Site icon Vistara News

Sanju Samson: ಯಾವುದೇ ಕ್ರಮಾಂಕದಲ್ಲಿಯೂ ಆಡಲು ಸಿದ್ಧ; ಸ್ಯಾಮ್ಸನ್​ ಎಚ್ಚರಿಕೆ ನೀಡಿದ್ದು ಯಾರಿಗೆ?

Sanju Samson

ಟ್ರಿನಿಡಾಡ್: ವೆಸ್ಟ್‌ ಇಂಡೀಸ್‌(India tour of West Indies, 2023) ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿದ ಕೇರಳದ ಸ್ಟಂಪರ್​ ಸಂಜು ಸ್ಯಾಮ್ಸನ್​(Sanju Samson) ತನಗೆ ಯಾವ ಕ್ರಮಾಂಕದಲ್ಲಿಯೂ ಬ್ಯಾಟ್​ ಬೀಸುವ ಸಾಮರ್ಥ್ಯವಿದೆ ಎಂದು ಹೇಳಿದ್ದಾರೆ. ಈ ಹೇಳಿಕೆ ಮೂಲಕ ವಿಶ್ವಕಪ್​ ಟೂರ್ನಿಯ ರೇಸ್​ನಲ್ಲಿ ತಾನು ಕೂಡ ಪ್ರತಿಸ್ಪರ್ಧಿ ಎಂಬ ಸ್ಪಷ್ಟ ಸಂದೇಶವೊಂದನ್ನು ನೀಡಿದ್ದಾರೆ.

ದ್ವಿತೀಯ ಏಕದಿನ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕರೂ ಇದನ್ನು ಸರಿಯಾಗಿ ಬಳಿಸಿಕೊಳ್ಳಲಾಗದೆ ಕೇವಲ 9 ರನ್​ಗೆ ಆಟ ಮುಗಿಸಿ ನಿರಾಸೆ ಮೂಡಿಸಿದ್ದ ಸಂಜು ಅಂತಿಮ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಇಳಿದು ನಾಲ್ಕು ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 51 ರನ್​ ಬಾರಿಸಿದರು. ಈ ಮೂಲಕ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಇದೀಗ ವಿಶ್ವಕಪ್​ನಲ್ಲಿ ನಾಲ್ಕನೇ ಕ್ರಮಾಂಕದ ಆಟಗಾರನ ರೇಸ್​ನಲ್ಲಿ ತಾನು ಕೂಡ ಇದ್ದೇನೆ ಎನ್ನುದನ್ನು ತಿಳಿಸಲು, ಯಾವುದೇ ಕ್ರಮಾಂಕದಲ್ಲಿಯೂ ಬ್ಯಾಟಿಂಗ್​ ನಡೆಸಬಲ್ಲೆ ಎಂದು ಹೇಳಿದ್ದಾರೆ.

ಐಪಿಎಲ್​ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಸಂಜು ಅವರಿಗೆ ಭಾರತ ತಂಡದಲ್ಲಿ ಸರಿಯಾಗಿ ಸ್ಥಾನ ನೀಡುತ್ತಿಲ್ಲ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿತ್ತು. ಕೇವಲ ಒಂದು ಪಂದ್ಯ ಆಡಿಸಿ ಬಳಿಕದ ಪಂದ್ಯಗಳಿಗೆ ಕೈಬಿಟ್ಟು ಕಳಪೆ ಪ್ರದರ್ಶನ ತೋರುವ ಆಟಗಾರರಿಗೆ ಬಿಸಿಸಿಐ ಮಣೆಹಾಕುತ್ತಿದೆ ಎಂಬ ಮಾತುಗಳು ಹಲವು ಬಾರಿ ಕೇಳಿ ಬಂದಿದೆ. ಇದೀಗ ಅರ್ಧಶತಕ ಬಾರಿಸಿ ಮಿಂಚಿರುವ ಅವರನ್ನು ಮುಂದಿನ ಸರಣಿಗೆ ಆಯ್ಕೆ ಮಾಡದೇ ಹೋದರೆ ಬಿಸಿಸಿಐ ವಿರುದ್ಧ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗುವುದು ಖಂಡಿತ. ಹೀಗಾಗಿ ಸಂಜು ಅವರನ್ನು ಗುರುವಾರ ನಡೆಯುವ ಟಿ20 ಸರಣಿಯಲ್ಲೂ ಆಡಿಸುವ ಸಾಧ್ಯತೆ ಇದೆ.

ಇದನ್ನೂ ಓದಿ Sanju Samson: ಬಡ ಪ್ರತಿಭೆಗಳ ನೆರವಿಗೆ ನಿಂತ ಸಂಜು ಸ್ಯಾಮ್ಸನ್

ಒಂದೊಮ್ಮೆ ಸಂಜು ಮುಂದಿನ ಸರಣಿಯಲ್ಲಿಯೂ ಟೀಮ್​ ಇಂಡಿಯಾ ಪರ ಆಡುವ ಅವಕಾಶ ಪಡೆದು ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಿದ್ದೇ ಆದಲ್ಲಿ ಸೂರ್ಯಕುಮಾರ್​ ಯಾದವ್​ ಮತ್ತು ಶ್ರೇಯಸ್​ ಅಯ್ಯರ್​ ಅವರ ಸ್ಥಾನಕ್ಕೆ ಕುತ್ತು ಬರುವುದು ಖಚಿತ. ಆಗ ವಿಶ್ವಕಪ್​ ತಂಡದಲ್ಲಿ ಸಂಜು ಸ್ಥಾನ ಪಡೆದರೂ ಅಚ್ಚರಿಯಿಲ್ಲ. ಕೀಪರ್​ ಕೂಡ ಆಗಿರುವ ಕಾರಣ ಸ್ಯಾಂಡ್​ ಬೈ ಕೀಪರ್​ ಆಗಿ ಕೂಡ ಅವರನ್ನು ಪರಿಗಣನೆಗೆ ತೆಗೆದುಕೊಳ್ಳಬಹುದು.

Exit mobile version