Site icon Vistara News

Sanju Samson: ತಲೈವಾ ಭೇಟಿಯಾಗಿ ಬಾಲ್ಯದ ಕನಸು ನನಸಾಗಿಸಿದ ಸಂಜು ಸ್ಯಾಮ್ಸನ್​

Sanju Samson: Sanju Samson met Thalaiva and fulfilled his childhood dream

Sanju Samson: Sanju Samson met Thalaiva and fulfilled his childhood dream

ಚೆನ್ನೈ: ಟೀಮ್ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್​(Sanju Samson) ಅವರು ತಮಿಳ್​ ಸೂಪರ್​ ಸ್ಟಾರ್​​ ರಜಿನಿಕಾಂತ್(Rajinikanth)​ ಅವರನ್ನು ಭೇಟಿ ಮಾಡಿದ ಪೋಟೊವನ್ನು ತಮ್ಮ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ರಜನಿಕಾಂತ್​ ಅವರನ್ನು ಭೇಟಿಯಾಗಿದ ಫೋಟೊವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿರುವ ಸಂಜು ಸ್ಯಾಮ್ಸನ್​ ತನ್ನ ಬಾಲ್ಯದ ಕನಸು ಇಂದು ನನಸಾಗಿದೆ ಎಂದು ಹೇಳಿದ್ದಾರೆ. “ನನಗೆ 7 ವರ್ಷ ಪ್ರಾಯವಿದ್ದಾಗ ನಾನು ಒಮ್ಮೆಯಾದರೂ ರಜನಿಕಾಂತ್​ ಅವರನ್ನು ಭೇಟಿ ಮಾಡಬೇಕೆಂದು ಕನಸು ಕಂಡಿದ್ದೆ. ಇದೀಗ ಈ ಕನಸು ಬರೋಬ್ಬರಿ 21 ವರ್ಷಗಳ ಕಾಯುವಿಕೆಯ ಬಳಿಕ ನೆರವೇರಿದೆ” ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಚೆನ್ನೈನಲ್ಲಿರುವ ಸೂಪರ್ ಸ್ಟಾರ್ ನಿವಾಸಕ್ಕೆ ಭೇಟಿ ನೀಡಿದ ಸಂಜು ಸ್ಯಾಮ್ಸನ್​ ಅವರು ರಜನಿಕಾಂತ್​ ಜತೆ ಕೆಲಕಾಲ ಮಾತುಕತೆ ನಡೆಸಿದ್ದಾರೆ. ಇದೇ ವೇಳೆ ಸಂಜು ಅವರನ್ನು ರಜನಿಕಾಂತ್​ ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

ಇದನ್ನೂ ಓದಿ IPL 2023 : ಐಪಿಎಲ್​ 16ನೇ ಆವೃತ್ತಿಗೆ ಹೊಸ ಜೆರ್ಸಿ ಅನಾವರಣ ಮಾಡಿದ ಚಾಂಪಿಯನ್​ ತಂಡ

ಸಂಜು ಸ್ಯಾಮ್ಸನ್ ಅವರು ರಜನಿಕಾಂತ್ ಅವರ ಅಪಟ್ಟ ಅಭಿಮಾನಿಯಾಗಿದ್ದಾರೆ. ಈ ವಿಚಾರವನ್ನು ಅವರು ಹಲವು ಬಾರಿ ಹೇಳಿದ್ದರು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಾನು ಹೆಚ್ಚಾಗಿ ರಜನಿಕಾಂತ್ ಅವರ ಹಳೆಯ ಚಲನಚಿತ್ರಗಳು ಮತ್ತು ಮಲಯಾಳಂ ಚಲನಚಿತ್ರಗಳನ್ನು ವೀಕ್ಷಿಸಿದ್ದಾಗಿ ಹೇಳಿಕೊಂಡಿದ್ದರು. ಆದರೆ ಅವರನ್ನು ಭೇಟಿಯಾಗುವ ಅವಕಾಶ ಸಿಗದೇ ಇರುವುದಕ್ಕೆ ಬೇಸರಗೊಂಡಿದ್ದರು. ಇದೀಗ ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಿ ಸಂಜು ಸಂತಸಗೊಂಡಿದ್ದಾರೆ.

Exit mobile version