Site icon Vistara News

Sanjita Chanu: ಉದ್ದೀಪನ ಮದ್ದು ಸೇವನೆ: ವೇಟ್‌ಲಿಫ್ಟರ್‌ ಸಂಜಿತಾ ಚಾನುಗೆ 4 ವರ್ಷ ನಿಷೇಧ

Sanjita Chanu: Doping: Weightlifter Sanjita Chanu banned for 4 years

Sanjita Chanu: Doping: Weightlifter Sanjita Chanu banned for 4 years

ನವದೆಹಲಿ: ಅವಳಿ ಕಾಮನ್‌ವೆಲ್ತ್‌ ಗೇಮ್ಸ್‌(Commonwealth Games) ಚಿನ್ನದ ಪದಕ ವಿಜೇತೆ, ಭಾರತದ ಖ್ಯಾತ ಮಹಿಳಾ ವೇಟ್‌ಲಿಫ್ಟರ್‌ ಸಂಜಿತಾ ಚಾನುಗೆ(Sanjita Chanu) 4 ವರ್ಷಗಳ ನಿಷೇಧ ಹೇರಲಾಗಿದೆ. ನಾಡಾ (ರಾಷ್ಟ್ರೀಯ ಉದ್ದೀಪನ ನಿಗ್ರಹ ಸಂಸ್ಥೆ) ಕಳೆದ ವರ್ಷ ನಡೆಸಿದ ಉದ್ದೀಪನ ಸೇವನೆ ಪರೀಕ್ಷೆಯಲ್ಲಿ(Dope Test) ಸಂಜಿತಾ ವಿಫ‌ಲರಾದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ನವೆಂಬರ್ 12, 2022ರಿಂದಲೇ ಈ ನಿಷೇಧ ಪೂರ್ವಾನ್ವಯವಾಗಿದೆ ಎಂದು ನಾಡಾ ತಿಳಿಸಿದೆ.

“29 ವರ್ಷದ ಮಣಿಪುರದ ಸಂಜಿತಾ ಚಾನು, ನಾಡಾ(NADA) ಎಡಿಆರ್‌ 2021ರ ಆರ್ಟಿಕಲ್ 2.1 ಮತ್ತು 2.2ರ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದ್ದು, ನಾಡಾ ಎಡಿಆರ್‌ 2021ರ ಆರ್ಟಿಕಲ್ 10.2.1ರ ಅಡಿ 4 ವರ್ಷಗಳ ಕಾಲ ನಿಷೇಧ ಹೇರಲಾಗಿದೆ” ನಾಡಾ ಶಿಸ್ತು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಸಂಜಿತಾ ಅವರು ಡ್ರಾಸ್ಟಾನೊಲೊನ್‌ ಮೆಟಾಬೊಲೈಟ್‌ ಎಂಬ ಅನಾಬೊಲಿಕ್‌ ಸ್ಟೆರಾಯ್ಡ ಸೇವಿಸಿದ್ದು ಖಾತ್ರಿಯಾಗಿದೆ. ಅವರ ಉದ್ದೀಪನ ಮಾದರಿಯನ್ನು 2022, ಸೆ.20ರಂದು ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪಡೆದುಕೊಳ್ಳಲಾಗಿತ್ತು. ಈ ನಿಷೇದದಿಂದ ಇದೀಗ ಸಂಜಿತಾಗೆ ದೊಡ್ಡ ಹಿನ್ನಡೆಯಾಗಿದೆ.

ಇದನ್ನೂ ಓದಿ Dutee Chand | ನಿಷೇಧಿತ ಉದ್ದೀಪನ ಮದ್ದು ಸೇವನೆ ಆರೋಪ; ದ್ಯುತಿ ಚಂದ್ ಅಮಾನತು

ಈ ನಿಷೇಧ ಶಿಕ್ಷೆಯಿಂದ ಇದೇ ವರ್ಷ ನಡೆಯಲಿರುವ ಏಷ್ಯನ್‌ ಗೇಮ್ಸ್‌ ಮತ್ತು ಮುಂದಿನ ವರ್ಷ ಪ್ಯಾರಿಸ್​ನ್ಲಲಿ ನಡೆಯುವ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಿಲ್ಲ. ಸದ್ಯ ನಿಷೇದದ ಬಗ್ಗೆ ಸಂಜಿತಾ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಂಜಿತಾಗೆ ನಾಡಾದ ತೀರ್ಪಿನ ವಿರುದ್ಧ ಅಲ್ಲಿನ ಶಿಸ್ತುಸಮಿತಿಗೆ ದೂರು ಸಲ್ಲಿಸಬಹುದು. ಒಂದೊಮ್ಮೆ ನಾಡಾದಲ್ಲಿ ಅವರಿಗೆ ಶಿಕ್ಷೆ ರದ್ದಾದರೂ, ವಾಡಾದಿಂದ (ವಿಶ್ವ ಉದ್ದೀಪನ ನಿಗ್ರಹ ಸಂಸ್ಥೆ) ಪ್ರಶ್ನಿಸಲ್ಪಡುತ್ತದೆ. ಒಟ್ಟಾರೆ ಈ ಪ್ರಕ್ರಿಯೆ ಸುದೀರ್ಘ‌ವಾಗಿರುವುದರಿಂದ ಸಂಜಿತಾ ಅವರಿಗೆ ಈ ಶಿಕ್ಷೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಇದೇ ರೀತಿ ಹಲವು ಕ್ರೀಡಾಪಟುಗಳು ಸಾಧನೆಯ ಉತ್ತುಂಗದಲ್ಲಿದ್ದ ವೇಳೆ ಉದ್ದೀಪನ ಶಿಕ್ಷಿಗೆ ಒಳಗಾಗಿ ತನ್ನ ಕ್ರೀಡಾ ಬದಯಕನ್ನೇ ಕಳೆದುಕೊಂಡ ಹಲವು ನಿದರ್ಶನಗಳಿವೆ.

Exit mobile version