Site icon Vistara News

Gautam Gambhir : ಟ್ರೋಫಿ ಗೆದ್ದ ಸಂಭ್ರಮ; ಗಂಭೀರ್​ಗೆ ಖಾಲಿ ಚೆಕ್​ ಕೊಟ್ಟರೇ ಶಾರುಖ್​ ಖಾನ್​ ?

Gautam Gambhir

ಚೆನ್ನೈ: ಕೋಲ್ಕತಾ ನೈಟ್ ರೈಡರ್ಸ್ (KKR) ಮೆಂಟರ್​​ ಗೌತಮ್ ಗಂಭೀರ್ (Gautam Gambhir) ಅವರು ರಾಹುಲ್ ದ್ರಾವಿಡ್ (Rahul Dravid) ಅವರ ನಂತರ ಭಾರತದ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ (Head Coach) ಆಗಲಿದ್ದಾರೆ ಎಂಬ ವರದಿ ಹರಿದಾಡುತ್ತಿವೆ. ಗಂಭೀರ್ ಈ ಜವಾಬ್ದಾರಿ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ ಅವರು ಇನ್ನೂ ಔಪಚಾರಿಕ ಅರ್ಜಿಯನ್ನು ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಲು ಮೇ 27 (ಸೋಮವಾರ) ಕೊನೆಯ ದಿನವಾಗಿದೆ. ಆದರೆ, ಅವರಿಗೆ ಅರ್ಜಿ ಸಲ್ಲಿಸಲು ಕೆಕೆಆರ್ ತಂಡ ಮಾಲೀಕ ಬಿಡುತ್ತಿಲ್ಲ ಎಂಬುದಾಗಿ ವರದಿಯಾಗಿದೆ. ಟ್ರೋಫಿ ಗೆದ್ದ ಬಳಿಕ ತಂಡದಲ್ಲೇ ಇರುವಂತೆ ಅವರು ಒತ್ತಾಯ ಮಾಡುತ್ತಿದ್ದಾರೆ. ಅವರಿಗೆ ಖಾಲಿ ಚೆಕ್ ಆಫರ್ ಮಾಡಿದ್ದಾರೆ ಎಂಬುದಾಗಿ ವರದಿಯಾಗಿದೆ.

ಫೈನಲ್ ಪಂದ್ಯದ ದಿನ ಭಾರತದ ಮಾಜಿ ಆರಂಭಿಕ ಆಟಗಾರ ಗಂಭೀರ್ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ದೈನಿಕ್ ಜಾಗರಣ್ ಪ್ರಕಾರ ಗಂಭೀರ್ ಈ ಸವಾಲಿನ ಬಗ್ಗೆ ಉತ್ಸುಕರಾಗಿದ್ದರೂ, ಅವರನ್ನು ತಮ್ಮನ್ನು ಕರ್ತವ್ಯಗಳಿಂದ ಬಿಡುಗಡೆ ಮಾಡುವಂತೆ ಕೆಕೆಆರ್ ಸಹ ಮಾಲೀಕ ಶಾರುಖ್ ಖಾನ್ ಅವರನ್ನು ಮನವೊಲಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ: Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

ಪ್ರಸಕ್ತ ಐಪಿಎಲ್ ಋತುವಿಗೆ ಮುಂಚಿತವಾಗಿ, ಶಾರುಖ್ ಗಂಭೀರ್ ಅವರನ್ನು ಮುಂದಿನ ಹತ್ತು ವರ್ಷಗಳವರೆಗೆ ಕೆಕೆಆರ್​ಗೆ ಬದ್ಧರಾಗಿರಲು ಕೇಳಿಕೊಂಡಿದ್ದರ. ಅವರಿಗೆ ಖಾಲಿ ಚೆಕ್ ನೀಡಿದ್ದರು ಎಂದು ವರದಿಯಾಗಿದೆ. ಈ ಆಕರ್ಷಕ ಪ್ರಸ್ತಾಪದ ಹೊರತಾಗಿಯೂ, ಗಂಭೀರ್ ರಾಷ್ಟ್ರೀಯ ತಂಡದೊಂದಿಗೆ ಹೊಸ ಸವಾಲಿಗೆ ಸಿದ್ಧರಾಗಿದ್ದಾರೆ.

ಗಂಭೀರ್ ಐಪಿಎಲ್​ನಲ್ಲಿ ತಮ್ಮ ನಾಯಕತ್ವದ ಕೌಶಲ್ಯವನ್ನು ತೋರಿಸಿದ್ದಾರೆ. ಅವರು ಎಲ್ಎಸ್​​ಜಿಯನ್ನು ತಮ್ಮ ಚೊಚ್ಚಲ ಋತುವಿನಲ್ಲಿ ಪ್ಲೇಆಫ್ ಗೆ ಏರಲು ಸಹಾಯ ಮಾಡಿದರು. ಇದೀಗ ಕೆಕೆಆರ್ ತಂಡವನ್ನು ಚಾಂಪಿಯನ್​ ಪಟ್ಟಕ್ಕೆ ಕೊಂಡೊಯ್ದಿದ್ದಾರೆ.

ಕೋಚಿಂಗ್​ ಹುದ್ದೆಗೆ ಯಾರೆಲ್ಲ ಇದ್ದಾರೆ?

ವಿವಿಎಸ್ ಲಕ್ಷ್ಮಣ್, ರಿಕಿ ಪಾಂಟಿಂಗ್, ಜಸ್ಟಿನ್ ಲ್ಯಾಂಗರ್ ಮತ್ತು ಸ್ಟೀಫನ್ ಫ್ಲೆಮಿಂಗ್ ಸೇರಿದಂತೆ ಹಲವಾರು ಹೆಸರುಗಳನ್ನು ಭಾರತದ ಮುಖ್ಯ ಕೋಚ್ ಹುದ್ದೆಗಾಗಿ ಕೇಳಿ ಬರುತ್ತದೆ. ಈ ಮಾಜಿ ಕ್ರಿಕೆಟಿಗರಲ್ಲಿ ಪ್ರತಿಯೊಬ್ಬರೂ ಅನುಭವದ ಸಂಪತ್ತನ್ನು ಮತ್ತು ವಿಶಿಷ್ಟ ಕೋಚಿಂಗ್ ಶೈಲಿಯನ್ನು ಹೊಂದಿದ್ದಾರೆ. ಕ್ರಿಕೆಟ್ ಜಗತ್ತಿನಲ್ಲಿ ಹೆಚ್ಚು ಗೌರವಾನ್ವಿತರಾಗಿರುವ ರಿಕಿ ಪಾಂಟಿಂಗ್ ಇತ್ತೀಚೆಗೆ ಕೋಚಿಂಗ್ ಪಾತ್ರದ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಬಹಿರಂಗಪಡಿಸಿದ್ದರು. ವ್ಯಾಪಕ ಪ್ರಯಾಣದ ಅಗತ್ಯದಿಂದಾಗಿ ಅವರು ಅದನ್ನು ಮುಂದುವರಿಸದಿರಲು ನಿರ್ಧರಿಸಿದರು ಎಂದು ಹೇಳಿದ್ದಾರೆ.

ಊಹಾಪೋಹಗಳ ಹೊರತಾಗಿಯೂ ಬಿಸಿಸಿಐ ಇನ್ನೂ ಯಾವುದೇ ಅಭ್ಯರ್ಥಿಯನ್ನು ವೈಯಕ್ತಿಕವಾಗಿ ಸಂಪರ್ಕಿಸಿಲ್ಲ. ಗೌತಮ್ ಗಂಭೀರ್ ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಗಂಭೀರ್ ಅವರ ಟ್ರ್ಯಾಕ್ ರೆಕಾರ್ಡ್, ವಿಶೇಷವಾಗಿ ಐಪಿಎಲ್​​ನಲ್ಲಿ ಅವರು ಕೆಕೆಆರ್ ತಂಡವನ್ನು ಮುನ್ನಡೆಸಿದ ರೀತಿ ವಿಶೇಷವಾಗಿದೆ.

Exit mobile version