ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ವೇಗದ ಬೌಲರ್ ಶಹೀನ್ ಶಾ ಅಫ್ರಿದಿ (Shaheen Afridi) ಶುಕ್ರವಾರ (ಫೆಬ್ರವರಿ 3ರಂದು) ಮಾಜಿ ಆಲ್ರೌಂಡರ್ ಶಾಹಿದ್ ಅಫ್ರಿದಿಯ ಪುತ್ರಿ ಅನ್ಷಾ ಅಫ್ರಿದಿಯನ್ನು ವಿವಾಹವಾದರು. ಕ್ರಿಕೆಟ್ ಕ್ಷೇತ್ರದ ಪ್ರಮುಖರು ಹಾಗೂ ಗಣ್ಯರು ಮದುವೆ ರಿಸೆಪ್ಷನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕ್ರಿಕೆಟರ್ಗಳಾದ ಸರ್ಫರಾಜ್ ಅಹಮದ್, ನಾಸಿಮ್ ಶಾ, ಬಾಬರ್ ಅಜಮ್, ಶದಾಬ್ ಖಾನ್ ಹಾಗೂ ಸ್ಕ್ವಾಷ್ ಆಟಗಾರ ಜಹಾಂಗೀರ್ ಖಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಪಾಕಿಸ್ತಾನ ಕ್ರಿಕೆಟ್ ತಂಡದ ವಿಕೆಟ್ಕೀಪರ್ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಸಾಮಾಜಿಕ ಜಾಲತಾಣದ ಮೂಲಕ ಯುವ ಜೋಡಿಗೆ ಶುಭಾಶಯ ತಿಳಿಸಿದ್ದಾರೆ.
ಇದನ್ನೂ ಓದಿ : T20 World Cup | ವಿಶ್ವ ಕಪ್ಗೂ ಶಹೀನ್ ಶಾ ಅಫ್ರಿದಿ ಅಲಭ್ಯ? ಲಂಡನ್ಗೆ ಪುನಶ್ಚೇತನಕ್ಕೆ ಕಳುಹಿಸಿದ ಪಿಸಿಬಿ
ಶಹೀನ್ ಶಾ ಅಫ್ರಿದಿ ಹಾಗೂ ಅನ್ಷಾ ಅಫ್ರಿದಿ ಎರಡು ವರ್ಷಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಪಾಕಿಸ್ತಾನ ತಂಡದ ಪ್ರಧಾನ ವೇಗಿ ಎನಿಸಿಕೊಂಡಿರುವ ಶಹೀನ್ ಶಾ ಅಫ್ರಿದಿ ಕಳೆದ ವರ್ಷ ಗಾಯದ ಸಮಸ್ಯೆಗೆ ಒಳಗಾಗಿದ್ದರು. ಮಂಡಿ ನೋವಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಅವರು ಏಷ್ಯಾ ಕಪ್ನಲ್ಲಿ ಆಡಿರಲಿಲ್ಲ. ಬಳಿಕ ಟಿ20 ವಿಶ್ವ ಕಪ್ನಲ್ಲಿ ಆಡಿದ್ದರು.