Site icon Vistara News

IND vs ENG: ಉಳಿದ ಮೂರು ಟೆಸ್ಟ್​ಗೆ ಇಂದು ಭಾರತ ತಂಡ ಪ್ರಕಟ; ಕೊಹ್ಲಿ, ರಾಹುಲ್​ ಆಗಮನ?

virat kohli and kl rahul

ಮುಂಬಯಿ: ಇಂಗ್ಲೆಂಡ್(IND vs ENG)​ ವಿರುದ್ಧದ 5 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಉಳಿದಿರುವ ಮೂರು ಟೆಸ್ಟ್​(IND vs ENG 3rd test) ಪಂದ್ಯಗಳಿಗೆ ಬಿಸಿಸಿಐ ಇಂದು ಭಾರತ ತಂಡವನ್ನು ಪ್ರಕಟಿಸುವ ಸಾಧ್ಯತೆ ಇದೆ. ವಿರಾಟ್​ ಕೊಹ್ಲಿ(Virat Kohli) ಮತ್ತು ಕೆ.ಎಲ್​ ರಾಹುಲ್(KL Rahul) ಅವರು ಈ ಪಂದ್ಯಗಳಿಗೆ ಲಭ್ಯರಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಬುಮ್ರಾಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ವೈಯಕ್ತಿಕ ಕಾರಣ ನೀಡಿ ಮೊದಲೆಡರು ಪಂದ್ಯಗಳಿಂದ ಹೊರಗುಳಿದಿದ್ದ ವಿರಾಟ್​ ಕೊಹ್ಲಿ ಮೂರನೇ ಪಂದ್ಯದ ಮೂಲಕ ತಂಡ ಸೇರಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ಟೈಮ್ಸ್​ ನೌ ವರದಿ ಮಾಡಿದೆ. ಜತೆಗೆ ಗಾಯದಿಂದಾಗಿ 2ನೇ ಪಂದ್ಯದಿಂದ ಹೊರಬಿದ್ದಿದ್ದ ಕೆ.ಎಲ್ ರಾಹುಲ್​ ಕೂಡ ಈ ಪಂದ್ಯಕ್ಕೆ ಲಭ್ಯರಿದ್ದಾರೆ ಎನ್ನಲಾಗಿದೆ.

ಬುಮ್ರಾಗೆ ವಿಶ್ರಾಂತಿ!


ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ತಂಡದ ಪ್ರಧಾನ ವೇಗಿ ಜಸ್​ಪ್ರೀತ್​ ಬುಮ್ರಾ ಅವರಿಗೆ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡುವುದು ಬಹುತೇಕ ಖಚಿತವಾಗಿದೆ. ವಿಶಾಖಪಟ್ಟಣದಲ್ಲಿ ಮುಕ್ತಾಯ ಕಂಡ ದ್ವಿತೀಯ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸುವಲ್ಲಿ ಜಸ್​ಪ್ರೀತ್​ ಬುಮ್ರಾ ಪ್ರಮುಖ ಪಾತ್ರವಹಿಸಿದ್ದರು. ಈ ಪಂದ್ಯದ ಎರಡೂ ಇನಿಂಗ್ಸ್​ ಸೇರಿ ಬುಮ್ರಾ 32 ಓವರ್​ ಬೌಲಿಂಗ್​ ನಡೆಸಿ ಒಟ್ಟು 9 ವಿಕೆಟ್​ ಉರುಳಿಸಿದ್ದರು. ಒಟ್ಟು 2 ಪಂದ್ಯಗಳು ಸೇರಿ 57 ಓವರ್​ ಬೌಲಿಂಗ್​ ನಡೆಸಿದ್ದರು. ಹೀಗಾಗಿ ಅವರಿಗೆ ಬಿಸಿಸಿಐ ಒಂದು ಪಂದ್ಯದಲ್ಲಿ ವಿಶ್ರಾಂತಿ ನೀಡಲು ನಿರ್ಧರಿಸಿದೆ.  ಒತ್ತಡ ಕಡಿಮೆ ಮಾಡುವ ನಿಟ್ಟಿನಲ್ಲೇ ಮೊಹಮ್ಮದ್​ ಸಿರಾಜ್​ ಅವರಿಗೆ ಆಯ್ಕೆ ಸಮಿತಿ ದ್ವಿತೀಯ ಪಂದ್ಯಕ್ಕೆ ವಿಶ್ರಾಂತಿ ನೀಡಿತ್ತು. ಇದೀಗ ಬುಮ್ರಾ ಸರದಿ.

ಇದನ್ನೂ ಓದಿ IND vs ZIM: ಭಾರತ-ಜಿಂಬಾಬ್ವೆ ಟಿ20 ಸರಣಿಯ ವೇಳಾಪಟ್ಟಿ ಹೀಗಿದೆ

ಶಮಿ-ಜಡೇಜಾ ಅಲಭ್ಯ


ಮೂಲಗಳ ಪ್ರಕಾರ ಗಾಯದ ಸಮಸ್ಯೆ ಎದುರಿಸುತ್ತಿರುವ ಮೊಹಮ್ಮದ್​ ಶಮಿ(Mohammed Shami), ರವೀಂದ್ರ ಜಡೇಜಾ(Ravindra Jadeja) ಇನ್ನೂ ಕೂಟ ಫಿಟ್​ ಆಗದ ಕಾರಣ ಸಂಪೂರ್ಣವಾಗಿ ಟೆಸ್ಟ್​ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ. ಶಮಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಲಂಡನ್​ಗೆ ಕಳುಹಿಸಲು ಬಿಸಿಸಿಐ ಈಗಾಗಲೇ ಸಿದ್ಧತೆ ನಡೆಸಿದೆ 2 ವಾರಗಳ ಹಿಂದೆಯೇ ಈ ವಿಚಾರವನ್ನು ಬಿಸಿಸಿಐ ತಿಳಿಸಿತ್ತು. ಈಗಾಗಲೇ ಸೂರ್ಯಕುಮಾರ್​ ಅವರು ಲಂಡನ್​ನಲ್ಲಿ​ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಟಾರ್ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಕೆ.ಎಲ್ ರಾಹುಲ್ ಮೂರನೇ ಪಂದ್ಯದಲ್ಲಿ ಆಡಿದರೆ, ಆಗ ಫಾರ್ಮ್‌ನಲ್ಲಿಲ್ಲದ ಬ್ಯಾಟರ್‌ಗಳಾದ ಶ್ರೇಯಸ್ ಅಯ್ಯರ್ ಮತ್ತು ರಜತ್ ಪಾಟಿದಾರ್ ಅವರನ್ನು ಆಡುವ ಬಳಗದಿಂದ ಕೈಬಿಡುವ ಸಾಧ್ಯತೆ ಇದೆ. ಜತೆಗೆ ಸತತವಾಗಿ ಕಳಪೆ ಪ್ರದರ್ಶನ ತೋರುತ್ತಿರುವ ವಿಕೆಟ್​ ಕೀಪರ್​ ಶ್ರೀಕರ್​ ಭರತ್​ ಬದಲು ಧೃವ್​ ಜುರೆಲ್ ಅವಕಾಶ ಪಡೆಯಬಹುದು. ಉಳಿದಂತೆ ಯಾವುದೇ ಬದಲಾವಣೆ ಕಂಡುಬಾರದು.

Exit mobile version