Site icon Vistara News

Sarfaraz Khan : ರಣಜಿ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಸರ್ಫರಾಜ್ ಖಾನ್ ಸಹೋದರ

Musheer Khan

ನವದೆಹಲಿ : ಸರ್ಫರಾಜ್ ಖಾನ್ (Sarfaraz Khan) ಅವರ ಕಿರಿಯ ಸಹೋದರ ಮುಶೀರ್ ಖಾನ್ (Musheer Khan) ರಣಜಿ ಟ್ರೋಫಿಯಲ್ಲಿ ಚೊಚ್ಚಲ ಶತಕ ಬಾರಿಸಿದ ಬಳಿಕ ತಮ್ಮ ಸ್ಕೋರ್ ಅನ್ನು ದ್ವಿಶತಕವನ್ನಾಗಿ ಪರಿವರ್ತಿಸಿದ್ದಾರೆ. ರಣಜಿ ಟ್ರೋಫಿಯ ಕ್ವಾರ್ಟರ್ ಫೈನಲ್​ನಲ್ಲಿ ಬರೋಡಾ ವಿರುದ್ಧ ಮುಂಬೈ ಪರ ಆಡಿದ 18 ವರ್ಷದ ಆಟಗಾರ ತಮ್ಮ ಚೊಚ್ಚಲ ರಣಜಿ ದ್ವಿಶತಕ ಬಾರಿಸಿದ್ದಾರೆ.

ಮುಶೀರ್ 350 ಎಸೆತಗಳಲ್ಲಿ 18 ಬೌಂಡರಿಗಳನ್ನು ಒಳಗೊಂಡ 200 ರನ್ ಗಳಿಸಿದರು. ಈ ಮೂಲಕ ಮುಂಬೈ 384 ರನ್ ಕಲೆಹಾಕಿತು. ಬಲಗೈ ಬ್ಯಾಟರ್​ ಇತ್ತೀಚೆಗೆ 2024 ರ ಅಂಡರ್ -19 ವಿಶ್ವಕಪ್​​ನಲ್ಲಿ ಭಾರತದ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಫೈನಲ್​​ನಲ್ಲಿ ಸೋತರು. ಅದೇನೇ ಇದ್ದರೂ, ಅವರು ಅಲ್ಲಿ ಎರಡು ಶತಕಗಳನ್ನು ಗಳಿಸಿದರು.

18ನೇ ವಯಸ್ಸಿನಲ್ಲಿ ಮುಂಬೈ ಪರ ದ್ವಿಶತಕ ಬಾರಿಸಿದ ಅವರು, ರಣಜಿ ಇತಿಹಾಸದಲ್ಲಿ 200 ರನ್ ಗಳಿಸಿದ ಎರಡನೇ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1996-97ರ ರಣಜಿ ಟ್ರೋಫಿ ಋತುವಿನಲ್ಲಿ ಸೌರಾಷ್ಟ್ರ ವಿರುದ್ಧ 18 ವರ್ಷ, 262 ದಿನಗಳ ವಯಸ್ಸಿನಲ್ಲಿ ದ್ವಿಶತಕ ಬಾರಿಸಿದ ವಾಸಿಮ್ ಜಾಫರ್ ಮಾತ್ರ ಮುಂಬೈ ಬ್ಯಾಟರ್​ಗಳ ಒಟ್ಟಾರೆ ದಾಖಲೆ ಹೊಂದಿದ್ದಾರೆ.

ಇದನ್ನೂ ಓದಿ : Yashasvi Jaiswal : ವೀರೇಂದ್ರ ಸೆಹ್ವಾಗ್ ದಾಖಲೆ ಮುರಿದ ಯಶಸ್ವಿ ಜೈಸ್ವಾಲ್​

ಮುಶೀರ್ ಅವರ ಬ್ಯಾಟಿಂಗ್ ಅನ್ನು ಅಭಿಮಾನಿಗಳು ಟ್ವಿಟರ್ ನಲ್ಲಿ ಶ್ಲಾಘಿಸಿದ್ದಾರೆ. ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಪ್ರತಿನಿಧಿಸುವಲ್ಲಿ ನಿರತರಾಗಿರುವ ಮುಶೀರ್ ಅವರ ಹಿರಿಯ ಸಹೋದರ ಸರ್ಫರಾಜ್ ತಮ್ಮ ಚೊಚ್ಚಲ ಪಂದ್ಯದಲ್ಲಿ ಮಿಂಚಿದ್ದಾರೆ. ಅವರು ಎರಡು ಅರ್ಧಶತಕಗಳನ್ನು ಗಳಿಸಿದರು. ಆದರೆ, ನಾಲ್ಕನೇ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ವಿಫಲಗೊಂಡಿದ್ದಾರೆ.

Exit mobile version