ಕರಾಚಿ: ಸಂಜು ಸ್ಯಾಮ್ಸನ್(Sanju Samson) ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿದ್ದರೂ ಟೀಮ್ ಇಂಡಿಯಾ ಪರ ಆಡಲು ಅವಕಾಶ ನೀಡದ ಬಗ್ಗೆ ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನಿಶ್ ಕನೇರಿಯಾ ಟೀಮ್ ಮ್ಯಾನೇಜ್‌ಮೆಂಟ್ ಹಾಗೂ ಬಿಸಿಸಿಐ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕನೇರಿಯಾ, ಅಂಬಾಟಿ ರಾಯುಡು, ರಾಬಿನ್ ಉತ್ತಪ್ಪ ಅವರ ವೃತ್ತಿ ಜೀವನ ಇದೇ ರೀತಿ ಅಂತ್ಯವಾಗಿತ್ತು. ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಆದರೆ ಅವರಿಗೆ ತಂಡದಲ್ಲಿ ಸರಿಯಾಗಿ ಅವಕಾಶ ನೀಡಿರಲಿಲ್ಲ. ಇದಕ್ಕೆ ಬಿಸಿಸಿಐ ಹಾಗೂ ಆಯ್ಕೆ ಸಮಿತಿಯಲ್ಲಿರುವ ರಾಜಕೀಯವೇ ಪ್ರಮುಖ ಕಾರಣ. ಇದೀಗ ಸಂಜು ವಿಚಾರದಲ್ಲಿಯೂ ಇದೇ ರೀತಿ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಸಂಜು ಸ್ಯಾಮ್ಸನ್ ಓರ್ವ ಉತ್ತಮ ಆಟಗಾರ ಎನ್ನುವಲ್ಲಿ ಎರಡು ಮಾತಿಲ್ಲ. ಆದರೆ ಅವರು ಬಿಸಿಸಿಐಯ ಈ ಧೋರಣೆಯನ್ನು ಎಷ್ಟೊಂದು ಸಹಿಸಿಕೊಳ್ಳಲು ಸಾಧ್ಯ? ಈಗಾಗಲೇ ಅವರು ಸಾಕಷ್ಟು ಸಹಿಸಿಕೊಂಡು ಅವಕಾಶ ಸಿಕ್ಕಾಗಲೆಲ್ಲಾ ರನ್‌ಗಳನ್ನು ಗಳಿಸಿದ್ದಾರೆ. ಒಂದು ಪಂದ್ಯದಲ್ಲಿ ಅವಕಾಶ ನೀಡಿ ಉಳಿದ ಪಂದ್ಯದಿಂದ ಕೈಬಿಡುವ ಮೂಲಕ ಆಟಗಾರನಿಗೆ ಹಿಂಸೆ ನೀಡುತ್ತಿರುವುದು ಸರಿಯಲ್ಲ. ಇದರಿಂದ ನಾವು ಒಬ್ಬ ಒಳ್ಳೆಯ ಆಟಗಾರನನ್ನು ಕಳೆದುಕೊಳ್ಳುತ್ತೇವೆ ಎಂದು ದಾನಿಶ್ ಕನೇರಿಯಾ ತಿಳಿಸಿದ್ದಾರೆ.
ಇದನ್ನೂ ಓದಿ | IND VS NZ | ರಿಷಭ್ ಪಂತ್ ಮ್ಯಾಚ್ ವಿನ್ನಿಂಗ್ ಆಟಗಾರ; ಧವನ್ ಹೀಗೆ ಹೇಳಿದ್ದು ಏಕೆ?