Site icon Vistara News

Sanju Samson: ಪಂದ್ಯಶ್ರೇಷ್ಠ ಪ್ರಶಸ್ತಿಗೆ ನಾನು ಅರ್ಹನಲ್ಲ ಎಂದ ಸ್ಯಾಮ್ಸನ್; ಕಾರಣವೇನು?

Sandeep Sharma

ಇಂದೋರ್: ಲಕ್ನೋ(LSG) ವಿರುದ್ಧದ ಪಂದ್ಯದಲ್ಲಿ(IPL 2024) ಸ್ಫೋಟಕ ಬ್ಯಾಟಿಂಗ್​ ಮಾಡಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ರಾಜಸ್ಥಾನ್​(RR) ತಂಡದ ನಾಯಕ ಸಂಜು ಸ್ಯಾಮ್ಸನ್(Sanju Samson)​, ತಾನು ಈ ಪ್ರಶಸ್ತಿಗೆ ಅರ್ಹನಲ್ಲ ಎಂದು ಹೇಳಿದ್ದಾರೆ. ಪಂದ್ಯದ ಬಳಿಕ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಸಂಜು ‘ನಿಜ ಹೇಳಬೇಕೆಂದರೆ ನಾನು ಈ ಟ್ರೋಫಿಗೆ ಅರ್ಹನಲ್ಲ. ಇದನ್ನು ಬೌಲರ್ ಸಂದೀಪ್ ಶರ್ಮಗೆ ಕೊಡಬೇಕು ಎಂದು ಹೇಳಿದರು.

ಸಂದೀಪ್​ ಶರ್ಮ(Sandeep Sharma) ಅವರು ಕೊನೆಯ ಓವರ್ ಅದ್ಭುತವಾಗಿ ಬೌಲಿಂಗ್ ಮಾಡದೇ ಇದ್ದಿದ್ದರೆ ನಾನು ಇವತ್ತು ಪಂದ್ಯಶ್ರೇಷ್ಠನಾಗುತ್ತಲೇ ಇರಲಿಲ್ಲ. ಹಾಗಾಗಿ ಈ ಪ್ರಶಸ್ತಿ ಅವರಿಗೆ ಸಲ್ಲಬೇಕು. ಯಾವುದೇ ಆಟಗಾರನಲ್ಲಿ ಕೌಶಲ್ಯವಿರುವುದು ಮುಖ್ಯವಲ್ಲ, ಅದನ್ನು ಒತ್ತಡದ ಸಂದರ್ಭದಲ್ಲಿ ಹೇಗೆ ಅಳವಡಿಸಿಕೊಳ್ಳುತ್ತಾರೆ ಎನ್ನುವುದು ಮುಖ್ಯ. ಅದು ಇವತ್ತು ಸಂದೀಪ್ ಅವರ ಆಟದಲ್ಲಿ ಕಂಡುಬಂದಿದೆ ಎಂದು ಹೇಳುವ ಮೂಲಕ ಸಂದೀಪ್​ ಪ್ರದರ್ಶನವನ್ನು ಸಂಜು ಕೊಂಡಾಡಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಸಂದೀಪ್​ ಅವರ ಬಗ್ಗೆ ಮಾತನಾಡಿದ್ದನ್ನು ಕಂಡು ನೆಟ್ಟಿಗರು ಸಂಜುಗೆ ಮೆಚ್ಚುಗೆ ಸೂಚಿಸಿದ್ದಾರೆ. ಇದು ಓರ್ವ ನಾಯಕನ ನಿಜವಾದ ಗುಣ. ತನ್ನ ವೈಯಕ್ತಿಕ ದಾಖಲೆಗಿಂತ ಇತರೆ ಆಟಗಾರರ ಶ್ರಮವನ್ನು ಗುರುತಿಸುವ ನಿಮ್ಮ ವಿಶಾಲ ಮನೋಭಾವಕ್ಕೆ ಸಲಾಂ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಜು ಅವರು ಉತ್ತಮ ಪ್ರದರ್ಶನ ತೋರಿದ ಹೊರತಾಗಿಯೂ ಅವರಿಗೆ ಭಾರತ ತಂಡದಲ್ಲಿ ಖಾಯಂ ಸ್ಥಾನ ಸಿಗುತ್ತಿಲ್ಲ. ಬಿಸಿಸಿಐ ವಿರುದ್ಧ ಟೀಕೆಗಳು ಬಂದಾಗ ಮಾತ್ರ ಸಂಜು ಅವರನ್ನು ಆಯ್ಕೆ ಮಾಡಿ ಸರಣಿಯ ಒಂದೆರಡು ಪಂದ್ಯ ಆಡಿಸಿ ಬಳಿಕ ತಂಡದಿಂದ ಕೈಬಿಡಲಾಗುತ್ತಿದೆ.

ಇದನ್ನೂ ಓದಿ IPL 2024: ಮೊಹಮ್ಮದ್ ಶಮಿ ಬದಲಿಗೆ ಗುಜರಾತ್​ ಸೇರಿದ ಸಂದೀಪ್ ವಾರಿಯರ್

ಲಕ್ನೋ ವಿರುದ್ಧ ಭರ್ಜರಿ ಬ್ಯಾಟಿಂಗ್​ ನಡೆಸಿದ ಸಂಜು ಸ್ಯಾಮ್ಸನ್​, ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ಕೊಟ್ಟು ಪಂದ್ಯದ ಕೊನೆಯ ಎಸೆತದವರೆಗೂ ಲಕ್ನೋ ಬೌಲರ್​ಗಳ ಮೇಲೆ ಸವಾರಿ ಮಾಡಿದರು. 52 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ ಅಜೇಯ 82 ರನ್ ಬಾರಿಸಿದರು. ಮೂರನೇ ವಿಕೆಟ್‌ಗೆ ರಿಯಾನ್ ಪರಾಗ್ ಜತೆ ಸೇರಿ ಕೇವಲ 59 ಎಸೆತಗಳಲ್ಲಿ 93 ರನ್‌ಗಳ ಜತೆಯಾಟವಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

Exit mobile version