ಗಾಲೆ: ಪಾಕಿಸ್ತಾನ ಕ್ರಿಕೆಟ್ ತಂಡದ ಎಡಗೈ ಆಟಗಾರ ಸೌದ್ ಶಕೀಲ್(Saud Shakeel) ಅವರು ಶ್ರೀಲಂಕಾ ವಿರುದ್ಧ ಅಮೋಘ ದ್ವಿಶತಕ ಬಾರಿಸುವ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನ 312 ರನ್ನ್ಗಳನ್ನು ಬೆನ್ನಟ್ಟಿದ ಪಾಕ್ ಉತ್ತಮ ಆಟವಾಡಿ 461 ರನ್ ಬಾರಿಸಿ 149ರನ್ ಲೀಡ್ ಪಡೆದಿದೆ. ಇದಕ್ಕೆ ಉತ್ತರವಾಗಿ ಲಂಕಾ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
ಮೂರನೇ ದಿನವಾದ ಮಂಗಳವಾರ ಪಾಕಿಸ್ತಾನ 5ಕ್ಕೆ 221 ರನ್ ಮಾಡಿದಲ್ಲಿಂದ ದಿನದಾಟ ಮುಂದುವರಿಸಿತ್ತು. ಸೌದ್ ಶಕೀಲ್ 69 ರನ್ ಮಾಡಿ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು 2ನೇ ಶತಕ ಹಾಗೂ ಚೊಚ್ಚಲ ದ್ವಿಶತಕ ಬಾರಿಸಿ ಮಿಂಚಿದರು. ಒಟ್ಟು 361 ಎಸೆತ ಎದುರಿಸಿ ನಿಂತ ಅವರು 19 ಬೌಂಡರಿ ನೆರವಿನಿಂದ ಅಜೇಯ 208 ರನ್ ಬಾರಿಸಿದರು. ಇದೇ ವೇಳೆ ಹಲವು ದಾಖಲೆಗಳನ್ನು ಸರಿಗಟ್ಟಿದ್ದಾರೆ.
ಇದನ್ನೂ ಓದಿ Asia Cup 2023 : ಭಾರತ ತಂಡಕ್ಕೆ ಶುಭ ಸುದ್ದಿ; ಏಷ್ಯಾ ಕಪ್ಗೆ ಬಲಿಷ್ಠ ಬಲಗೈ ಬ್ಯಾಟರ್ ರೆಡಿ!
2️⃣0️⃣8️⃣ not out
— Pakistan Cricket (@TheRealPCB) July 18, 2023
3️⃣6️⃣1️⃣ balls
1️⃣9️⃣ fours
𝙍𝙤𝙖𝙧 like @saudshak! Phenomenal innings by the southpaw 💪#SLvPAK pic.twitter.com/g2Kz7QYtdg
ಸೌದ್ ಶಕೀಲ್ ಸಾಧನೆಗಳ ಪಟ್ಟಿ
1. ಟೆಸ್ಟ್ ಕ್ರಿಕೆಟ್ನ 10 ಇನಿಂಗ್ಸ್ನಲ್ಲಿ ಅತಿ ಹೆಚ್ಚು ಬ್ಯಾಟಿಂಗ್ ಎವರೇಜ್ ಹೊಂದಿದವರ ಪಟ್ಟಿಯಲ್ಲಿ ಶಕೀಲ್(98.50) ದ್ವಿತೀಯ ಸ್ಥಾನ ಪಡೆದರು. ಆಸ್ಟ್ರೇಲಿಯಾದ ಸರ್ ಡಾನ್ ಬ್ರಾಡ್‌ಮನ್(99.95)(don bradman) ಅಗ್ರಸ್ಥಾನಲ್ಲಿದ್ದಾರೆ.
2. ಶ್ರೀಲಂಕಾದಲ್ಲಿ ಡಬಲ್ ಸೆಂಚುರಿ ಬಾರಿಸಿದ ಮೊದಲ ಪಾಕಿಸ್ತಾನಿ ಆಟಗಾರ ಎಂಬ ಹೆಗ್ಗಳಿಕೆಗೆ ಶಕೀಲ್ ಪಾತ್ರರಾದರು.
3. ಶ್ರೀಲಂಕಾದಲ್ಲಿ ದ್ವಿಶತಕ ಬಾರಿಸಿದ ಮೂರನೇ ಏಷ್ಯಾದ ಬ್ಯಾಟರ್ ಎಂಬ ದಾಖಲೆ ಬರೆದರು. ಇದರೊಂದಿಗೆ ಜತೆಗೆ ಸಚಿನ್ ತೆಂಡೂಲ್ಕರ್ ಹಾಗೂ ವೀರೇಂದ್ರ ಸೆಹವಾಗ್ ಅವರ ದಾಖಲೆಯೊಂದನ್ನು ಸರಿಗಟ್ಟಿದರು. ಸಚಿನ್(sachin tendulkar) ಅವರು 2010ರಲ್ಲಿ ಸೆಹವಾಗ್(virender sehwag) 2008ರಲ್ಲಿ ಲಂಕಾ ನೆಲದಲ್ಲಿ ದ್ವಿಶತಕ ಬಾರಿಸಿದ್ದರು.
4. ಲಂಕಾ ವಿರುದ್ಧ ದ್ವಿಶತಕ ಬಾರಿಸಿದ ವಿಶ್ವ ಕ್ರಿಕೆಟಿಗರ ಪಟ್ಟಿಯಲ್ಲಿ ಶಕೀಲ್ಗೆ 4ನೇ ಸ್ಥಾನ. ಇದಕ್ಕೂ ಮುನ್ನ ವೀರೇಂದ್ರ ಸೆಹವಾಗ್ (208), ಸಚಿನ್ ತೆಂಡೂಲ್ಕರ್ (203) ಹಾಗೂ ಜೋ ರೂಟ್ (228) ಅವರು ಈ ಸಾಧನೆ ಮಾಡಿದ್ದರು.
5. ಪಾಕಿಸ್ತಾನ ಪರ ದ್ವಿಶತಕ ಸಿಡಿಸಿದ 23ನೇ ಬ್ಯಾಟರ್ ಎಂಬ ಹೆಗ್ಗಳಿಕೆಗೂ ಸೌದ್ ಶಕೀಲ್ ಪಾತ್ರರಾಗಿದ್ದಾರೆ.
6. ವಿದೇಶಿ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಸಿಡಿಸಿದ 2ನೇ ಪಾಕ್ ಆಟಗಾರ ಎಂಬ ಹಿರಿಮೆ ಸೌದ್ ಶಕೀಲ್ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ 1971 ರಲ್ಲಿ ಇಂಗ್ಲೆಂಡ್ ವಿರುದ್ಧ ಝಹೀರ್ ಅಬ್ಬಾಸ್ ದ್ವಿಶತಕ ಬಾರಿಸಿದ್ದರು. ಇದು ಪಾಕ್ ಪರ ಆಟಗಾರನೋರ್ವ ವಿದೇಶ ನೆಲದಲ್ಲಿ ದಾಖಲಿಸಿದ ಮೊದಲ ದ್ವಿಶತಕವಾಗಿದೆ.