರು ಅಭ್ಯಾಸ ಮಾಡುವಾಗ ಅವರನ್ನು ಹೊಗಳಿದ ಮತ್ತು ನಂತರದ ಫೋಟೊದಲ್ಲಿ ಬೀಚ್​ ಪಕ್ಕ ಪತಿಯೊಂದಿಗೆ ರೊಮ್ಯಾನ್ಸ್​ ಮಾಡುವ ಫೋಟೊವನ್ನು ಕಾಣಬಹುದು. ಅಭ್ಯಾಸದ ಫೊಟೊಗೆ “ಬಿಯಾಂಡ್ ದಿ ಸ್ಪಾಟ್ಲೈಟ್” ಎಂದು ಬೀಚ್​ನಲ್ಲಿರುವ ಫೋಟೊಗೆ “ಡಬಲ್ ಲೈಫ್: ಮಾಡೆಲ್ ಕಮ್​ ಪ್ರೆಸೆಂಟರ್ ಎಕ್ಸ್‌ಟ್ರಾ ಆರ್ಡಿನೇರ್” ಎಂದು ಶೀರ್ಷಿಕೆ ನೀಡಿದ್ದಾರೆ.

ಇದನ್ನೂ ಓದಿ Neeraj Chopra: ಬುಮ್ರಾಗೆ ಬೌಲಿಂಗ್ ಟಿಪ್ಸ್ ಕೊಟ್ಟ ಚಿನ್ನದ ಹುಡುಗ ನೀರಜ್​ ಚೋಪ್ರಾ

ಕ್ರೀಡಾ ನಿರೂಪಕಿ ಸಂಜನಾ ಗಣೇಶನ್ ಮತ್ತು ಬುಮ್ರಾ ಅವರು 2021 ಮಾರ್ಚ್​ 15ರಂದು ಗೋವಾದಲ್ಲಿ ಮದುವೆಯಾಗಿದ್ದರು. ಮಹಾರಾಷ್ಟ್ರದವರಾದ ಸಂಜನಾ 2014ರ ಮಿಸ್ ಇಂಡಿಯಾ ಸ್ಪರ್ಧೆಯ ಫೈನಲ್ ತಲುಪಿದ್ದರು.


ತೀವ್ರ ಸ್ವರೂಪದ ಬೆನ್ನು ನೋವಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿ 11 ತಿಂಗಳ ಬಳಿಕ ಬುಮ್ರಾ ಅವರು ಐರ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ಭಾರತ ತಂಡಕ್ಕೆ ಕಮ್​ಬ್ಯಾಕ್​ ಮಾಡಿದ್ದರು. ಬುಮ್ರಾ ಅವರು ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್​ನ ಕ್ರೈಸ್ಟ್‌ಚರ್ಚ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯದ ಭಾರತ ಪ್ರವಾಸದಲ್ಲಿ ಬುಮ್ರಾ ಎರಡು ಟಿ20 ಪಂದ್ಯಗಳನ್ನು ಆಡಿದ ನಂತರ ಟೀಮ್​ ಇಂಡಿಯಾದಿಂದ ಹೊರಗುಳಿದಿದ್ದರು. ಏಷ್ಯಾ ಕಪ್​, ಟಿ20 ವಿಶ್ವಕಪ್‌ ಐಪಿಎಲ್​ ಸೇರಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಕೂಡ ಆಡಲು ಸಾಧ್ಯವಾಗಿರಲಿಲ್ಲ. ವಿಶ್ವಕಪ್​ನಲ್ಲಿ ಶ್ರೇಷ್ಠ ಬೌಲಿಂಗ್​ ಪ್ರದರ್ಶನ ತೋರಿದ್ದರು.

Exit mobile version