Site icon Vistara News

ದಕ್ಷಿಣ ಆಫ್ರಿಕಾ ಟಿ20 ತಂಡಕ್ಕೆ ಹೊಸ ನಾಯಕನ ಆಯ್ಕೆ, ತೆಂಬಾ ಬುವುಮಾಗೆ ಕೊಕ್​

Selection of new captain for South Africa T20 team

#image_title

ಜೊಹಾನ್ಸ್​ಬರ್ಗ್​: ವೆಸ್ಟ್​ ಇಂಡೀಸ್​ ವಿರುದ್ಧದ ಟಿ20 ಸರಣಿಗೆ (T20 Cricket) ದಕ್ಷಿಣ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದ್ದು ಏಡೆನ್​ ಮಾರ್ಕ್ರಮ್​ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈ ಹಿಂದೆ ನಾಯಕರಾಗಿದ್ದ ತೆಂಬಾ ಬವುಮಾ ಅವರನ್ನು ಸರಣಿಯಿಂದ ಕೈ ಬಿಡಲಾಗಿರುವ ಹಿನ್ನೆಲೆಯಲ್ಲಿ ಯುವ ಆಟಗಾರ ಮಾರ್ಕ್ರಮ್​​ಗೆ ಹೊಣೆಗಾರಿಕೆ ವಹಿಸಲಾಗಿದೆ.

ಮಾರ್ಕ್ರಮ್​ಗೆ ನಾಯಕತ್ವದ ಅನುಭವ 19 ವಯೋಮಿತಿಯ ತಂಡದಲ್ಲಿಯೇ ದೊರಕಿದೆ. ಅದೇ ರೀತಿ ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸೌತ್ ಆಫ್ರಿಕಾ ಟಿ20 ಲೀಗ್​ನಲ್ಲಿ ಸನ್​ರೈಸರ್ಸ್ ಈಸ್ಟರ್ನ್​ ಕೇಪ್​ಟೌನ್​ ತಂಡದ ನಾಯಕರಾಗಿ ಚಾಂಪಿಯನ್​ಪಟ್ಟ ತಂದುಕೊಟ್ಟಿದ್ದರು. ಈ ಸಾಮರ್ಥ್ಯವನ್ನು ಪರಿಗಣಿಸಿ ನಾಯಕತ್ವ ಪಟ್ಟ ನೀಡಲಾಗಿದೆ. ಏತನ್ಮಧ್ಯೆ ಏಡೆನ್ ಅವರನ್ನು ಮುಂಬರುವ ಐಪಿಎಲ್​ಗೆ ಸನ್​ ರೈಸರ್ಸ್​ ಹೈದರಾಬಾದ್ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ದಕ್ಷಿಣ ಆಫ್ರಿಕಾ ತಂಡವು ವೆಸ್ಟ್ ಇಂಡೀಸ್ ವಿರುದ್ಧ 3 ಏಕದಿನ ಹಾಗೂ 5 ಟಿ20 ಪಂದ್ಯಗಳನ್ನಾಡಿದ್ದಾರೆ. ತಂಡದಲ್ಲಿ ಯುವ ಆಟಗಾರರ ಸಂಖ್ಯೆಯೇ ಹೆಚ್ಚಿದೆ.

ದಕ್ಷಿಣ ಆಫ್ರಿಕಾ ಏಕ ದಿನ ತಂಡ

ಏಡೆನ್ ಮಾರ್ಕ್ರಮ್ (ನಾಯಕ), ಕ್ವಿಂಟನ್ ಡಿ ಕಾಕ್, ಜಾರ್ನ್ ಫಾರ್ಚೂನ್​, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್​ ಕ್ಲಾಸೆನ್, ಸಿಸಂದಾ ಮಗಾಲಾ, ಡೇವಿಡ್ ಮಿಲ್ಲರ್, ಲುಂಗಿ ಎನ್​ಗಿಡಿ, ಆನ್ರಿಚ್​ ನೋರ್ಜೆ, ನ್ರಿಚ್ನೋ​ ಕಿಯಾ, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ರಿಲೀ ರೊಸ್ಸೊ, ತಬ್ರೈಜ್ ಶಮ್ಸಿ, ಟ್ರಿಸ್ಟಾನ್ ಸ್ಟಬ್ಸ್.

Exit mobile version