ಮುಂಬಯಿ: ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಮತ್ತು ಅವರ ಪತ್ನಿ ಬಾಲಿವುಡ್ ನಟಿ ಅನುಷ್ಕಾ ಶರ್ಮಾ(anushka sharma) ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲ ದಿನಗಳ ಹಿಂದೆ ಕೊಹ್ಲಿ ಮತ್ತು ಅನುಷ್ಕಾ(Virat And Anushka) ಮುಂಬೈಯ ಹೆರಿಗೆ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿರುವುದಾಗಿಯೂ ತಿಳಿದುಬಂದಿದೆ.
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2017ರ ಡಿ11ರಂದು ವಿವಾಹವಾಗಿದ್ದರು. 2021ರ ಜನವರಿಯಲ್ಲಿ ಅನುಷ್ಕಾ ಶರ್ಮಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈ ಮಗುವಿಗೆ ವಮಿಕಾ ಎಂದು ಹೆಸರಿಡಲಾಗಿದೆ. ಇದೀಗ ಅನುಷ್ಕಾ ಗರ್ಭಿಣಿಯಾಗಿದ್ದು ದ್ವಿತೀಯ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅನುಷ್ಕಾ ಶರ್ಮಾ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ. ಜತೆಗೆ ವಿರಾಟ್ ಕೊಹ್ಲಿ ಅವರೊಂದಿಗೆ ಎಲ್ಲಿಗೂ ಪ್ರಯಾಣಿಸುತ್ತಿಲ್ಲ ಎನ್ನಲಾಗಿದೆ. ಆದರೆ ಈ ವಿಚಾರವನ್ನು ಕೊಹ್ಲಿ ಹಾಗೂ ಅನುಷ್ಕಾ ಅಧಿಕೃತಪಡಿಸಿಲ್ಲ.
ಮೂಲಗಳ ಪ್ರಕಾರ ಅನುಷ್ಕಾ ಮುಂಬೈಯ ಹೆರಿಗೆ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಫೋಟೋಗಳನ್ನು ಎಲ್ಲಿಯೂ ಪ್ರಕಟಿಸದಂತೆ ಪಾಪರಾಜಿಗಳಿಗೆ ವಿನಂತಿಸಿದ್ದಾರೆ ಎನ್ನಲಾಗಿದೆ. ಅನುಷ್ಕಾ ಅವರು ಗರ್ಭಿಣಿಯಾಗಿದ್ದಾರೆ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ತಕ್ಷಣ ವಿರಾಟ್ ಅವರ ಅಭಿಮಾನಿಗಳು ಪ್ರಿನ್ಸ್ ಕಿಂಗ್ ಕೊಹ್ಲಿ ನೋಡಲು ಕಾತರವಾಗಿದ್ದೇವೆ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ. ಸದ್ಯ ವಿರಾಟ್ ಅವರು ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದ್ದು ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಆಡುತ್ತಿದ್ದಾರೆ.
ಇದನ್ನೂ ಓದಿ Anushka Sharma: ಲಂಡನ್‌ನಲ್ಲಿ ಜಾಲಿ ಮೂಡಲ್ಲಿರೋ ಅನುಷ್ಕಾ ಶರ್ಮಾ; ಈಗ ಕೊಹ್ಲಿ ಫೋಟೊಗ್ರಾಫರ್!
Virat Kohli & Anushka Sharma are going to be parents again.
— Varad (@CricVarad) September 30, 2023
Anushka's Baby Dump is quite visible !
Baby Kohli is arriving ❤️#ViratKohli #AnushkaSharma #ICCWorldCup2023 pic.twitter.com/UCY2cNh1XH
ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.
“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು.