ದುಬೈ : ಪಾಕಿಸ್ತಾನ ತಂಡದ ಪ್ರಮುಖ ಬೌಲರ್ ಶಹೀನ್ ಶಾ ಅಫ್ರಿದಿ ಏಷ್ಯಾ ಕಪ್ನಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದು, ಮುಂದಿನ ಅಕ್ಟೋಬರ್ನಲ್ಲಿ ನಡೆಯುವ ಟಿ20 ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವ ಭಾಗ್ಯದಿಂದ ವಂಚಿತರಾಗುವ ಸಾಧ್ಯತೆ ಎಂಬುದಾಗಿ ಹೇಳಲಾಗುತ್ತಿದೆ. ಬಲಗಾಲು ನೋವಿಗೆ ಒಳಗಾಗಿರುವ ಅವರು ಇನ್ನೂ ಗುಣಮುಖರಾಗದ ಕಾರಣ ಅವರನ್ನು ಮತ್ತೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಲಂಡನ್ಗೆ ಕಳುಹಿಸಿದೆ.
ಶ್ರೀಲಂಕಾ ಪ್ರವಾಸದಲ್ಲಿ ಫೀಲ್ಡೀಂಗ್ ಮಾಡುವಾಗ ಶಹೀನ್ ಶಾ ಅಫ್ರಿದಿ ಬಲಗಾಲು ನೋವಿಗೆ ಒಳಗಾಗಿದ್ದರು. ಅರ್ಧದಲ್ಲೇ ತವರಿಗೆ ವಾಪಸಾಗಿದ್ದ ಅವರನ್ನು ಇಂಗ್ಲೆಂಡ್ಗೆ ಪುನಶ್ಚೇತನಕ್ಕೆ ಕಳುಹಿಸಲಾಗಿತ್ತು. ಪಾಕಿಸ್ತಾನ ತಂಡ ಸರಣಿಗಾಗಿ ನೆದರ್ಲೆಂಡ್ಸ್ ಪ್ರವಾಸ ಕೈಗೊಳ್ಳುವಾಗ ಅವರನ್ನೂ ಇಂಗ್ಲೆಂಡ್ಗೆ ಕಳುಹಿಸಿ ಪುನಶ್ಚೇತನ ಒದಗಿಸಲಾಗಿತ್ತು. ಬಳಿಕ ಏಷ್ಯಾ ಕಪ್ಗೆ ತಂಡವನ್ನು ರಚಿಸುವಾಗ ಅವರನ್ನು ಮತ್ತೆ ಪಾಕಿಸ್ತಾನಕ್ಕೆ ಬಂದಿದ್ದರು. ಆದರೆ, ಗಾಯದ ಸಮಸ್ಯೆಯಿಂದ ಪೂರ್ಣ ಗುಣಮುಖರಾಗದ ಕಾರಣ ಏಷ್ಯಾ ಕಪ್ ತಂಡಕ್ಕೆ ಆಯ್ಕೆ ಮಾಡಿಕೊಂಡಿರಲಿಲ್ಲ. ಆದಾಗ್ಯೂ ಪಾಕಿಸ್ತಾನ ತಂಡದ ಜತೆ ದುಬೈಗೆ ಕಳುಹಿಸಲಾಗಿತ್ತು. ಅವರು ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಮತ್ತೆ ಇಂಗ್ಲೆಂಡ್ಗೆ ಕಳುಹಿಸಲಾಗಿದೆ.
ಅಕ್ಟೋಬರ್ 22ರಂದು ಟಿ20 ವಿಶ್ವ ಕಪ್ನ ಪ್ರಮುಖ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿದೆ. 23ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಆ ದಿನಕ್ಕೆ ಶಹೀನ್ ಸಿದ್ಧಗೊಳ್ಳಬೇಕಾಗಿದೆ. ಅದಕ್ಕೆ ಇನ್ನೂ ಒಂದೂವರೆ ತಿಂಗಳು ಬಾಕಿ ಇದೆ. ಆ ವೇಳೆಗೂ ಅವರ ಸಿದ್ಧರಾಗದಿದ್ದರೆ ಟಿ20 ವಿಶ್ವ ಕಪ್ನಲ್ಲಿ ಪಾಲ್ಗೊಳ್ಳುವ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆ.
ಇದನ್ನೂ ಓದಿ | Sourav Ganguly | ಶಹೀನ್ ಅಫ್ರಿದಿ ಅಲಭ್ಯತೆ ದೊಡ್ಡ ಸಂಗತಿಯಲ್ಲ, ಒಬ್ಬನಿಂದ ಗೆಲುವು ಎಂಬುದು ತಪ್ಪು