Site icon Vistara News

Sanju Samson: ರಾಹುಲ್​ ಆಗಮನ; ತವರಿಗೆ ಮರಳಿದ ಸಂಜು ಸ್ಯಾಮ್ಸನ್​

sanju samson

ಕೊಲಂಬೊ: ಏಷ್ಯಾಕಪ್​ಗೆ(Asia Cup 2023) ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದ ಕೇರಳ ಸ್ಟಂಪರ್​ ಸಂಜು ಸ್ಯಾಮ್ಸನ್(Sanju Samson)​ ಅವರು ತವರಿಗೆ ಮರಳಿದ್ದಾರೆ. ಇದಕ್ಕೆ ಕಾರಣ ಕನ್ನಡಿಗ, ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರ ಆಗಮನ. ಏಷ್ಯಾಕಪ್​ಗೆ ತಂಡ ಪ್ರಕಟಿಸುವಾಗ ರಾಹುಲ್​ ಅವರು ಸಂಪೂರ್ಣವಾಗಿ ಫಿಟ್​ ಆಗಿರಲಿಲ್ಲ. ಈ ಕಾರಣದಿಂದ ಬ್ಯಾಕಪ್​ ಕೀಪರ್​ ಆಗಿ ಸಂಜು ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಈಗ ರಾಹುಲ್​ ಫಿಟ್​ ಆಗಿ ತಂಡ ಸೇರಿದ್ದಾರೆ. ಹೀಗಾಗಿ ಸಂಜು ಅವರನ್ನು ಬಿಸಿಸಿಐ(BCCI) ತವರಿಗೆ ಮರಳುವಂತೆ ಸೂಚನೆ ನೀಡಿದೆ.

ಪಾಕಿಸ್ತಾನ ವಿರುದ್ಧ ಭಾರತ ತಂಡ ಭಾನುವಾರ ಸೂಪರ್​-4 ಪಂದ್ಯ ಆಡಲಿದೆ. ಇದಕ್ಕೂ ಮುನ್ನವೇ ಸಂಜು ಅವರು ಭಾರತಕ್ಕೆ ಮರಳಿದ್ದಾರೆ. ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ ಸಂಜು ಶನಿವಾರವೇ ಭಾರತಕ್ಕೆ ತಲುಪಲಿದ್ದಾರೆ ಎಂದು ತಿಳಿಸಿದೆ.

ಐಪಿಎಲ್‌ನಲ್ಲಿ ಶ್ರೇಷ್ಠ ಪ್ರದಶನ ತೋರುದರೂ ಟೀಮ್‌ ಇಂಡಿಯಾದಲ್ಲಿ ಸಂಜು ಅವರಿಗೆ ಸರಿಯಾದ ಅವಕಾಶ ನೀಡುತ್ತಿಲ್ಲ ಎಂಬ ಕೂಗೂ ಹಲವು ಬಾರಿ ಕೇಳಿ ಬಂದಿತ್ತು. ಇದೇ ಕಾರಣಕ್ಕೆ ವಿಂಡೀಸ್‌ ವಿರುದ್ಧದ ಟಿ20 ಮತ್ತು ಏಕದಿನ ಸರಣಿಯಲ್ಲಿ ಅರ=ವರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಅವರು ಇಲ್ಲಿ ಆಡಿದ ಪಂದ್ಯಗಳಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್‌ ನಡೆಸುವಲ್ಲಿ ವಿಫಲರಾಗಿದ್ದರು. ಕೇವಲ ಒಂದು ಅಥವಾ ಎರಡು ಸಿಕ್ಸರ್‌ ಬಾರಿಸಿ ಪೆಲಿಯನ್‌ ಪರೇಡ್‌ ನಡಿಸಿದ್ದರು. ಹೀಗಾಗಿ ಅವರನ್ನು ಏಷ್ಯಾಕಪ್‌ ಸೇರಿ ವಿಶ್ವಕಪ್​ಗೂ ಪರಿಗಣನೆ ಮಾಡಿಲ್ಲ.

ಸಂಜು ಸ್ಯಾಮ್ಸನ್​ ಅವರು ಭಾರತ ತಂಡದ ಪರ 13 ಏಕದಿನ ಪಂದ್ಯಗಳನ್ನು ಆಡಿ 390 ರನ್​ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಒಳಗೊಂಡಿದೆ. 24 ಟಿ20ಯಲ್ಲಿ ಭಾರತ ಪರ ಕಣಕ್ಕಿಳಿದು 374 ರನ್​ ಬಾರಿಸಿದ್ದಾರೆ. ಒಂದು ಅರ್ಧಶತಕ ಸಿಡಿಸಿದ್ದಾರೆ. ಐಪಿಎಲ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿರುವ ಸಂಜು 152 ಪಂದ್ಯಗಳಿಂದ 3888 ರನ್​ ಕಲೆಹಾಕಿದ್ದಾರೆ. ಅಲ್ಲದೆ 3 ಶತಕವನ್ನೂ ದಾಖಲಿಸಿದ್ದಾರೆ.

ಇಶಾನ್​ ಕಿಶನ್​ ಕೂಡ ಸದ್ಯ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರುತ್ತಿರುವ ಕಾರಣ ಸಂಜು ಅವರಿಗೆ ಆಡಲು ಜಾಗವಿಲ್ಲದಂತಾಗಿದೆ. ಒಟ್ಟಾರೆ ಸಂಜು ಅವರು ಪೂರ್ಣ ಪ್ರಮಾಣದ ಆಟಗಾರನಾಗಿ ಕಾಣಿಸಿಕೊಳ್ಳುವುದು ಸದ್ಯಕ್ಕೆ ಕಷ್ಟದ ಮಾತು.

ಇದನ್ನೂ ಓದಿ IND vs PAK: ಸೂಪರ್​-4 ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ, ಪಿಚ್​ ರಿಪೋರ್ಟ್​

ರಾಹುಲ್​ ಇನಿಂಗ್ಸ್ ಆರಂಭ

ಸಂಪೂರ್ಣ ಫಿಟ್​ ಆಗಿರುವ ಕೆ.ಎಲ್​ ರಾಹುಲ್​ ಅವರು ಭಾನುವಾರ ನಡೆಯುವ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಖಚಿತವಾಗಿದೆ. ಐಪಿಎಲ್ ಸಂದರ್ಭದಲ್ಲಿ ತೊಡೆಯ ಗಾಯದಿಂದ ಬಳಲಿದ್ದ ರಾಹುಲ್ ಶಸ್ತ್ರಚಿಕಿತ್ಸೆ ಪಡೆದಿದ್ದರು. ನಂತರ ಎನ್‌ಸಿಎಯಲ್ಲಿ ಪುನಶ್ಚೇತನ ಶಿಬಿರದಲ್ಲಿದ್ದರು. ಸೋಮವಾರ ಅವರು ಫಿಟ್​ನೆಸ್​ ಪಾಸ್​ ಆಗಿ ಶ್ರೀಲಂಕಾಕ್ಕೆ ತೆರಳಿದ್ದರು. ಶಕ್ರವಾರ ಪ್ರೇಮದಾಸ ಕ್ರಿಕೆಟ್​ ಮೈದಾನದಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸಿದ್ದಾರೆ. ಇದೀಗ ರೋಹಿತ್​ ಶರ್ಮ ಅವರು ರಾಹುಲ್​ ಪಾಕಿಸ್ತಾನ ವಿರುದ್ಧ ಭಾರತದ ಇನಿಂಗ್ಸ್​ ಆರಂಭಿಸಲಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕೀಪಿಂಗ್​ ಮಾತ್ರ ಇಶಾನ್​ ಕಿಶನ್​ ನಡೆಸುವುದಾಗಿ ತಿಳಿಸಿದ್ದಾರೆ.

Exit mobile version