Site icon Vistara News

Pro Kabaddi : ಬೆಂಗಳೂರು ತಂಡಕ್ಕೆ ಸತತ ಎರಡನೇ ಸೋಲು

Bangalore Bulls

ಅಹಮದಾಬಾದ್​: ಕೊನೇ ಹಂತದಲ್ಲಿ ತಿರುಗೇಟು ನೀಡಿದ ಹೊರತಾಗಿಯೂ ಬೆಂಗಾಲ್ ವಾರಿಯರ್ಸ್ ವಿರುದ್ಧ 32-30 ಅಂಕಗಳಿಂದ ಸೋಲು ಕಂಡಿರುವ ಬೆಂಗಳೂರು ಬುಲ್ಸ್ ತಂಡ ಹಾಲಿ ಆವೃತ್ತಿಯ ಪ್ರೊ ಕಬಡ್ಡಿ ಲೀಗ್​ನಲ್ಲಿ ಸತತ ಎರಡನೇ ಸೋಲಿಗೆ ಒಳಗಾಯಿತು. ಸೋಮವಾರ ಟ್ರಾನ್ಸ್ ಸ್ಟೇಡಿಯಾ ಇಕೆಎ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ವಾರಿಯರ್ಸ್ ತಂಡ ಆರಂಭದಿಂದಲೇ ಪಾರಮ್ಯ ಮೆರೆದು ಗೆಲುವು ಸಾಧಿಸಿತು. ಬುಲ್ಸ್​ ಬಗಳ ತನ್ನ ಮೊದಲ ಪಂದ್ಯದಲ್ಲಿ ಗುಜರಾತ್​ ಜಯಂಟ್ಸ್ ವಿರುದ್ಧ ಸೋಲು ಕಂಡಿತ್ತು.

ಮಣಿಂದರ್ ಅವರು ಸಂಜೆಯ ಮೊದಲ ರೇಡ್ ನೊಂದಿಗೆ ಆಟವನ್ನು ಪ್ರಾರಂಭಿಸಿದ್ದರು. ಇದು ಬೋನಸ್ ಪಾಯಿಂಟ್ ಮತ್ತು ಟಚ್ ಪಾಯಿಂಟ್ ಕೂಡ ತಂದರು. ಮತ್ತೊಂದೆಡೆ, ಭರತ್ ತನ್ನ ಮೊದಲ ರೇಡ್ ನಲ್ಲೇ ಟ್ಯಾಕಲ್ ಆದರು. ಈ ಮೂಲಕ ಬೆಂಗಳೂರು ತಂಡಕ್ಕೆ ಶುಭಾರಂಭ ದೊರಕಲಿಲ್ಲ. ಆದಿತ್ಯ ಶಿಂಧೆ ಡು ಆರ್ ಡೈ ರೇಡ್ ಮೂಲಕ ಅಂಕ ಗಳಿಸುವವರೆಗೂ ಬೆಂಗಳೂರು ಬುಲ್ಸ್ ಚೇತರಿಸಿಕೊಂಡಿರಲಿಲ್ಲ. ಅನೇಕ ದಾಳಿಗಳನ್ನು ನಡೆಸಿದರೂ ಉಪಯೋಗವಾಗಲಿಲ್ಲ. ಆದರೆ ನೀರಜ್ ನರ್ವಾಲ್ ಅವರ ಒಂದು ಸೂಪರ್ ರೇಡ್ ಬುಲ್ಸ್ ತಂಡದ ಹೋರಾಟಕ್ಕೆ ಬಲ ನೀಡಿತು. ಆದಾಗ್ಯೂ ವಾರಿಯರ್ಸ್ ಪಂದ್ಯದ ಮೊದಲಾರ್ಧಕ್ಕೆ 14-11 ಅಂಕಗಳ ಅಂತರದಿಂದ ಮುನ್ನಡೆ ಪಡೆದುಕೊಂಡಿತು.

ದ್ವಿತೀಯಾರ್ಧದ ಕೆಲವೇ ನಿಮಿಷಗಳಲ್ಲಿ ಬೆಂಗಾಲ್​ ತಂಡ ಮಣಿಂದರ್ ಸಿಂಗ್, ಎದುರಾಳಿ ತಂಡವನ್ನು ಆಲೌಟ್ ಮಾಡಿದರು. ಇದರ ಫಲವಾಗಿ ವಾರಿಯರ್ಸ್ 23-15ರಲ್ಲಿ ಅಂದರೆ 8 ಅಂಕಗಳ ಮುನ್ನಡೆ ಸಾಧಿಸಿತು. ಬಳಿಕ ಬೆಂಗಳೂರು ನಿಧಾನವಾಗಿ ಸ್ಪರ್ಧೆಗೆ ಮರಳಿತು. ಪಂದ್ಯ ಮುಗಿಯಲು ಆರು ನಿಮಿಷಗಳು ಬಾಕಿ ಇರುವಾಗ ಅಂಕಗಳ ಅಂತರ ಎರಡಕ್ಕೆ ಇಳಿಯಿತು. ಪಂದ್ಯದ ಕೊನೆಯ ನಿಮಿಷದಲ್ಲಿ ವಿಶ್ವಾಸ್ ಅವರ ರೇಡ್ ಮತ್ತು ದರ್ಪಣ್ ಅವರ ಟ್ಯಾಕಲ್ ವಾರಿಯರ್ಸ್ ಗೆ ಜಯ ತಂದುಕೊಟ್ಟಿತು.

ಪುಣೇರಿ ಪಲ್ಟನ್​ ತಂಡಕ್ಕೆ ಜಯ

ದಿನ ಮೊದಲ ಪಂದ್ಯದಲ್ಲಿ ಪುಣೇರಿ ಪಲ್ಟನ್ ತಂಡ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು 37-33 ಅಂಕಗಳಿಂದ ಮಣಿಸಿತು. ಅರ್ಜುನ್ ದೇಶ್ವಾಲ್ (17 ಪಾಯಿಂಟ್ಸ್) ಮತ್ತು ಅಸ್ಲಂ ಇನಾಮ್ದಾರ್ (10 ಪಾಯಿಂಟ್ಸ್) ದಿನದ ಅತ್ಯುತ್ತಮ ಪ್ರದರ್ಶನ ನೀಡಿದರು.

ಇದನ್ನೂ ಓದಿ : Rohit Sharma : ಫಾರಿನ್ ಟೂರ್​ ಮುಗಿಸಿ ಮರಳಿದ ರೋಹಿತ್​ ಶರ್ಮಾ ಫ್ಯಾಮಿಲಿ

ಆರನೇ ನಿಮಿಷದಲ್ಲಿ ಇರಾನಿನ ಆಲ್ರೌಂಡರ್ ಮೊಹಮದ್ರೆಜಾ ಶಾದ್ಲೋಯಿ ಚಿಯಾನೆಹ್ ಅವರು ಅಜಿತ್ ಕುಮಾರ್ ಅವರನ್ನು ಬಲೆಗೆ ಬೀಳಿಸಿದಾಗ ಪುಣೇರಿ ಪಲ್ಟನ್ 6-3 ಮುನ್ನಡೆ ಸಾಧಿಸಿತು. ಆದಾಗ್ಯೂ, ಪ್ಯಾಂಥರ್ಸ್ ತಮ್ಮ ರೈಡರ್​ಗಳ ಮೂಲಕ ಆಟಕ್ಕೆ ಮರಳಿತು. 14ನೇ ನಿಮಿಷದಲ್ಲಿ ಅಬಿನೇಶ್ ನಟರಾಜನ್ ಹಾಗೂ ಮೋಹಿತ್ ಗೋಯಟ್​ ಗಳಿಸಿದ ಅಂಕಗಳಿಂದ ಅಜಿತ್ ಕುಮಾರ್ ಪುಣೇರಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ದ್ವಿತೀಯಾರ್ಧದ ಮೊದಲ ರೇಡ್​ನಲ್ಲಿ ಎರಡು ಅಂಕಗಳನ್ನು ಗಳಿಸುವ ಮೂಲಕ ಅರ್ಜುನ್ ತಮ್ಮ ಪಿಕೆಎಲ್ ವೃತ್ತಿಜೀವನದ 36 ನೇ ಸೂಪರ್ 10 ಅನ್ನು ತಂದರು. ಪ್ಯಾಂಥರ್ಸ್ ಮೇಲುಗೈ ಸಾಧಿಸಿದ ಹೊತ್ತಲ್ಲಿ, ಪುಣೇರಿ ಪಲ್ಟನ್ ಪ್ರಬಲ ಹೋರಾಟವನ್ನು ನಡೆಸಿತು. ಎದುರಾಳಿ 25 ನಿಮಿಷಗಳ ಆಟದಲ್ಲಿ ಪುಣೇರಿ ಪಲ್ಟನ್ 21-23 ಅಂಕಗಳ ಮೂಲಕ ಹಿನ್ನಡೆಯನ್ನು ತಗ್ಗಿಸಿಕೊಂಡಿತು. 30ನೇ ನಿಮಿಷದಲ್ಲಿ ಅಸ್ಲಂ ಗಳಿಸಿದ ಎರಡು ಯಶಸ್ವಿ ರೈಡ್ ಗಳು ಮತ್ತು ಸಂಕೇತ್ ಸಾವಂತ್ ಅವರ ಬೃಹತ್ ಟ್ಯಾಕಲ್ ನೆರವಿನಿಂದ 25-25ರಲ್ಲಿ ಸಮಬಲ ಸಾಧಿಸಿತು. ಕೊನೆಯಲ್ಲಿ ಅಸ್ಲಾಂ ತಮ್ಮ ಸೂಪರ್ 10 ಮೂಲಕ ತಂದು ಪುಣೇರಿ ಪಲ್ಟನ್ ತಂಡವನ್ನು ಚೊಚ್ಚಲ ನಾಯಕತ್ವದಲ್ಲಿ ಗೆಲುವಿನತ್ತ ಮುನ್ನಡೆಸಿದರು.

ಮಂಗಳವಾರದ ಪಂದ್ಯದ ವಿವರ

ಮಂಗಳವಾರ (ಡಿಸೆಂಬರ್​5ರಂದು) ಒಂದು ಪಂದ್ಯ ನಡೆಯಲಿವೆ. ಮೊದಲ ಪಂದ್ಯಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಯು ಮುಂಬಾ ಆಡಲಿದೆ. ಈ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಪ್ರೊ ಕಬಡ್ಡಿ ಲೀಗ್ ನ 10ನೇ ಆವೃತ್ತಿ ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ನೇರ ಪ್ರಸಾರವಾಗಲಿದೆ.

Exit mobile version