Site icon Vistara News

ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಟಿ20 ಮಾದರಿಗೆ ವಿದಾಯ, ಕಳಪೆ ಪ್ರದರ್ಶನವೇ ನಿವೃತ್ತಿಗೆ ಕಾರಣ?

ind vs pak

ಢಾಕಾ : ಬಾಂಗ್ಲಾದೇಶ ತಂಡದ ಹಿರಿಯ ಆಟಗಾರ ಹಾಗೂ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್‌ ಮುಷ್ಫಿಕರ್ ರಹೀಮ್‌, ಟಿ೨೦ ಮಾದರಿಯ ಕ್ರಿಕೆಟ್‌ಗೆ ಭಾನುವಾರ ಹಠಾತ್‌ ವಿದಾಯ ಹೇಳಿದ್ದಾರೆ. ಹಾಲಿ ಏಷ್ಯಾ ಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಾಂಗ್ಲಾದೇಶ ತಂಡ ಸೂಪರ್‌-೪ ಹಂತಕ್ಕೇರಲು ವಿಫಲಗೊಂಡ ಬೆನ್ನಲ್ಲೇ ಅವರು ನಿವೃತ್ತಿ ಪ್ರಕಟಿಸಿದ್ದಾರೆ. ಆದಾಗ್ಯೂ ಅವರು ಟಿ೨೦ ಹಾಗೂ ಟೆಸ್ಟ್‌ ಮಾದರಿಯಲ್ಲಿ ಆಟ ಮುಂದುವರಿಸಲಿದ್ದಾರೆ.

ಏಷ್ಯಾ ಕಪ್‌ನಲ್ಲಿ ಶ್ರೀಲಂಕಾ ಮತ್ತು ಅಫಘಾನಿಸ್ತಾನ ತಂಡಗಳ ವಿರುದ್ಧ ಬಾಂಗ್ಲಾದೇಶ ತಂಡ ಸೋಲು ಕಂಡಿತ್ತು. ಎರಡು ಪಂದ್ಯಗಳಲ್ಲಿ ಮಷ್ಪಿಕರ್‌ ಅವರು ಲಂಕಾ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಐದು ಎಸೆತಗಳಲ್ಲಿ ೪ ರನ್ ಬಾರಿಸಿದ್ದರೆ, ಅಫಘಾನಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ೧ ರನ್‌ ಮಾತ್ರ ಗಳಿಸಲು ಶಕ್ತಗೊಂಡಿದ್ದರು. ಅಂತೆಯೇ ಅವರು ಕಳೆದ ಹಲವಾರು ಸರಣಿಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದರು.

ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮುಷ್ಫಿಕರ್‌ ಕ್ಯಾಚೊಂದನ್ನು ಕೈ ಚೆಲ್ಲಿದ್ದರು. ಆ ಪಂದ್ಯದಲ್ಲಿ ಶ್ರೀಲಂಕಾ ತಂಡ ೨ ವಿಕೆಟ್‌ಗಳ ವೀರೋಚಿತ ಜಯ ದಾಖಲಿಸಿತ್ತು. ಹೀಗಾಗಿ ಬಾಂಗ್ಲಾದೇಶ ಕ್ರಿಕೆಟ್ ಅಭಿಮಾನಿಗಳಿಂದ ಅವರು ಟೀಕೆ ಎದುರಿಸಿದ್ದರು. ಹೀಗಾಗಿ ಅವರು ಏಕಾಏಕಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

೩೫ ವರ್ಷದ ಮುಷ್ಪಿಕ್‌ ಅವರು ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಪರ ೧೦೨ ಅಂತಾರಾಷ್ಟ್ರೀಯ ಟಿ೨೦ ಪಂದ್ಯಗಳನ್ನು ಆಡಿದ್ದಾರೆ. ೨೦೦೫ ರಲ್ಲಿ ಬಾಂಗ್ಲಾ ತಂಡಕ್ಕೆ ಪದಾರ್ಪಣೆ ಮಾಡಿರುವ ಅವರು ೬ ಅರ್ಧ ಶತಕಗಳೊಂದಿಗೆ ೧೫೦೦ ರನ್‌ ಬಾರಿಸಿದ್ದಾರೆ. ಅದೇ ರೀತಿ ೮೨ ಟೆಸ್ಟ್ ಪಂದ್ಯ ಹಾಗೂ ೩೩೬ ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ | Ind vs Pak | ಪಾಕಿಸ್ತಾನದ ವಿರುದ್ಧ ಭಾರತ ತಂಡಕ್ಕೆ ಮತ್ತೊಂದು ಮ್ಯಾಚ್‌ ಯಾಕೆ? ಇಲ್ಲಿದೆ ವಿವರ

Exit mobile version