Site icon Vistara News

Asia Cup | ಅಫಘಾನಿಸ್ತಾನ ತಂಡಕ್ಕೆ ಎರಡನೇ ಜಯ, ಬಾಂಗ್ಲಾದೇಶ ತಂಡಕ್ಕೆ ಮೊದಲ ಪಂದ್ಯದಲ್ಲಿ ಸೋಲು

asia cup

ಶಾರ್ಜಾ : ಏಷ್ಯಾ ಕಪ್‌ ೨೦೨೨ (Asia Cup) ಕ್ರಿಕೆಟ್‌ ಟೂರ್ನಿಯಲ್ಲಿ ಮಂಗಳವಾರ ನಡೆದ ಬಿ ಗುಂಪಿನ ಹಣಾಹಣಿಯಲ್ಲಿ ಅಘಾನಿಸ್ತಾನ ತಂಡ ಬಾಂಗ್ಲಾದೇಶ ತಂಡವನ್ನು ೭ ವಿಕೆಟ್‌ಗಳಿಂದ ಸೋಲಿಸಿದೆ. ಈ ಮೂಲಕ ಆಘ್ಫನ್‌ ತಂಡ ಹಾಲಿ ಆವೃತ್ತಿಯ ಮೊದಲೆರಡು ಪಂದ್ಯಗಳಲ್ಲಿ ವಿಜಯ ಸಾಧಿಸಿದರೆ, ಎದುರಾಳಿ ಬಾಂಗ್ಲಾದೇಶ ತಂಡ ಮೊದಲ ಹಣಾಹಣಿಯಲ್ಲಿ ಸೋಲಿಗೆ ಒಳಗಾಯಿತು.

ಶಾರ್ಜಾ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ ತಂಡ ೨೦ ಓವರ್‌ಗಳಲ್ಲಿ ೭ ವಿಕೆಟ್‌ ನಷ್ಟಕ್ಕೆ ೧೨೭ ರನ್‌ ಬಾರಿಸಿತು. ಗುರಿ ಬೆನ್ನಟ್ಟಿದ ಮೊಹಮ್ಮದ್‌ ನಬಿ ನೇತೃತ್ವದ ಅಫಘಾನಿಸ್ತಾನ ತಂಡ ಇನ್ನೂ ೯ ಎಸೆತಗಳು ಬಾಕಿ ಇರುವಂತೆಯೇ ೩ ವಿಕೆಟ್‌ ನಷ್ಟಕ್ಕೆ ೧೩೧ ರನ್‌ ಬಾರಿಸಿ ಜಯ ಸಾಧಿಸಿತು.

ಅಘಘಾನಿಸ್ತಾನ ತಂಡದ ಪರ ನಜೀಬುಲ್ಲಾ ಜದ್ರಾನ್‌ ೧೭ ಎಸೆತಗಳಿಗೆ ಅಜೇಯ ೪೩ ರನ್‌ ಬಾರಿಸಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರೆ, ಇಬ್ರಾಹಿಂ ಜದ್ರಾನ್‌ ಅಜೇಯ ೪೨ ರನ್‌ ಬಾರಿಸಿ ತಂಡದ ಗೆಲುವಿಗೆ ಸಹಕರಿಸಿದರು. ಆರಂಭಿಕ ಬ್ಯಾಟರ್‌ ಹಜರತುಲ್ಲಾ ಝಝೈ ೨೩ ರನ್‌ ಬಾರಿಸಿದರು.

ಅದಕ್ಕಿಂತ ಮೊದಲು ಬ್ಯಾಟ್‌ ಮಾಡಿದ ಬಾಂಗ್ಲಾದೇಶ ತಂಡ ರಶೀದ್‌ ಖಾನ್‌ (೨೨ಕ್ಕೆ೩) ಹಾಗೂ ಮುಜೀಬ್‌ ಉರ್‌ ರಹಮಾನ್‌ (೧೬ಕ್ಕೆ೩) ಅವರ ಮಾರಕ ದಾಳಿಗೆ ಬೆಚ್ಚಿ ಆರಂಭಿಕ ಹಿನ್ನಡೆಗೆ ಒಳಗಾಯಿತು. ೮೯ ರನ್‌ಗಳಿಗೆ ೬ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಾಂಗ್ಲಾದೇಶಕ್ಕೆ ಕೊನೆ ಹಂತದಲ್ಲಿ ಮೊಸದೆಕ್‌ ಹೊಸೈನ್‌ (೩೧ ಎಸೆತಕ್ಕೆ ೪೮), ಮಹಮದುಲ್ಲಾ (೨೫) ನೆರವಾದರು. ಈ ಮೂಲಕ ಕನಿಷ್ಠ ಮೊತ್ತಕ್ಕೆ ಆಲ್‌ಔಟ್‌ ಆಗದಂತೆ ನೋಡಿಕೊಂಡರು.

ಇದನ್ನೂ ಓದಿ | Asia Cup- 2022 | ಅಫಘಾನಿಸ್ತಾನ ತಂಡಕ್ಕೆ 8 ವಿಕೆಟ್‌ ಭರ್ಜರಿ ಜಯ, ಏಷ್ಯಾ ಕಪ್‌ನಲ್ಲಿ ಶುಭಾರಂಭ

Exit mobile version