ಮುಂಬಯಿ: Sanju should retire ಎಂದು ಕ್ರಿಕೆಟ್ ಅಭಿಮಾನಿಗಳ ವರ್ಗವೊಂದು ಆಗ್ರಹಿಸಿದೆ. ವಾರದ ಹಿಂದೆ ಮುಕ್ತಾಯಕಂಡ ಐರ್ಲೆಂಡ್ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ ೪೨ ಎಸೆತಗಳಲ್ಲಿ ೭೭ ರನ್ ಬಾರಿಸಿದ ಅವರು ಯಾಕೆ ನಿವೃತ್ತಿ ಪಡೆಯಬೇಕು ಎಂಬುದು ಎಲ್ಲರ ಪ್ರಶ್ನೆ. ಆದರೆ, ಸಂಜು ಸ್ಯಾಮ್ಸನ್ ರಾಜೀನಾಮೆ ಕೇಳುತ್ತಿರುವುದು ಪ್ರದರ್ಶನ ವೈಫಲ್ಯದ ಕಾರಣಕ್ಕಲ್ಲ. ಅವರಿಗೆ ಇಂಗ್ಲೆಂಡ್ ವಿರುದ್ಧದ ಟಿ೨೦ ಸರಣಿಯ ೨ ಹಾಗೂ ೩ನೇ ಪಂದ್ಯದಲ್ಲಿ ಅವಕಾಶ ನೀಡಿಲ್ಲ ಎಂಬ ಅಭಿಮಾನಿಗಳ ಅಭಿಯಾನ ಇದು.
ಇಂಗ್ಲೆಂಡ್ ವಿರುದ್ಧದ ಟಿ೨೦ ಹಾಗೂ ಏಕದಿನ ಪಂದ್ಯಗಳ ಸರಣಿಗೆ ಬಿಸಿಸಿಐ ಹಿರಿಯರ ತಂಡದ ಆಯ್ಕೆಗಾರರು ಬುಧವಾರ ತಂಡ ಪ್ರಕಟಿಸಿತ್ತು. ಅದರಲ್ಲಿ ಮೊದಲ ಟಿ೨೦ ಪಂದ್ಯದಲ್ಲಿ ಮಾತ್ರ ಕೇರಳ ಮೂಲದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲಾಗಿದೆ. ೨ ಹಾಗೂ ೩ನೇ ಪಂದ್ಯಕ್ಕೆ ರಿಷಭ್ ಪಂತ್‌ಗೆ ಚಾನ್ಸ್ ಕೊಟ್ಟಿದ್ದಾರೆ. ಇದಕ್ಕೆ ಸಂಜು ಸ್ಯಾಮ್ಸನ್ ಅಭಿಮಾನಿಗಳು ಸಿಕ್ಕಾಪಟ್ಟೆ ಕೋಪೋದ್ರಿಕ್ತರಾಗಿದ್ದರೆ, ಇನ್ನಲವರು ಅಭಿಮಾನಿಗಳು ಕ್ರಿಕೆಟ್‌ನಲ್ಲಿ ಉತ್ತರದ ನೆಪೊಟಿಸಮ್ ಆರಂಭವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಿಷಭ್ ಯಾಕೆ, ಸಂಜು ಒಕೆ
ಸಂಜು ಸ್ಯಾಮ್ಸನ್ ಸದ್ಯ ಉತ್ತಮ ಬ್ಯಾಟಿಂಗ್ ಲಹರಿಯಲ್ಲಿದ್ದಾರೆ. ಆದರೆ ರಿಷಭ್ ಪಂತ್ ಬ್ಯಾಟಿಂಗ್ ವೈಫಲ್ಯ ಎದುರಿಸುತಿದ್ದು, ಕಳೆದ ೪೮ ಪಂದ್ಯಗಳಲ್ಲಿ ಅವರ ಬ್ಯಾಟ್‌ನಿಂದ ರನ್ ಹರಿದು ಬರಲಿಲ್ಲ. ಹೀಗಿರುವಾಗ ಸ್ಯಾಮ್ಸನ್ ಕೈ ಬಿಟ್ಟು ರಿಷಭ್‌ಗೆ ಅವಕಾಶ ಕೊಡುವುದು ಅನ್ಯಾಯವಲ್ಲವೇ ಎಂಬುದು ಅಭಿಮಾನಿಯೊಬ್ಬರ ಪ್ರಶ್ನೆ.
ಪ್ರದರ್ಶನದ ಉತ್ತುಂಗದಲ್ಲಿರುವ ಸಂಜು ಸ್ಯಾಮ್ಸನ್ ಅವರನ್ನು ಟೀಮ್ ಇಂಡಿಯಾ ಆಯ್ಕೆಗಾರರು ಪರಿಗಣಿಸುತ್ತಿಲ್ಲ. ಹೀಗಾಗಿ ಅವರು ಭಾರತ ತಂಡಕ್ಕೆ ನಿವೃತ್ತಿ ಘೋಷಿಸಿ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾ ತಂಡ ಸೇರಿಕೊಳ್ಳುವುದು ಉತ್ತಮ ಎಂದು ಅಭಿಮಾನಿಯೊಬ್ಬರು ಸಲಹೆ ನೀಡಿದ್ದಾರೆ.ʼ
ಎಲ್ಲರೂ ಈಗ ದಕ್ಷಿಣ ಭಾರತದ ಸಿನಿಮಾಗಳ ಅಭಿಮಾನಿಗಳು. ಅಂತೆಯೆ ಕ್ರಿಕೆಟ್‌ನಲ್ಲೊಬ್ಬ ದಕ್ಷಿಣ ಭಾರತದ ಸ್ಟಾರ್ ಇದ್ದಾರೆ. ಅವರೇ ಸಂಜು ಸ್ಯಾಮ್ಸನ್. ಆದರೆ, ಬಾಲಿವುಡ್ ನೆಪೋಟಿಸಮ್ ರೀತಿಯಲ್ಲಿ ಭಾರತೀಯ ಕ್ರಿಕೆಟ್‌ನಲ್ಲೂ ಉತ್ತರ ಭಾರತೀಯರು ಸ್ವಜನ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಇನ್ನೊಬ್ಬರು ಆಕ್ಷೇಪ ಎತ್ತಿದ್ದಾರೆ.
ಸಂಜುಗೆ ಕೊಡಬೇಕಿತ್ತು ಚಾನ್ಸ್ ಎಂದ ಸಬಾ
“ಹೌದು ಸಂಜು ಸ್ಯಾಮ್ಸನ್ ಸಾಗುತ್ತಿರುವ ಹಾದಿ ಕಠಿಣವಾಗಿದೆ. ಅದಾಗ್ಯೂ ಅವರ ಪ್ರದರ್ಶನವನ್ನು ಆಯ್ಕೆಗಾರರು ಪರಿಗಣಿಸಬೇಕಾಗಿದೆ. ಒಬ್ಬ ಆಟಗಾರ ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದಾಗ ಹಿಂದೆ ಅಯ್ಕೆಗೊಂಡಿದ್ದ ಅಟಗಾರನನ್ನು ಕೈಬಿಟ್ಟು ಉತ್ತಮ ಪ್ರದರ್ಶನ ನೀಡುವ ಆಟಗಾರನನ್ನು ಪರಿಗಣಿಸುವುದೇ ಸೂಕ್ತ,ʼʼ ಎಂದು ಬಿಸಿಸಿಐ ಆಯ್ಕೆ ಸಮಿತಿ ಮಾಜಿ ಸದಸ್ಯ ಸಬಾ ಕರಿಮ್ ಹೇಳಿದ್ದಾರೆ.