Site icon Vistara News

Shahid Afridi | ಪಾಕಿಸ್ತಾನ ಕ್ರಿಕೆಟಿಗರಿಗೆ ಖಡಕ್​ ಸಂದೇಶ ನೀಡಿದ ಚೀಫ್ ಸೆಲೆಕ್ಟರ್​ ಶಾಹಿದ್ ಅಫ್ರಿದಿ!

Shahid Afridi

Shahid Afridi

ಕರಾಚಿ: ಪಾಕಿಸ್ತಾನ ರಾಷ್ಟ್ರೀಯ ಟಿ20 ತಂಡಕ್ಕೆ ಬ್ಯಾಟ್ಸ್​ಮನ್​​​​ಗಳ​ ಆಯ್ಕೆ ಮಾನದಂಡದ ಬಗ್ಗೆ ಪಾಕಿಸ್ತಾನದ ಹಂಗಾಮಿ ಚೀಫ್​ ಸೆಲೆಕ್ಟರ್​​ ಶಾಹಿದ್ ಅಫ್ರಿದಿ(Shahid Afridi) ದಿಟ್ಟ ಹೇಳಿಕೆ ನೀಡಿದ್ದಾರೆ. ಆ ಮೂಲಕ ಪಾಕ್​ ಆಟಗಾರರಿಗೆ ಅಫ್ರಿದಿ, ಖಡಕ್​ ಸಂದೇಶ ನೀಡಿದ್ದಾರೆ.

ನಜೀಮ್ ಸೇಥಿ ಅಧ್ಯಕ್ಷರಾಗಿ ನೇಮಕವಾದ ಬಳಿಕ, ಶಾಹಿದ್ ಅಫ್ರಿದಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯಲ್ಲಿ ಹಂಗಾಮಿ ಮುಖ್ಯ ಆಯ್ಕೆಗಾರರಾಗಿ ನೇಮಕಗೊಂಡರು. ಇದೀಗ ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ಸುಧಾರಣೆ ಮಾಡುವ ಸಲುವಾಗಿ ಅವರು ಹಲವು ಮಹತ್ವದ ಬದಲಾವಣೆ ಮಾಡಲು ಮುಂದಾಗಿದ್ದಾರೆ.

ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆಯಾಗಲು ಅಫ್ರಿದಿ ಹೊಸ ಮಾನದಂಡವನ್ನು ತಿಳಿಸಿದ್ದು, ದೇಶೀಯ ಕ್ರಿಕೆಟ್​ನಲ್ಲಿ 135ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ ಇದ್ದರೆ, ಅಂತಹ ಆಟಗಾರರನ್ನು ಟಿ20 ತಂಡದ ಆಯ್ಕೆಗಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅಫ್ರಿದಿ “ರಾಷ್ಟ್ರೀಯ​ ತಂಡಕ್ಕೆ ಆಯ್ಕೆ​ಯಾಗುವ ಆಸೆ ಇರುವ ಆಟಗಾರರು ತಮ್ಮ ಸ್ಟ್ರೈಕ್​​​ರೇಟ್​ ಹೆಚ್ಚಿಸಿಕೊಳ್ಳಿ. ಇಲ್ಲವಾದರೆ ಯಾರನ್ನೂ ಆಯ್ಕೆ ಮಾಡುವುದಿಲ್ಲ. ಏಕೆಂದರೆ ಅಂತಹ ಆಟಗಾರರಿಂದ ತಂಡಕ್ಕೆ ಹಿನ್ನಡೆಯಾಗುತ್ತದೆ” ಎಂದು ಹೇಳಿದ್ದಾರೆ.

ತೀರ್ಮಾನದ ಬಗ್ಗೆ ಗೊಂದಲ
ಅಫ್ರಿದಿ ತಿಳಿಸಿರುವ 135 ಕ್ಕಿಂತ ಕಡಿಮೆ ಸ್ಟ್ರೈಕ್‌ ರೇಟ್‌ ತೀರ್ಮಾನದ ಬಗ್ಗೆ ಹಲವು ಗೊಂದಲಗಳಿವೆ. ಸದ್ಯ ಪಾಕಿಸ್ತಾನ ಟಿ20 ತಂಡದಲ್ಲಿರುವ ಕಡಿಮೆ ಸ್ಟ್ರೈಕ್ ಹೊಂದಿರುವ ಆಟಗಾರರಿಗೆ ಇದು ಅನ್ವಯವಾಗಲಿದೆಯಾ ಎನ್ನುವುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಒಂದೊಮ್ಮೆ ಈ ನಿಯಮ ಎಲ್ಲರಿಗೂ ಅನ್ವಯವಾದರೆ ರಾಷ್ಟ್ರೀಯ ತಂಡದಲ್ಲಿ ಕಡಿಮೆ ಸ್ಟ್ರೈಕ್‌ ರೇಟ್‌ ಹೊಂದಿರುವ ಹಲವು ಆಟಗಾರರು ತಂಡದಿಂದ ಹೊರಬೀಳಲಿದ್ದಾರೆ.

ಇದನ್ನೂ ಓದಿ | Ramiz Raja | ಭಾರತದ ಜತೆ ಕ್ರಿಕೆಟ್​ ಆಡದಿದ್ದರೆ ಪಾಕ್ ಕ್ರಿಕೆಟ್​ ಮಂಡಳಿ ಕುಸಿತ ಗ್ಯಾರಂಟಿ: ರಮೀಜ್​ ರಾಜಾ

Exit mobile version