Site icon Vistara News

INDvsWI 2023 : ರಿಷಭ್‌, ರಾಹುಲ್‌ ಅನುಪಸ್ಥಿತಿಯಲ್ಲಿ ಕೇರಳದ ವಿಕೆಟ್‌ಕೀಪರ್‌ಗೆ ಸಿಕ್ಕಿತು ಚಾನ್ಸ್‌!

Sanju Samson

#image_title

ಮುಂಬಯಿ: ಜುಲೈ 27ರಂದು ಆರಂಭವಾಗಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ಕೇರಳ ಮೂಲದ ವಿಕೆಟ್‌ಕೀಪರ್‌ ಬ್ಯಾಟರ್‌ ಸಂಜು ಸ್ಯಾಮ್ಸನ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಶುಕ್ರವಾರ ಸಂಜೆ (ಜೂನ್‌ 23) ಪ್ರಕಟಗೊಂಡ ತಂಡದಲ್ಲಿ ಎಡಗೈ ಬ್ಯಾಟರ್‌ ಇಶಾನ್‌ ಕಿಶನ್‌ ಅವರೊಂದಿಗೆ ಸಂಜು ಸ್ಯಾಮ್ಸನ್‌ಗೂ ಅವಕಾಶ ಕಲ್ಪಿಸಲಾಗಿದೆ ಮೇ ತಿಂಗಳಿನಿಂದ ಗಾಯದಿಂದ ಹೊರಗುಳಿದಿರುವ ಕೆ.ಎಲ್.ರಾಹುಲ್ ಅವರ ಬದಲಿ ಆಟಗಾರನಾಗಿ ಅವರು ಕಣಕ್ಕಿಳಿಯಲಿದ್ದಾರೆ.

ಶುಕ್ರವಾರ ಪ್ರಕಟಿಸಲಾದ 17 ಆಟಗಾರರ ಪಟ್ಟಿಯಲ್ಲಿ ಭಾರತ ತಂಡದಲ್ಲಿ ಇಶಾನ್ ಕಿಶನ್ ಅವರೂ ಅವಕಾಶ ಪಡೆದುಕೊಂಡಿದ್ದಾರೆ. ಹೀಗಾಗಿ ಆಡುವ 11ರ ಬಳಗಕ್ಕೆ ಸೇರ್ಪಡೆಗೊಳ್ಳುವುದಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಡಲಿದೆ. 11 ಏಕದಿನ ಪಂದ್ಯಗಳನ್ನಾಡಿರುವ ಸಂಜು ಸ್ಯಾಮ್ಸನ್ 104.76 ಸ್ಟ್ರೈಕ್ ರೇಟ್ನಲ್ಲಿ 66ರ ಸರಾಸರಿ ಹೊಂದಿದ್ದಾರೆ. ಇದೇ ವೇಲೆ ಕಿಶನ್ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ತಂಡದ ಭಾಗವಾಗಿದ್ದರು. ಸ್ಯಾಮ್ಸನ್ ಕಳೆದ ವರ್ಷ ನವೆಂಬರ್‌ನಲ್ಲಿ ಕೊನೇ ಬಾರಿ ನ್ಯೂಜಿಲೆಂಡ್ ವಿರುದ್ಧ 50 ಒಡಿಐನಲ್ಲಿ ಆಡಿದ್ದರು. 50 ಓವರ್‌ಗಳ ವಿಶ್ವಕಪ್‌ಗೆ ಇನ್ನೂ ಕೆಲವೇ ದಿನಗಳು ಬಾಕಿ ಇರುವ ಕಾರಣ ಅವರಿಗೆ ಆಯ್ಕೆಗಾರರ ಮನದಲ್ಲಿ ಚಾಪು ಮೂಡಿಸಲು ಈ ಸರಣಿ ಮೂಲಕ ಅವಕಾಶ ಸಿಕ್ಕಿದೆ.

ಭಾರತವು ವೇಗಿ ಮುಕೇಶ್ ಕುಮಾರ್ ಮತ್ತು ಎಡಗೈ ವೇಗಿ ಜಯದೇವ್ ಉನಾದ್ಕಟ್ ಅವರನ್ನು ಏಕ ದಿನ ತಂಡಕ್ಕೆ ಆಯ್ಕೆ ಮಾಡಿಕೊಂಡಿದೆ. ಉನಾದ್ಕಟ್‌ 2022ರ ಡಿಸೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಏಳು ಏಕದಿನ ಪಂದ್ಯಗಳಲ್ಲಿ ಕೊನೆಯ ಪಂದ್ಯವನ್ನು ಆಡಿದ್ದರು. ಮುಕೇಶ್ 24 ಲಿಸ್ಟ್ ಎ ಪಂದ್ಯಗಳಲ್ಲಿ 37.46 ಸರಾಸರಿಯಲ್ಲಿ 26 ವಿಕೆಟ್ ಪಡೆದಿದ್ದಾರೆ. ಸಾಮಾನ್ಯ ಬೌಲಿಂಗ್‌ ಎಕಾನಮಿ ಹೊರತಾಗಿಯೂ ಅವರು ಕಳೆದ ವರ್ಷದ ಅಂತ್ಯದಿಂದ ಭಾರತೀಯ ತಂಡದ ಬಾಗಿಲು ಬಡಿಯುತ್ತಿದ್ದರು. ಇದೀಗ ಕೆರಿಬಿಯನ್ ಪ್ರವಾಸಕದ ಟೆಸ್ಟ್ ತಂಡದ ಭಾಗವೂ ಆಗಿದ್ದಾರೆ.

ಐಪಿಎಲ್ 2023ರಲ್ಲಿ 15 ಪಂದ್ಯಗಳಲ್ಲಿ 590 ರನ್ ಗಳಿಸಿದ ಮತ್ತು ವಿಜಯ್ ಹಜಾರೆ ಟ್ರೋಫಿಯಲ್ಲಿ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಋತುರಾಜ್ ಗಾಯಕ್ವಾಡ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಇದನ್ನೂ ಓದಿ : INDvsWI 2023 : 15 ತಿಂಗಳು ತಂಡದಲ್ಲೇ ಇಲ್ಲದ ಆಟಗಾರ ಈಗ ಏಕಾಏಕಿ ಟೆಸ್ಟ್‌ ತಂಡದ ಉಪನಾಯಕ!

ಐಪಿಎಲ್ ಫೈನಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಗುಜರಾತ್ ಟೈಟನ್ಸ್‌ ತಂಡದ ಭಾಗವಾಗಿದ್ದ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ವಿಶ್ವ ಕಪ್‌ ಹಿನ್ನೆಲೆಯಲ್ಲಿ ಅವರಿಗೆ ಕಾರ್ಯದೊತ್ತಡದಿಂದ ಮುಕ್ತಿ ಕೊಡಲಾಗಿದೆ. ಜಸ್ಪ್ರೀತ್ ಬುಮ್ರಾ ಇನ್ನೂ ಸುಧಾರಣೆಯ ಹಾದಿಯಲ್ಲಿರುವ ಕಾರಣ ಮುಕೇಶ್ ಮತ್ತು ಉನಾದ್ಕಟ್ ಅವರನ್ನು ಐದು ವೇಗಿಗಳ ಗುಂಪಿನ ಭಾಗವಾಗಿದೆ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್ ಮತ್ತು ಉಮ್ರಾನ್ ಮಲಿಕ್ ಕೂಡ ಸೇರಿದ್ದಾರೆ.

ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ನಾಲ್ವರು ಸ್ಪಿನ್ನರ್‌ಗಳನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದೆ. ಕಳೆದ ಸರಣಿಯಲ್ಲಿ ಭಾರತ ತಂಡದ ಭಾಗವಾಗಿದ್ದ ವಾಷಿಂಗ್ಟನ್ ಸುಂದರ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಭಾರತ ಟೆಸ್‌ ಹಾಗೂ ಏಕ ದಿನ ತಂಡ ಇಂತಿದೆ

ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.

ಏಕ ದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

Exit mobile version