ಕೊಚ್ಚಿ: ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತವಾಗಿರುವ ಕೇರಳದ ಬ್ಯಾಟರ್ ಸಂಜು ಸ್ಯಾಮ್ಸನ್(Sanju Samson) ಬ್ಯಾಟ್ ಬಿಟ್ಟು ಬಂದೂಕು ಕೈಗೆತ್ತಿಕೊಂಡಿದ್ದಾರೆ. ಜತೆಗೆ ಅವರು ಗುರಿಯಿಡುತ್ತಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶುಕ್ರವಾರ ಸಂಜು ಸ್ಯಾಮ್ಸನ್ ಅವರು ಗನ್ ಹಿಡಿದಿರುವ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ‘ಕೈಯಲ್ಲಿ ಗನ್ ಇದೆ ಎಷ್ಟು ದೂರದಿಂದ ಶೂಟ್ ಮಾಡುತ್ತೀರಿ’ ಎಂದು ಬರೆದುಕೊಂಡಿದ್ದಾರೆ. ಈ ಫೋಟೊ ವೈರಲ್ ಆಗಿದೆ.
ಸಂಜು ಅವರು ಕ್ಯಾಪ್ ಮತ್ತು ಹೆಟ್ ಫೋನ್ ಹಾಕಿಕೊಂಡು ಕೈಯಲ್ಲಿ ಗನ್ ಹಿಡಿದ ಫೋಟೊ ಕಂಡ ಕೆಲ ನೆಟ್ಟಿಗರು ತಂಡದಲ್ಲಿ ನಿಮಗೆ ಅವಕಾಶ ನೀಡದವರ ಮುಂದೆ ಗನ್ ಹಿಡಿಯಿರಿ ಆಗ ನಿಮಗೆ ತಂಡದಲ್ಲಿ ಅವಕಾಶ ಸಿಗಬಹುದು ಎಂದು ಹಾಸ್ಯಮಯ ಟ್ವೀಟ್ ಮಾಡಿದ್ದಾರೆ. ಇನ್ನು ಕೆಲವರು ಕ್ರಿಕೆಟ್ ಬಿಟ್ಟು ಶೂಟಿಂಗ್ ಕ್ರೀಡೆಯಲ್ಲಿಯೇ ಮುಂದುವರಿದು ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತನ್ನಿ ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ IND VS AUS: ಮೊಹಮ್ಮದ್ ಸಿರಾಜ್ ಬೌನ್ಸರ್ಗೆ ತಿಣುಕಾಡಿದ ವಾರ್ನರ್, ಖವಾಜಾ; ವಿಡಿಯೊ ವೈರಲ್
28ರ ಹರೆಯದ ಸಂಜು ಸ್ಯಾಮ್ಸನ್ಗೆ ಇದುವರೆಗೆ ಸಿಕ್ಕ ಅವಕಾಶಗಳು ಕಡಿಮೆ. 2015ರಲ್ಲಿ ಟಿ20 ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಸಂಜು ಇದುವರೆಗೆ ಎರಡು ಫಾರ್ಮ್ಯಾಟ್‌ಗಳಲ್ಲಿ ಕೇವಲ 28 ಪಂದ್ಯಗಳನ್ನಾಡಿದ್ದಾರೆ. ಏಕದಿನದಲ್ಲಿ 11 ಪಂದ್ಯಗಳನ್ನು ಮತ್ತು ಟಿ20 ಯಲ್ಲಿ ಭಾರತಕ್ಕಾಗಿ 17 ಪಂದ್ಯಗಳನ್ನು ಆಡಿದ್ದಾರೆ.
ಸದ್ಯ ಸಂಜು ಸ್ಯಾಮ್ಸನ್ ಅವರು ಮುಂಬರುವ ಐಪಿಎಲ್ ಟೂರ್ನಿಗಾಗಿ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ. ಅವರು ರಾಜಸ್ಥಾನ ರಾಯಲ್ಸ್ ತಂಡದ ನಾಯನಾಗಿದ್ದಾರೆ.