Site icon Vistara News

Sanju Samson: ಸಂಜುಗೆ ಮತ್ತೆ ಅನ್ಯಾಯ; ಅಭಿಮಾನಿಗಳಿಂದ ಬಿಸಿಸಿಐ ವಿರುದ್ಧ ಆಕ್ರೋಶ

Sanju Samson

ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡ ಪ್ರಕಟಗೊಂಡಿದೆ. ತಂಡವನ್ನು ಸೂರ್ಯಕುಮಾರ್​ ಯಾದವ್​ ಅವರು ಮುನ್ನಡೆಸಲಿದ್ದಾರೆ. ಸರಣಿ 23ರಿಂದ ಆರಂಭವಾಗಲಿದೆ. ವಿಶ್ವಕಪ್​ ಆಡಿದ ಬಹುತೇಕ ಎಲ್ಲ ಹಿರಿಯ ಆಟಗಾರರಿಗೂ ಈ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಸಂಜು ಸ್ಯಾಮ್ಸನ್(Sanju Samson)​ ಅವರನ್ನು ಆಯ್ಕೆ ಮಾಡದ ಕಾರಣ ಅವರ ಅಭಿಮಾನಿಗಳು ಮತ್ತೆ ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಋತುರಾಜ್‌ ಗಾಯಕ್ವಾಡ್‌ ಉಪನಾಯಕರಾಗಿದ್ದಾರೆ. ವಿಶ್ವಕಪ್‌ ತಂಡದ ಭಾಗವಾಗಿದ್ದ ಮೂವರು ಮಾತ್ರ ಈ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರೆಂದರೆ ಸೂರ್ಯಕುಮಾರ್​, ಇಶಾನ್‌ ಕಿಶನ್‌ ಮತ್ತು ಪ್ರಸಿದ್ಧ್ ಕೃಷ್ಣ. ಕೊನೆಯ 2 ಪಂದ್ಯಗಳಿಗೆ ಶ್ರೇಯಸ್‌ ಅಯ್ಯರ್‌ ಲಭ್ಯರಾಗಲಿದ್ದು, ಉಪನಾಯಕತ್ವ ವಹಿಸಲಿದ್ದಾರೆ.

ಐರ್ಲೆಂಡ್ ಸರಣಿಯಲ್ಲಿ ವಿಕೆಟ್​ ಕೀಪಿಂಗ್​ ಜತೆಗೆ ಬ್ಯಾಟಿಂಗ್​ ಸಹ ಮಾಡಿದ್ದ ಸಂಜು ಸ್ಯಾಮ್ಸನ್​ ಈ ಬಾರಿ ತಂಡದಲ್ಲಿ ಸ್ಥಾನ ಪಡೆದಿಲ್ಲ. ಜಿತೇಶ್ ಶರ್ಮಾ ಅವರನ್ನೇ ಪ್ರಮುಖ ಕೀಪರ್​ ಆಗಿ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಸಂಜು ಅವರಿಗೆ ಈ ರೀತಿ ಅನ್ಯಾಯವಾಗುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಅವರು ಉತ್ತಮ ಫಾರ್ಮ್​ನಲ್ಲಿದ್ದರೂ ಅವರನ್ನು ತಂಡಕ್ಕೆ ಆಯ್ಕೆ ಮಾಡಿರಲಿಲ್ಲ.

ಸಂಜು ಅವರಿಗೆ ತಂಡದಲ್ಲಿ ಅವಕಾಶ ನೀಡುತ್ತಿಲ್ಲ ಎಂದು ಅವರ ಅಭಿಮಾನಿಗಳು ಭಾರತದ ಹಲವು ಸರಣಿಯ ವೇಳೆ ಬ್ಯಾನರ್​ ಹಿಡಿದು ಅಭಿಮಾನವೊಂದನ್ನು ನಡೆಸಿ ಅವರಿಗೆ ಅವಕಾಶ ನೀಡಬೇಕೆಂದು ಬಿಸಿಸಿಐಗೆ ಒತ್ತಾಯಿಸಿದ್ದರು. ಇದೀಗ ಆಸೀಸ್​ ವಿರುದ್ಧದ ಸರಣಿಗೂ ಅವಕಾಶ ನೀಡದ ಕಾರಣ ಅವರ ಅಭಿಮಾನಿಗಳು ಕೆರಳಿದ್ದು ಬಿಸಿಸಿಐ ಸಂಜು ಅವರನ್ನು ಬೇಕಂತಲೇ ಟಾರ್ಗೆಟ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ ICC World Cup 2023 : ವಿರಾಟ್, ರೋಹಿತ್​ ಕೈಹಿಡಿದು ಸಂತೈಸಿದ ಪ್ರಧಾನಿ ಮೋದಿ

ಬಡ ಮಕ್ಕಳಿಗೆ ನೆರವು

ವಿಶ್ವದ ಕ್ಯಾಶ್​ ರಿಚ್​ ಲೀಗ್​ಗಳಲ್ಲಿ ಒಂದಾದ ಐಪಿಎಲ್​ನಲ್ಲಿ ರಾಜಸ್ಥಾನ್​ ರಾಯಲ್ಸ್​(rajasthan royals) ಪರ ಆಡುತ್ತಿರುವ ಸಂಜು ಸ್ಯಾಮ್ಸನ್​ ಅವರು ಸದ್ಯ ಗಳಿಸುತ್ತಿರುವ 15 ಕೋಟಿ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ. ಟೀಮ್​ ಇಂಡಿಯಾದಲ್ಲಿ ತಮಗೆ ಸರಿಯಾದ ಅವಕಾಶ ಸಿಗದಿದ್ದರೂ ಯುವ ಆಟಗಾರರು ಬೆಳಕಿಗೆ ಬರುವಲ್ಲಿ ಶ್ರಮಿಸುತ್ತಿರುವ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇ ಬೇಕು.

ಭಾರತ ತಂಡ

ಸೂರ್ಯಕುಮಾರ್‌ ಯಾದವ್‌ (ನಾಯಕ), ರುತುರಾಜ್‌ ಗಾಯಕ್ವಾಡ್‌, ಇಶಾನ್‌ ಕಿಶನ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಜಿತೇಶ್‌ ಶರ್ಮ, ವಾಷಿಂಗ್ಟನ್‌ ಸುಂದರ್‌, ಅಕ್ಷರ್‌ ಪಟೇಲ್‌, ಶಿವಂ ದುಬೆ, ರವಿ ಬಿಷ್ಣೋಯಿ, ಆರ್ಷದೀಪ್‌ ಸಿಂಗ್‌, ಪ್ರಸಿದ್ಧ್ ಕೃಷ್ಣ, ಆವೇಶ್‌ ಖಾನ್‌, ಮುಕೇಶ್‌ ಕುಮಾರ್‌.

Exit mobile version