ಮುಂಬಯಿ: ಟೀಮ್ ಇಂಡಿಯಾದ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಅವರು ಮರಾಠಿ ನಟಿ ಸಯಾಲಿ ಸಂಜೀವ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡುತ್ತಿದೆ. ಆದರೆ ಇದೀಗ ಸಯಾಲಿ ಅವರು ಋತುರಾಜ್ ಅವರೊಂದಿಗಿನ ಸಂಬಂಧದ ಸುದ್ದಿಯ ಬಗ್ಗೆ ಮೌನ ಮುರಿದಿದ್ದು ನಾವಿಬ್ಬರು ಸ್ನೇಹಿತರು ಎಂದು ಹೇಳಿದ್ದಾರೆ. ಜತೆಗೆ ಈ ರೂಮರ್ಸ್ನಿಂದ ನಮ್ಮ ಸ್ನೇಹ ಹದಗೆಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸಂದರ್ಶನದಲ್ಲಿ ಮಾತನಾಡಿದ ಸಯಾಲಿ ಸಂಜೀವ್, ‘ನಮ್ಮಿಬ್ಬರ ನಡುವೆ ಅಂತಹದ್ದೇನೂ ಇಲ್ಲ. ಈ ವದಂತಿಗಳಿಂದಾಗಿ ನಮ್ಮ ಸ್ನೇಹವೂ ಹದಗೆಟ್ಟಿದೆ. ನಾವು ಸ್ನೇಹಿತರಂತೆ ಪರಸ್ಪರ ಮಾತನಾಡಲು ಸಾಧ್ಯವಾಗುತ್ತಿಲ್ಲ” ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುಳ್ಳು ಸುದ್ದಿಯಿಂದ ನಮ್ಮ ವೈಯಕ್ತಿಕ ಜೀವನದಲ್ಲಿಯೂ ಕೆಲವು ಸಮಸ್ಯೆಗಳು ಉದ್ಭವಿಸುತ್ತವೆ, ಅದು ಗಾಸಿಪರ್‌ಗಳಿಗೆ ಅರ್ಥವಾಗುವುದಿಲ್ಲ. ಈ ರೀತಿಯ ಸುದ್ದಿ ಹಬ್ಬಿಸುವ ಮೊದಲು ಸತ್ಯವನ್ನು ಅರಿಯಬೇಕು. ಒಬ್ಬ ಕ್ರಿಕೆಟಿಗನ ಜತೆ ಮಾತನಾಡಿದರೆ ಅಥವಾ ಜತೆಯಾಗಿ ಕಾಣಿಸಿಕೊಂಡರೆ ಅದನ್ನು ಡೇಟಿಂಗ್ ಎಂದು ಭಾವಿಸುವುದು ತಪ್ಪು ಎಂದು ತಮ್ಮ ವಿರುದ್ಧ ಸುಳ್ಳು ವದಂತಿ ಹಬ್ಬುತ್ತಿರುವ ನೆಟ್ಟಿಗರಿಗೆ ಸಯಾಲಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ | INDvsPAK | ತಪ್ಪು ಹೇಳಿಕೆಗಳನ್ನು ನೀಡಿ ಬಿಸಿಸಿಐ ಮೇಲೆ ಗೂಬೆ ಕೂರಿಸುತ್ತಿರುವ ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ!