ನವ ದೆಹಲಿ : ಕೇರಳ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್‌ಗೆ ಅವಕಾಶಗಳ ಬಾಗಿಲು ಸುಲಭವಾಗಿ ತೆರೆಯುತ್ತಿಲ್ಲ. ವಿಕೆಟ್‌ಕೀಪಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಹೊರತಾಗಿಯೂ ಅವರನ್ನು ಪ್ರಮುಖ ಟೂರ್ನಿಗಳಿಗೆ ಆಯ್ಕೆ ಮಾಡುತ್ತಿಲ್ಲ ಬಿಸಿಸಿಐ. ಇದು ಅವರ ಅಭಿಮಾನಿಗಳು ಹಾಗೂ ಕ್ರಿಕೆಟ್ ಪಂಡಿತರನೇಕರ ಬೇಸರಕ್ಕೆ ಕಾರಣವಾಗಿದೆ. ಅದರೆ, ಸಂಜು ಈ ಬಗ್ಗೆ ಯಾವುದೇ ವಿಷಾದ ಭಾವ ಇಟ್ಟುಕೊಂಡಿಲ್ಲ.
ಚಾನೆಲ್ ಒಂದರ ಜತೆ ಮಾತನಾಡಿದ ಅವರು “ನನಗೆ ತಂಡದಲ್ಲಿ ಆಡಬೇಕು ಎಂಬ ಅಭಿಲಾಷೆ ಇರುವುದು ಸತ್ಯ. ಆದರೆ, ನನ್ನ ಸಹ ಆಟಗಾರರನ್ನು ಕೆಳಕ್ಕೆ ತಳ್ಳಿ ತಂಡಕ್ಕೆ ಸೇರ್ಪಡೆಗೊಳ್ಳಬೇಕು ಎಂಬ ಯೋಚನೆ ಇಲ್ಲ. ರಾಹುಲ್ ಮತ್ತು ಪಂತ್ ತಂಡಕ್ಕಾಗಿ ಆಡುತ್ತಿದ್ದಾರೆ. ಅವರನ್ನೇ ಬಿಟ್ಟುಬಿಡಿ ಎಂದು ಕೇಳಿದರೆ ನನ್ನ ದೇಶದ ತಂಡದ ಗೌರವ ಕಡಿಮೆ ಮಾಡಿದಂತೆ,” ಎಂದು ಅವರು ಹೇಳಿದರು.
ಐದು ವರ್ಷಗಳ ಬಳಿಕ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಪಡೆದುಕೊಂಡಿದ್ದೆ. ತಂಡಕ್ಕೆ ಆಯ್ಕೆಯಾದ ೧೫ ಆಟಗಾರರಲ್ಲಿ ನಾನೂ ಒಬ್ಬನಾಗಿದ್ದೆ. ನಾನು ತಂಡಕ್ಕೆ ಕೊನೇ ಬಾರಿ ಅವಕಾಶ ಪಡೆಯುವಾಗ ನಂಬರ್ ಒನ್ ಸ್ಥಾನದಲ್ಲಿತ್ತು. ಈಗಲೂ ಅದೇ ಸ್ಥಾನದಲ್ಲಿದೆ. ಇಂಥ ತಂಡದ ಭಾಗವಾಗಿದ್ದೆ ಎಂಬುದೇ ಹೆಮ್ಮೆಯ ಸಂಗತಿ. ಇಂಥ ವಿಚಾರದಲ್ಲಿ ಧನಾತ್ಮಕ ಯೋಚನೆ ಮಾಡಬೇಕು,” ಎಂದು ಅವರು ಹೇಳಿದ್ದಾರೆ.
ಅಭಿಯಾನ
ಮುಂಬರುವ ಟಿ೨೦ ವಿಶ್ವ ಕಪ್‌ಗೆ ಸಂಜು ಸ್ಯಾಮ್ಸನ್ ಆಯ್ಕೆಯಾಗದೇ ಹೋಗಿರುವುದಕ್ಕೆ ಅಭಿಮಾನಿಗಳು ಅಸಮಧಾಣ ವ್ಯಕ್ತಪಡಿಸಿದ್ದರು. ಸಂಜು ಸ್ಯಾಮ್ಸನ್ ಅವರು ರಿಷಭ್ ಪಂತ್‌ಗಿಂತ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿದ್ದರೂ ಅವರನ್ನು ತಂಡಕ್ಕೆ ಸೇರಿಸಲಾಗುತ್ತಿಲ್ಲ ಎಂದು ಬೇಸರ ವ್ಯಕ್ತಡಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರು. ಅದಾದ ಬಳಿಕ ನ್ಯೂಜಿಲೆಂಡ್ ಎ ತಂಡ ವಿರುದ್ಧ ಆಡುವ ಭಾರತ ತಂಡ ನಾಯಕನ ಸ್ಥಾನ ನೀಡಲಾಗಿತ್ತು.
ಇದನ್ನೂ ಓದಿ | BCCI | ಸಂಜು ಸ್ಯಾಮ್ಸನ್ ಪರ ಅಭಿಯಾನದ ನಡುವೆ ನಾಯಕನ ಪಟ್ಟ ಕಟ್ಟಿದ ಬಿಸಿಸಿಐ