ಬೆನೋನಿ (ದಕ್ಷಿಣ ಆಫ್ರಿಕಾ) : 19ರ ವಯೋಮಿತಿಯ ವನಿತೆಯರ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡದ ಗೆಲುವಿನ ಅಭಿಯಾನ ಮುಂದುವರಿದಿದೆ. ಸೋಮವಾರ ನಡೆದ ಪಂದ್ಯದಲ್ಲಿ ಶಫಾಲಿ ವರ್ಮಾ ನೇತೃತ್ವದದ ಭಾರತ ತಂಡ ಯುಎಇ ವಿರುದ್ಧ 122 ರನ್ಗಳ ಬೃಹತ್ ಜಯ ದಾಖಲಿಸಿದೆ. ಇದರೊಂದಿಗೆ ಭಾರತ ತಂಡ ಡಿ ಗುಂಪಿನಲ್ಲಿ ಅಗ್ರಸ್ಥಾನಕ್ಕೇರಿದೆ.
ವಿಲ್ಲೋವ್ಮೂರೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ ನಿಗದಿತ 20 ಓವರ್ಗಳಲ್ಲಿ 3 ವಿಕೆಟ್ಗೆ 219 ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಯುಎಇ ತಂಡ ತನ್ನ ಪಾಲಿನ 20 ಓವರ್ಗಳು ಮುಕ್ತಾಯಗೊಂಡಾಗ 5 ವಿಕೆಟ್ಗೆ 97 ರನ್ ಬಾರಿಸಲು ಶಕ್ತಗೊಂಡು ಸೋಲೊಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಶಫಾಲಿ ವರ್ಮ (78) ಹಾಗೂ ಶ್ವೇತಾ ಸೆಹ್ರಾವತ್ (74) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಉತ್ತಮ ಆರಂಭ ಪಡೆಯಿತು. ಈ ಜೋಡಿ ಮೊದಲ ವಿಕೆಟ್ಗೆ 111 ರನ್ಗಳ ಜತೆಯಾಟ ನೀಡಿತು. ಬಳಿಕ ರಿಚಾ ಘೋಷ್ 49 ರನ್ ಬಾರಿಸಿದರು. ಆದರೆ ಒಂದು ರನ್ಗಳಿಂದ ಅರ್ಧ ಶತಕ ದಾಖಲಿಸುವ ಅವಕಾಶದಿಂದ ವಂಚಿತರಾದರು. ಈ ಮೂವರ ಅಬ್ಬರದ ಬ್ಯಾಟಿಂಗ್ಗೆ ಭಾರತ ತಂಡ 200 ರನ್ಗಳ ಗಡಿ ದಾಟಿತು.
ಗುರಿ ಬೆನ್ನೆಟ್ಟಲು ಆರಂಭಿಸಿದ ಯುಎಇ ತಂಡ ಆರಂಭದಿಂದಲೇ ನಿಧಾನಗತಿಯ ಆಟಕ್ಕೆ ಮೊರೆ ಹೋಯಿತು. ಭಾರತ ತಂಡದ ಬೌಲರ್ಗಳ ನಿಖರ ದಾಳಿಗೆ ಕಂಗೆಟ್ಟಿತು. ಮೋಹಿಕಾ ಗೌರ್ (26), ಲಾವಣ್ಯ ಕೆನೆ (24) ಸ್ವಲ್ಪ ಮಟ್ಟಿಗೆ ಪ್ರತಿರೋಧ ತೋರಿದರು. ಭಾರತ ಪರ ಶುಭಂ, ಟಿಟಾಸ್ ಸಧೂ, ಮನ್ನತ್ ಕಶ್ಯಪ್, ಪರ್ಶವಿ ಚೋಪ್ರಾ ತಲಾ ಒಂದು ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಭಾರತ: 20 ಓವರ್ಗಳಲ್ಲಿ 3 ವಿಕೆಟ್ಗೆ 219 (ಶ್ವೇತಾ ಸೆಹ್ರಾವತ್ 74, ಶಫಾಲಿ ವರ್ಮಾ 78, ರಿಚಾ ಘೋಷ್ 49, ಸಮೈರಾ 33ಕ್ಕೆ1).
ಯುಎಇ: 20 ಓವರ್ಗಳಲ್ಲಿ 5 ವಿಕೆಟ್ಗೆ 97 (ಮಹಿಳಾ ಗೌರ್ 26, ಲಾವಣ್ಯ ಕೆನ್ಯಾ 24, ಮನ್ನತ್ ಕಶ್ಯಪ್ 14ಕ್ಕೆ1).
ಇದನ್ನೂ ಓದಿ | Shafali Verma | ಒಂದೇ ಓವರ್ನಲ್ಲಿ 26 ರನ್ ಕಲೆಹಾಕಿ ವಿಶ್ವ ದಾಖಲೆ ಬರೆದ ಶಫಾಲಿ ವರ್ಮಾ!