ಬೆನೋನಿ: ‘ಲೇಡಿ ಸೆಹವಾಗ್’ ಖ್ಯಾತಿಯ ಡ್ಯಾಶಿಂಗ್ ಓಪನರ್ ಶಫಾಲಿ ವರ್ಮಾ(Shafali Verma) ಚೊಚ್ಚಲ ಆವೃತ್ತಿಯ 19ರ ವಯೋಮಿತಿ ಮಹಿಳೆಯರ ಟಿ20 ವಿಶ್ವಕಪ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಒಂದೇ ಓವರ್ನಲ್ಲಿ 26 ರನ್ ಕೆಲೆಹಾಕುವ ಮೂಲಕ ವಿಶೇಷ ದಾಖಲೆ ಬರೆದರು.
ದಕ್ಷಿಣ ಆಫ್ರಿಕಾ ವಿರುದ್ಧ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡದ ನಾಯಕಿ ಶಫಾಲಿ ವರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಈ ಸಾಧನೆ ಮಾಡಿದರು. ನ್ತಾಬಿಸೆಂಗ್ ನೀನಿ ಎಸೆದ ಪಂದ್ಯದ 6ನೇ ಓವರ್ನಲ್ಲಿ ಬ್ಯಾಟ್ ಬೀಸಿದ ಶಫಾಲಿ ಮೊದಲ 5 ಎಸೆತಗಳಲ್ಲಿ ಸತತ 5 ಫೋರ್ಗಳನ್ನು ಬಾರಿಸಿದರು. ಅಂತಿಮ ಎಸೆತವನ್ನು ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಒಟ್ಟು 26 ರನ್ ಕಲೆಹಾಕಿದರು. ಈ ಮೂಲಕ ಮಹಿಳೆಯರ ಅಂಡರ್-19 ಪಂದ್ಯದಲ್ಲಿ ಒಂದೇ ಓವರ್ನ ಎಲ್ಲ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಮೊದಲ ಆಟಗಾರ್ತಿ ಎಂಬ ವಿಶ್ವ ದಾಖಲೆಯನ್ನು ಶಫಾಲಿ ವರ್ಮಾ ತಮ್ಮದಾಗಿಸಿಕೊಂಡರು.
ಶಫಾಲಿ ಈ ಪಂದ್ಯದಲ್ಲಿ ಕೇವಲ 16 ಎಸೆತಗಳಿಂದ 45(9 ಬೌಂಡರಿ ಮತ್ತು 1 ಸಿಕ್ಸರ್) ರನ್ ಸಿಡಿಸಿದರು. ಜತೆಗೆ ಬೌಲಿಂಗ್‌ನಲ್ಲಿಯೂ ಮಿಂಚುವ ಮೂಲಕ ಎರಡು ವಿಕೆಟ್ ಉರುಳಿಸಿ ಗಮನ ಸೆಳೆದರು. ಇನ್ನು ಈ ಪಂದ್ಯದಲ್ಲಿ ಭಾರತ ತಂಡ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.
ಇದನ್ನೂ ಓದಿ | Womens U19 T20 World Cup | ಶ್ವೇತಾ, ಶಫಾಲಿ ಭರ್ಜರಿ ಬ್ಯಾಟಿಂಗ್; ಭಾರತಕ್ಕೆ ಏಳು ವಿಕೆಟ್ ಜಯ