Site icon Vistara News

Border Gavaskar Trophy : ಭಾರತ ತಂಡಕ್ಕೆ ನೆಟ್​ಬೌಲರ್​ಗಳಾಗಿ ನಾಲ್ಕು ಸ್ಪಿನ್ನರ್​ಗಳ ಆಯ್ಕೆ​

Washington Sundar

ನಾಗ್ಪುರ : ಸೀಮಿತ ಓವರ್​ಗಳ ಭಾರತ ತಂಡದ ಸದಸ್ಯರಾಗಿರುವ ವಾಷಿಂಗ್ಟನ್​ ಸುಂದರ್​ ಸೇರಿದಂತೆ ನಾಲ್ಕು ಸ್ಪಿನ್ನರ್​ಗ​ಳು ಮಂಬರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಗೆ (Border Gavaskar Trophy) ಭಾರತ ತಂಡದ ನೆಟ್​ಬೌಲರ್​ಗಳಾಗಿ ಆಯ್ಕೆಯಾಗಿದ್ದಾರೆ. ರಾಹುಲ್​ ಚಾಹರ್​, ಸೌರಭ್​ ಕುಮಾರ್ ಹಾಗೂ ತಮಿಳುನಾಡಿನ ಸಾಯಿ ಕಿಶೋರ್ ಆಯ್ಕೆಯಾಗಿರುವ ಸ್ಪಿನ್ನರ್​ಗಳಾಗಿದ್ದಾರೆ. ಈ ನಾಲ್ವರು ಸ್ಪಿನ್ನರ್​ಗ ಸೇರ್ಪಡೆಯಿಂದಾಗಿ ಮುಂದಿನ ಟೆಸ್ಟ್​ ಸರಣಿ ಸ್ಪಿನ್​ಗೆ ಪೂರಕ ಪಿಚ್ ಆಗಿರಲಿದೆ ಎಂಬ ಸೂಚನೆ ನೀಡಿದೆ.

ವಾಷಿಂಗ್ಟನ್​ ಸುಂದರ್ ಭಾರತ ಸೀಮಿತ ಓವರ್​ಗಳ ತಂಡದ ಭಾಗವಾಗಿದ್ದಾರೆ. ಅವರು 2021ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗಬ್ಬಾ ಟೆಸ್ಟ್​ನಲ್ಲಿ ಭಾರತ ತಂಡದ ಪರ ಪದಾರ್ಪಣೆ ಮಾಡಿದ್ದರು. ಅದೇ ವರ್ಷ ಮಾರ್ಚ್​ನಲ್ಲಿ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ನಲ್ಲೂ ಅವರು ಆಡಿದ್ದರು. ಇದೀಗ ಅವರು ನೆಟ್​ ಬೌಲರ್ ಸ್ಥಾನ ಪಡೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ಸರಣಿಗೆ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಆರ್​. ಅಶ್ವಿನ್​, ಕುಲ್ದೀಪ್​ ಯಾದವ್​, ರವೀಂದ್ರ ಜಡೇಜಾ ಹಾಗೂ ಅಕ್ಷರ್​ ಪಟೇಲ್ ಇದ್ದಾರೆ. ಆದಾಗ್ಯೂ ನೆಟ್​ಬೌಲಿಂಗ್​ಗೂ ಸ್ಪಿನ್ನರ್​ಗಳನ್ನೇ ಆಯ್ಕೆ ಮಾಡಲಾಗಿದೆ. ವೇಗದ ಬೌಲರ್​ಗಳು ಯಾರೂ ಇಲ್ಲ.

ಬಹುನಿರೀಕ್ಷಿತ ಬಾರ್ಡರ್​ ಗವಾಸ್ಕರ್​ ಟ್ರೋಫಿ ಫೆಬ್ರವರಿ 9ರಂದು ಆರಂಭವಾಗಲಿದೆ. ಅದೇ ರೀತಿ 17ರಂದು ನವ ದೆಹಲಿಯಲ್ಲಿ ಎರಡನೇ ಟೆಸ್ಟ್​ ಹಾಗೂ ಮಾರ್ಚ್​ 1 ಹಾಗೂ 9ರಂದು ಧರ್ಮಶಾಲಾ ಹಾಗೂ ಅಹಮದಾಬಾದ್​ನಲ್ಲಿ ಮೂರು ನಾಲ್ಕನೇ ಟೆಸ್ಟ್​ ಪಂದ್ಯ ಆರಂಭವಾಗಲಿದೆ.

ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಕೆಎಸ್ ಭರತ್ (ವಿಕೆಟ್​ಕೀಪರ್​), ಇಶಾನ್ ಕಿಶನ್ (ವಿಕೆಟ್​ ಕೀಪರ್​), ಆರ್ ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನದ್ಕತ್, ಸೂರ್ಯಕುಮಾರ್ ಯಾದವ್.

ಇದನ್ನೂ ಓದಿ : Border Gavaskar Trophy : ಆಸ್ಟ್ರೇಲಿಯಾ ತಂಡ ಮೈಂಡ್​ ಗೇಮ್​ ಆಡುತ್ತಿದೆ ಎಂದು ಆರೋಪಿಸಿದ ಅಶ್ವಿನ್​

Exit mobile version