ಇಸ್ಲಾಮಾಬಾದ್ : ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ನಾಯಕತ್ವದ ವೈಫಲ್ಯಕ್ಕಾಗಿ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪ್ರಮುಖವಾಗಿ ತವರಿನ ಸರಣಿಯಲ್ಲಿ ಪಾಕ್ ತಂಡದ ನಿರಂತರ ಸೋಲಿಗೆ ಅವರನ್ನು ಹೊಣೆಗಾರನನ್ನಾಗಿ ಮಾಡಲಾಗುತ್ತಿದೆ. ಏತನ್ಯಧ್ಯೆ, ಬಾಬರ್ ಅಜಮ್, ಸಹ ಆಟಗಾರನ ಪ್ರೇಯಸಿಯೊಬ್ಬಳ ಜತೆಗೆ ಸೆಕ್ಸ್ಟಿಂಗ್ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.
ಬಾಬರ್ ಅಜಮ್ ಮಹಿಳೆಯೊಬ್ಬಳ ಜತೆ ವಿಡಿಯೊ ಕಾಲ್ ಮಾಡಿ ಮಾತನಾಡುವ ಹಾಗೂ ಅವರಿಗೆ ಸಂದೇಶಗಳನ್ನು ಕಳುಹಿಸುತ್ತಿರುವ ವಿಡಿಯೊ ವೈರಲ್ ಆಗಿದೆ. ವಿಡಿಯೊದಲ್ಲಿರುವ ಮಹಿಳೆ ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರನೊಬ್ಬನ ಪ್ರೇಯಸಿ ಎಂದೂ ಹೇಳಲಾಗಿದೆ.
ಹಾಸಿಗೆ ಮೇಲೆ ಮಲಗಿಕೊಂಡಿರುವ ಬಾಬರ್ ಅಜಮ್, ತಮ್ಮ ಜತೆ ಚಾಟ್ ಮಾಡುವಂತೆ ಒತ್ತಾಯ ಮಾಡುತ್ತಿರುವುದು ಕಂಡು ಬಂದಿದೆ. ಅಲ್ಲದೆ, ವಿಡಿಯೊ ಕಾಲ್ ಮಾಡಿದರೆ, ನಿನ್ನ ಗೆಳೆಯ ಪಾಕಿಸ್ತಾನ ತಂಡದಲ್ಲಿ ಸದಾ ಸ್ಥಾನ ಪಡೆಯುವಂತೆ ನೋಡಿಕೊಳ್ಳುತ್ತೇನೆ ಎಂಬುದಾಗಿಯೂ ಭರವಸೆ ನೀಡುತ್ತಾರೆ.
ಬಾಬರ್ ಅಜಮ್ ಮಾತನಾಡಿದ್ದಾರೆ ಎನ್ನಲಾದ ವಿಡಿಯೊ ಪಾಕಿಸ್ತಾನದಲ್ಲಿ ಸಂಚನಲ ಮೂಡಿಸಿದೆ. ಸಾಕಷ್ಟು ಮಂದಿ ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಂಡು ಟೀಕೆ ವ್ಯಕ್ತಪಡಿಸಿದ್ದಾರೆ.
ಇವೆಲ್ಲದರ ನಡುವೆ ಬಾಬರ್ ಅಜಮ್ ಅಭಿಮಾನಿಗಳು ಇದೊಂದು ಸುಳ್ಳು ಆರೋಪ ಎಂದಿದ್ದಾರೆ. ಬಾಬರ್ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕೆ ಹಾಗೂ ಅವರ ತೇಜೋವಧೆ ಮಾಡುವ ಉದ್ದೇಶದಿಂದ ನಕಲಿ ವಿಡಿಯೊ ಮಾಡಿ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಅಚ್ಚರಿಯೆಂದರೆ ಕಳೆದ ವರ್ಷ ಬಾಬರ್ ಅಜಮ್ ವಿರುದ್ಧ ಹಮಿಜಾ ಮುಖ್ತರ್ ಎಂಬ ಮಹಿಳೆ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ | ENGvsPAK | ಬಾಬರ್ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಹೊಗಳಿದ ವಾನ್‌ಗೆ ನೆಟ್ಟಿಗರಿಂದ ಕಿಡಿ ನುಡಿ