ಪೋರ್ಟ್ ಆಫ್ ಸ್ಪೇನ್: ಅನ್‌ಲಕ್ಕಿ ಕೆ. ಎಲ್ ರಾಹುಲ್ ಅವರ ಬದಲಿಗೆ ವೆಸ್ಟ್ ಇಂಡೀಸ್ (Ind vs Wi T20) ಪ್ರವಾಸದಲ್ಲಿರುವ ಟೀಮ್ ಇಂಡಿಯಾಕ್ಕೆ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಎಂಟ್ರಿ ಪಡೆದುಕೊಂಡಿದ್ದಾರೆ. ಶುಕ್ರವಾರದ ಪಂದ್ಯಕ್ಕೆ ಮೊದಲು ಬಿಸಿಸಿಐ ಈ ಮಾಹಿತಿ ಪ್ರಕಟಿಸಿದೆ.
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಘೋಷಿಸಲಾಗಿದ್ದ ಭಾರತ ತಂಡದಲ್ಲಿ ಕೆ.ಎಲ್. ರಾಹುಲ್ ಅವರಿಗೆ ಸ್ಥಾನ ಕಲ್ಪಿಸಲಾಗಿತ್ತು. ಗಾಯದ ಸಮಸ್ಯೆಯಿಂದ ಮುಕ್ತಗೊಂಡು ಇನ್ನೇನು ಅವರು ಫಿಟ್ ಆಗಬೇಕು ಎನ್ನುವಷ್ಟರಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ವೈದ್ಯರು ಅವರಿಗೆ ವಿಶ್ರಾಂತಿ ಸೂಚಿಸಿರುವ ಕಾರಣ ವೆಸ್ಟ್ ಇಂಡೀಸ್ ಪ್ರವಾಸ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಿದ್ದ ಸಂಜು ಸ್ಯಾಮ್ಸನ್ ಅವರನ್ನು ಟಿ೨೦ ಬಳಗಕ್ಕೂ ಸೇರ್ಪಡೆಗೊಳಿಸಿದ್ದಾರೆ.
unlucky ರಾಹುಲ್
ಕೆ.ಎಲ್ ರಾಹುಲ್ ಅವರು ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ೨೦ ಸರಣಿಗೆ ನಾಯಕರಾಗಿ ಅಯ್ಕೆಯಾಗಿದ್ದರು. ಈ ವೇಳೆ ಅವರಿಗೆ ತೊಡೆ ಸಂದು ನೋವಿನ ಸಮಸ್ಯೆ ಉಂಟಾಗಿದೆ. ಎನ್‌ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರೂ ಪೂರ್ತಿ ವಾಸಿಯಾಗಿರಲಿಲ್ಲ. ಬಳಿಕ ಅವರು ಜರ್ಮನಿಗೆ ತೆರಳಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಅವರು ಇಂಗ್ಲೆಂಡ್ ಪ್ರವಾಸದ ಟೆಸ್ಟ್, ಟಿ೨೦ ಹಾಗೂ ಏಕದಿನ ಸರಣಿಯಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದರು. ಏತನ್ಮಧ್ಯೆ ಅವರು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಇನ್ನೇನು ಫಿಟ್ ಆಗಬೇಕು ಎನ್ನುವಷ್ಟರಲ್ಲಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಅವರು ವೆಸ್ಟ್ ಇಂಡೀಸ್ ಪ್ರವಾಸದ ಅವಕಾಶವನ್ನೂ ಕಳೆದುಕೊಂಡಿದ್ದಾರೆ. ಹೀಗಾಗಿ ಮುಂದಿನ ಏಷ್ಯಾ ಕಪ್ ಹಾಗೂ ಟಿ೨೦ ವಿಶ್ವ ಕಪ್‌ಗೂ ಆಯ್ಕೆಗೂ ಅಡಚಣೆಯಾಗಲಿದೆ.
ಇದನ್ನೂ ಓದಿ | Ind vs WI ODI | ಮೂರು ದಶಕಗಳ ಬಳಿಕ ವಿಂಡೀಸ್ ನೆಲದಲ್ಲಿ ಚರಿತ್ರೆ ಬರೆದ ಟೀಮ್ ಇಂಡಿಯಾ